ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ 'ಪಾಪ ಪಾಂಡು' ಧಾರಾವಾಹಿಯಲ್ಲಿ ಈ ಹಿಂದೆ ಶಾಲಿನಿ ಅಲಿಯಾಸ್ ಪಾಚು ಶ್ರೀಮತಿ ಅನಾರೋಗ್ಯದ ಹಿನ್ನೆಲೆಯಲ್ಲಿ ಅಭಿನಯಿಸಿರಲಿಲ್ಲ. ಆದರೆ ಇದೀಗ ಪಾಚುವಿನ ನಾದಿನಿಯಾಗಿ ಧಾರಾವಾಹಿಯಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಎಂಟ್ರಿ ಕೊಡಲಿದ್ದಾರೆ.
ಸಿಹಿಕಹಿ ಚಂದ್ರು ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಪಾಪ ಪಾಂಡು’ ಧಾರಾವಾಹಿ ಎಲ್ಲರ ಮನೆ ಮಾತಾಗಿದೆ. ಇನ್ನು ಈ ಬಗ್ಗೆ ಮಾತನಾಡಿದ ಚಂದ್ರು, ಶಾಲಿನಿಗೆ ಆರೋಗ್ಯ ಸಮಸ್ಯೆ ಇರೋ ಕಾರಣ ಅಭಿನಯಿಸಲು ಆಗುತ್ತಿಲ್ಲ. ಆದರೆ ಅವರ ಪಾತ್ರಕ್ಕೆ ಬೇರೆಯವರನ್ನು ತರುವುದು ನಮ್ಮ ಸಂಸ್ಥೆಯಿಂದ ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಶ್ರೀಮತಿ ಅಂದರೆ ಶಾಲಿನಿ ಅವರ ನಾದಿನಿ ಪಾತ್ರದಲ್ಲಿ ನಯನ ಎಂಟ್ರಿಯಾಗಲಿದ್ದಾರೆ. ಆದರೆ ಇದು ಬದಲಾವಣೆ ಅಲ್ಲ. ಶಾಲಿನಿ ಅವರ ಅನುಪಸ್ಥಿತಿಯನ್ನು ನಯನ ತುಂಬಲಿದ್ದು, ಕೆಲ ಬದಲಾವಣೆಗಳು ಪ್ರೇಕ್ಷಕರಿಗೆ ಖುಷಿ ನೀಡಲಿದೆ ಎಂದರು.

ನಯನ ಎಂಟ್ರಿಯು ಕನ್ನಡದ ಹಳೆ ಸಿನಿಮಾ ಹಾಡು 'ಎಂದೆಂದೂ ನಿನ್ನನು ಮರೆತೂ...' ಮೂಲಕ ಆಗಲಿದ್ದು ಮನರಂಜನೆ ಮತ್ತಷ್ಟು ಹೆಚ್ಚಾಗಲಿದೆ.