ETV Bharat / sitara

'ವೀಕೆಂಡ್ ವಿಥ್ ರಮೇಶ್​'ಗೆ ಬರಬೇಕಂತೆ 'ದಿ ವಾಲ್​',  ದ್ರಾವಿಡ್​ ಕರೆತರಲು ನ್ಯೂ ಪ್ಲಾನ್​

ರಾಹುಲ್ ದ್ರಾವಿಡ್​ 'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮಕ್ಕೆ ಬರಬೇಕು. ಅವರ ಸಾಧನೆಯ ಹಾದಿಯನ್ನು ರೆಡ್​ ಸೀಟ್​ ಮೇಲೆ ಕುಳಿತು ಹೇಳಿಕೊಳ್ಳಬೇಕು ಎಂಬುದು ಕನ್ನಡಿಗರ ಮನದಿಂಗಿತ. ಆದರೆ, ಈ ಬಯಕೆ ನಾಲ್ಕನೇ ಸೀಸನ್​ನಲ್ಲಿಯೂ ಈಡೇರುತ್ತಿಲ್ಲ. ​

author img

By

Published : Apr 16, 2019, 7:02 PM IST

ವೀಕೆಂಡ್ ವಿಥ್ ರಮೇಶ್​

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್​ ಅವರನ್ನು ಕರೆತನ್ನಿ ಎನ್ನುವ ಕೂಗು ಪ್ರಾರಂಭದಿಂದಲೂ ಕೇಳಿ ಬರುತ್ತಿದೆ. ಆದರೆ,ಈವರೆಗೂ ವಾಲ್ ಆಫ್​ ಕ್ರಿಕೆಟ್​ನ್ನು ಸಾಧಕರ ಸೀಟಿನಲ್ಲಿ ಕಣ್ಣುಂಬಿಕೊಳ್ಳುವ ಸೌಭಾಗ್ಯ ಕೂಡಿ ಬಂದಿಲ್ಲ.ಈ ಬಾರಿಯೂ ಕನ್ನಡಿಗರ ಕನಸು ನನಸಾಗುವ ಲಕ್ಷಣಗಳೂ ಗೋಚರಿಸುತ್ತಿಲ್ಲ.

ಹೌದು, ಕಳೆದ ಮೂರು ಸೀಸನ್​​ಗಳಿಂದ ಹೆಮ್ಮೆಯ ಕನ್ನಡಿಗ ದ್ರಾವಿಡ್​ ಬರುವಿಕೆಗೆ ವೀಕ್ಷಕರು ಕಾಯುತ್ತಿದ್ದಾರೆ. ಪ್ರತಿ ಸೀಸನ್​ ಪ್ರಾರಂಭಕ್ಕು ಮುನ್ನ ರಾಹುಲ್ ದ್ರಾವಿಡ್​ ಅವರನ್ನು ಕರೆತನ್ನಿ ಎನ್ನುವ ಕರೆಗಳು ​​ಜೀ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಲೆಕ್ಕವಿಲ್ಲದಷ್ಟು ಬಂದಿವೆ. ವಾಹಿನಿ ಕೂಡ ರಾಹುಲ್ ದ್ರಾವಿಡ್ ಅವರಿಗೆ ಪತ್ರದ ಮೂಲಕ ಸಂಪರ್ಕ ಸಹ ಮಾಡಿದೆಯಂತೆ. ಆದರೆ, ಇದಕ್ಕೆ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ವಂತೆ.

Raghavendra
​​ಜೀ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು

ಈ ಬಗ್ಗೆ ಮಾತನಾಡಿರುವ ರಾಘವೇಂದ್ರ ಹುಣಸೂರು, ದ್ರಾವಿಡ್​ ಅವರನ್ನು ಕರೆತರಲು ಇರುವುದು ಒಂದೇ ಮಾರ್ಗ. ಟ್ವಿಟ್ಟರ್​ನಲ್ಲಿ 'We want Rahul' ಅಂತಾ ಅಭಿಯಾನ ಪ್ರಾರಂಭಿಸಬೇಕು. ಇದಕ್ಕೆ ಕನ್ನಡಿಗರಿಂದ ವ್ಯಕ್ತವಾಗುವ ಬೆಂಬಲವನ್ನು ಸಾಕ್ಷಿಯಾಗಿ ದ್ರಾವಿಡ್ ಅವರ ಮುಂದಿಟ್ಟು, ಅವರನ್ನು ಮನವೋಲಿಸಬೇಕು ಎನ್ನುತ್ತಾರೆ. ಈ ಬಗ್ಗೆ ಗಂಭೀರವಾಗಿಯೇ ಆಲೋಚಿಸಿರುವ ವಾಹಿನಿ, ‘ನಿಖಿಲ್ ಎಲ್ಲಿದ್ದಿಯಪ್ಪ’ ಎನ್ನೋ ಹಾಗೆ ನಾವು 'ರಾಹುಲ್ ಎಲ್ಲಿದ್ದಿಯಪ್ಪ' ಅಂತ ಮಾಡಿದ್ರೆ ಒಳಿತು. ಆದರೆ, ಅದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ಹೊಂದಿಕೆ ಆಗುವ ಸಾಧ್ಯತೆ ಇದೆ. ಹಾಗಾಗಿ ಈಗ ಡಬ್ಲೂ ಡಬ್ಲೂ ರಾಹುಲ್ (ವೀ ವಾಂಟ್ ರಾಹುಲ್) ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟು ಜನರ ಅಪೇಕ್ಷೆ ತಿಳಿಯಲು ಸಿದ್ಧವಾಗಿದೆಯಂತೆ.

ಇನ್ನು ವೀಕೆಂಡ್ ವಿಥ್ ರಮೇಶ್​ ಸೀಸನ್​ 4 ಮುಗಿಯುವ ಸಮಯಕ್ಕೆ ರಾಘವೇಂದ್ರ ಹುಣಸೂರು, 5ನೇ ಕಂತು ಹೇಗಿರಲಿದೆ ಎಂಬುದರ ಬಗ್ಗೆ ಕೇಳಲಿದ್ದಾರಂತೆ. ಈ ಕಾರ್ಯಕ್ರಮಕ್ಕೆ 4 ಕಂತುಗಳ ವ್ಯಕ್ತಿಗಳನ್ನು ಕರೆಸುವ ಯೋಜನೆ ಸಹಇದೆಯಂತೆ. ಅದೇ ಸಮಯಕ್ಕೆ ಪುಸ್ತಕ ರೂಪದಲ್ಲಿ ಹಾಡು ಡಿವಿಡಿ ರೂಪದಲ್ಲಿ ‘ವೀಕೆಂಡ್ ವಿತ್ ರಮೇಶ್’ ಬರಲಿದೆಯಂತೆ.

---------- Forwarded message ---------
From: pravi akki <praviakki@gmail.com>
Date: Tue, Apr 16, 2019, 9:27 AM
Subject: Fwd: rahul dravid to week end with ramesh report
To: Praveen Akki <praveen.akki@etvbharat.com>

---------- Forwarded message ---------
From: Vasu K.S. Vasu <sasuvas@gmail.com>
Date: Tue, Apr 16, 2019, 8:07 AM
Subject: rahul dravid to week end with ramesh report
To: <praveen.akki@etvbharath.com>, pravi akki <praviakki@gmail.com>, EenaduIndia kannada <kannadadesk@gmail.com>

ರಾಹುಲ್ ಎಲ್ಲಿದ್ದಿಯಪ್ಪ.... ಈ ಯೋಚನೆ ಕಷ್ಟ

ವೀಕ್ ಎಂಡ್ ವಿತ್ ರಮೇಶ್ ಜನಪ್ರಿಯ ಕಾರ್ಯಕ್ರಮಕ್ಕೆ ಜೀ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಕೆಲವು ವ್ಯಕ್ತಿಗಳ ಬೇಡಿಕೆ ಬಂದಿರುವುದರಲ್ಲಿ ಜನಪ್ರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಹೆಸರುಗಳು ಇವೆ. ರಾಹುಲ್ ದ್ರಾವಿಡ್ ಅವರನ್ನು ಕರೆತರಲು ಪತ್ರದ ಮೂಲಕ ಸಂಪರ್ಕ ಸಹ ಮಾಡಲಾಗಿದೆ.

ರಾಹುಲ್ ಅವರನ್ನು ಕರೆದು ಸಾಧಕರ ಖುರ್ಚಿಯಲ್ಲಿ ಕೂಡಿಸಲು ಒಂದು ಟ್ವಿಟ್ಟರ್ ಚಳುವಳಿ ಮಾಡಿದರೆ ಹೇಗೆ ಅಂದಾಗ ಮೊದಲು ಹೊಳದದ್ದು ರಾಹುಲ್ ಎಲ್ಲಿದ್ದಿಯಪ್ಪ ಅಂತ. ಆದರೆ ಸಧ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಅದನ್ನು ಕೈ ಬಿಡಲಾಗಿದೆ. ಅದಕ್ಕೆ ಕಾರಣ ಗೊತ್ತೇ ಇದೆ. ಇದರ ಜೊತೆಗೆ ಒಂದು ದಿವಸ ಆ ಸಾಧಕರ ಖುರ್ಚಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಂದು ಕೂರುವುದಕ್ಕೂ ಯೋಚನೆ ಇದೆ.

ನಿಕಿಲ್ ಎಲ್ಲಿದ್ದಿಯಪ್ಪ ಈಗ ಎಲ್ಲ ಕಡೆ ಪ್ರಸಿದ್ದ ಆಗಿದೆ. ನಾವು ರಾಹುಲ್ ಎಲ್ಲಿದ್ದಿಯಪ್ಪ ಅಂತ ಮಾಡಿದರೆ ಅದು ಭಾರತೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ಹೊಂದಿಕೆ ಆಗುವ ಸಾಧ್ಯತೆ ಇದೆ. ಹಾಗಾಗಿ ಈಗ ಡಬಲ್ಯು ಡಬಲ್ಯು ರಾಹುಲ್ (ವೀ ವಾಂಟ್ ರಾಹುಲ್) ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಿಟ್ಟು ಜನರ ಅಪೇಕ್ಷೆಯನ್ನು ತಿಳಿಯಲು ಸಿದ್ದವಾಗಿದೆ.

ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು 4ನೆ ಕಂತು ಮುಗಿಯುವ ಸಮಯಕ್ಕೆ ಜನರ ಮಧ್ಯೆ ಬಂದು 5ನೆ ಕಂತಿನಿಂದ ಹೇಗಿರಬೇಕು ಎಂದು ಕೇಳಲಿದ್ದಾರೆ. ಆಗ 4 ಕಂತುಗಳ ವ್ಯಕ್ತಿಗಳನ್ನು ಕರೆಸುವ ಯೋಜನೆ ಇದೆ. ಅದೇ ಸಮಯಕ್ಕೆ ಪುಸ್ತಕ ರೂಪದಲ್ಲಿ ಹಾಡು ಡಿ ವಿ ಡಿ ರೂಪದಲ್ಲಿ ವೀಕ್ ಎಂಡ್ ವಿತ್ ರಮೇಶ್ ಬರುತ್ತದೆ.

ಜನಪ್ರಿಯತೆಯಲ್ಲಿ ಜೀ ವಾಹಿನಿಯ ಎಲ್ಲ ಕಾರ್ಯಕ್ರಮಗಳು ಒಂದು ಕಡೆ ಆದರೆ ವೀ ಎಂಡ್ ವಿತ್ ರಮೇಶ್ ಒಂದೇ ಸರಿದೂಗುವ ಹಾಗೆ ಜನಪ್ರಿಯತೆ ಹಾಗೂ ಹಣ ಬಾಚಿದೆ ಎಂದು ರಾಘವೇಂದ್ರ ಹುಣಸೂರು ಒಪ್ಪುತ್ತಾರೆ. ವೀಕ್ ಎಂಡ್ ವಿತ್ ರಮೇಶ್ – ನಂಬರ್ ಒನ್ ಬ್ಲಾಕ್ ಬಾಸ್ಟರ್ ಎಂಬುದು ಅವರ ಅಭಿಪ್ರಾಯ. ಜಿ ಆರ್ ಪಿ ರೇಟಿಂಗ್ ಅಲ್ಲಿ 104 ರಿಂದ 650 ಕ್ಕೆ ಜಿಗಿದಿದೆ ಎಂಬುದು ಅವರ ಮತ್ತೊಂದು ಖುಷಿ.

ಇದೆ ಮೊದಲ ಬಾರಿಗೆ ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಹೊರಾಂಗಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಡಿಕೇರಿ ಬಳಿಯ ಮಂದಾಲಪಟ್ಟಿಯಲ್ಲಿ ಸೆಟ್ ರಚನೆ ಮಾಡಲಾಗಿದೆ. ರಮೇಶ್ ಅರವಿಂದ್ ಅವರ ಒಂದು ನಿಮಿಷದ ಪ್ರೋಮೊ ಸಹ ಒಂದೇ ಶಾಟ್ ಅಲ್ಲಿ ಸತ್ಯ ಹೆಗ್ಡೆ ಅವರು ಚಿತ್ರೀಕರಿಸಿದ್ದಾರೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.