'ರೈಡರ್' ಸ್ಯಾಂಡಲ್ವುಡ್ನ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಕನ್ನಡ ಅಲ್ಲದೇ ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಕ್ರೇಜ್ ಹುಟ್ಟು ಹಾಕಿರುವ ಈ ಸಿನಿಮಾದ ಆಫೀಶಿಯಲ್ 'ಟ್ರೈಲರ್' ಅನಾವರಣಗೊಂಡಿದೆ.
ನಿಖಿಲ್ ಈ ಸಿನಿಮಾದಲ್ಲಿ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ಕಾಣಿಸಿದ್ದಾರೆ. ಕಮರ್ಷಿಯಲ್ ಸಿನಿಮಾಗೆ ಬೇಕಾಗುವ ಎಲ್ಲಾ ರೀತಿಯ ಎಲಿಮೆಂಟ್ಸ್‌ನ ರೈಡರ್ ಚಿತ್ರದ ಟ್ರೈಲರ್ ಒಳಗೊಂಡಿದೆ.
- " class="align-text-top noRightClick twitterSection" data="">
ಮಾಸ್ ಎಂಟ್ರಿ, ವಾಹ್ ಎನಿಸುವ ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ನಿಖಿಲ್ ಸಖತ್ತಾಗಿ ಸ್ಟಂಟ್ಸ್ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ನಿಖಿಲ್ ಎದುರಿಗೆ, ಕೆಜಿಎಫ್ ಖ್ಯಾತಿಯ ಗರುಡ ರಾಮ್ ಖಡಕ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಟ್ರೈಲರ್ನಲ್ಲಿ ನಿಖಿಲ್ ಹಾಗೂ ಗರುಡ ರಾಮ್ ಡೈಲಾಗ್‌ಗಳು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿವೆ.
ಹೊಡಿದ್ರೆ ಆನೆನೇ ಹೊಡಿಬೇಕು, ಕೆಡವಿದರೆ ಬೆಟ್ಟನೇ ಕೆಡವಬೇಕು. ಆನೆ ಹೊಡಿಯೋಕೆ ಒಂದು ಬುಲೆಟ್, ಬೆಟ್ಟ ಹೊಡಿಯೋಕೆ ಡೈನಾಮೈಟ್ ಇಂತಹ ಪಂಚಿಂಗ್ ಡೈಲಾಗ್‌ಗಳು ಟ್ರೈಲರ್ನಲ್ಲಿವೆ.
ನಿಖಿಲ್ ಜತೆ ನಾಯಕಿ ಕಾಶ್ಮೀರಿ ಪರ್ದೇಸಿ ಲವ್ ಕೆಮಿಸ್ಟ್ರಿ ಬೊಂಬಾಟ್ ಆಗಿ ವರ್ಕ್‌ಔಟ್ ಆಗಿದೆ. ಲವ್ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್ ಟ್ರೈಲರ್‌ನಲ್ಲಿದೆ. ಇನ್ನು ಈ ಚಿತ್ರದಲ್ಲಿ ಮತ್ತೊಬ್ಬ ನಾಯಕಿಯಾಗಿ ಅನುಷಾ ರೈ ಗಮನ ಸೆಳೆಯುತ್ತಾರೆ.
ಉಳಿದಂತೆ ಚಿಕ್ಕಣ್ಣ ಹಾಗೂ ಶಿವರಾಜ್ ಕೆ.ಆರ್.ಪೇಟೆ ಹಾಸ್ಯ ನೋಡುಗರಿಗೆ ಕಚಗುಳಿ ಇಡುತ್ತವೆ. ಇದರ ಜತೆಗೆ ದತ್ತಣ್ಣ, ಶೋಭರಾಜ್, ರಾಜೇಶ್ ನಟರಂಗ, ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ, ಸಂಪದ ಹುಲಿವಾನ, ನಿಹಾರಿಕ ಸೇರಿದಂತೆ ದೊಡ್ಡ ತಾರಬಳಗ ಚಿತ್ರದಲ್ಲಿದೆ.
ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ರೈಡರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ಗೆಳೆಯ ಸುನೀಲ್ ಗೌಡ ಹಾಗೂ ಲಹರಿ ಆಡಿಯೋ ಸಂಸ್ಥೆಯಡಿ ಈ ಸಿನಿಮಾವನ್ನ ನಿರ್ಮಾಣ ಮಾಡಲಾಗಿದೆ.
ರೈಡರ್ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನ, ಶ್ರೀಶ ಕುದುವಳ್ಳಿ ಕ್ಯಾಮೆರಾ, ಶರತ್ ಚಕ್ರವರ್ತಿ ಸಂಭಾಷಣೆ, ಭೂಷನ್ ಕೋರಿಯೋಗ್ರಫಿ, ಡಾ.ರವಿವರ್ಮ ಸಾಹಸ ಚಿತ್ರಕ್ಕಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದಾರೆ.
ಡಿ.24ಕ್ಕೆ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರೈಡರ್ ಚಿತ್ರ ಬಿಡುಗಡೆಯಾಗಲಿದೆ. 'ಸೀತಾರಾಮ ಕಲ್ಯಾಣ' ಸಿನಿಮಾ ಬಳಿಕ ನಿಖಿಲ್ ಕುಮಾರಸ್ವಾಮಿ ಅಭಿನಯಿಸಿರುವ ರೈಡರ್ ಸಿನಿಮಾ ಅವರ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಹುಟ್ಟು ಹಾಕಿದೆ.
ಇದನ್ನೂ ಓದಿ: ಯುವರಾಜನ 'ರೈಡರ್' ಸಿನಿಮಾದ ಡವ್ವ ಡವ್ವ ಹಾಡಿನ ಮೇಕಿಂಗ್ ಝಲಕ್!