ಸುವರ್ಣ ವಾಹಿನಿಯಲ್ಲಿ ಗುಳಿಕೆನ್ನೆ ಹುಡುಗ ವಿಜಯ್ ಸೂರ್ಯ ನಾಯಕನಾಗಿ ನಟಿಸುತ್ತಿರುವ 'ಪ್ರೇಮಲೋಕ' ಧಾರಾವಾಹಿ ತನ್ನದೇ ಆದ ವೀಕ್ಷಕರನ್ನು ಹೊಂದಿದೆ. ಧಾರಾವಾಹಿಯಲ್ಲಿ ಹೊಸ ಪಾತ್ರಗಳ ಎಂಟ್ರಿ ಆಗುತ್ತಿದೆ. ಇದೀಗ ಮತ್ತೊಂದು ಹೊಸ ಪಾತ್ರ ಧಾರಾವಾಹಿ ತಂಡಕ್ಕೆ ಸೇರಿದ್ದಾರೆ.
ಕುಲವಧು ಖ್ಯಾತಿಯ ವೇದಾಂತ್ ಅಲಿಯಾಸ್ ಶಿಶಿರ್ ಶಾಸ್ತ್ರಿ ಧಾರಾವಾಹಿಗೆ ಆಗಮಿಸಿದ್ದಾರೆ. ಧಾರಾವಾಹಿಯಲ್ಲಿ ಹೊಸ ಅಲೆ ಎಂಬ ಅಧ್ಯಾಯ ಆರಂಭವಾಗಿದ್ದು, ಶಿಶಿರ್ ಅವರಿಗೆ ಅಪಘಾತವಾಗಿ ಬುದ್ಧಿ ಭ್ರಮಣೆಯಾಗಿರುತ್ತದೆ. ಶಿಶಿರ್ ಅವರ ಮನೆಗೆ ನಾಯಕ ಸೂರ್ಯ ಹೋಗುವ ಸನ್ನಿವೇಶ ಸೃಷ್ಟಿಯಾಗಿರುತ್ತದೆ. ಶಿಶಿರ್ಗೆ ಮತ್ತೆ ಬುದ್ಧಿ ಬಂದಾಗ ಏನೆಲ್ಲಾ ನಡೆಯುತ್ತದೆ ಎಂಬುದೇ ಧಾರಾವಾಹಿ ಕಥೆ. ಅತಿಥಿ ಪಾತ್ರದಲ್ಲಿ ನಟಿಸಲು ಹೋಗಿರುವ ಶಿಶಿರ್ ಧಾರಾವಾಹಿ ಕಥೆಗೆ ಟ್ವಿಸ್ಟ್ ನೀಡಿದ್ದಾರೆ. ನಾನು ಹಾಗೂ ವಿಜಯ್ ಸೂರ್ಯ ಇಬ್ಬರೂ ಆಪ್ತ ಗೆಳೆಯರು. ಈ ಮೊದಲು ಕೂಡಾ ಸಾಕಷ್ಟು ಬಾರಿ ಒಟ್ಟಿಗೆ ಕೆಲಸ ಮಾಡಿದ್ದೆವು. ಈಗ ಮತ್ತೆ ಈ ಧಾರಾವಾಹಿ ಮೂಲಕ ಒಟ್ಟಿಗೆ ನಟಿಸುತ್ತಿದ್ದೇವೆ. ನಮ್ಮನ್ನು ತೆರೆ ಮೇಲೆ ನೋಡಿ ಎಂದು ಶಿಶಿರ್ ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ.