ಲಾಕ್ಡೌನ್ ಸಮಯದಲ್ಲಿ ಒಂದಷ್ಟು ಧಾರಾವಾಹಿಗಳು ಮುಗಿದಿರುವುದು ವೀಕ್ಷಕರಿಗೆ ಬೇಸರ ತಂದಿದೆ ನಿಜ. ಆದರೆ ಇದರ ನಡುವೆ ಖ್ಯಾತ ಧಾರಾವಾಹಿಯೊಂದು ಪರಭಾಷೆಗೆ ಡಬ್ಬಿಂಗ್ ಆಗುತ್ತಿರುವುದು ಧಾರಾವಾಹಿಪ್ರಿಯರಿಗೆ ಸಂತೋಷ ನೀಡಿದೆ.
- " class="align-text-top noRightClick twitterSection" data="">
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ-2 ಇದೀಗ ಮಲಯಾಳಂ ಭಾಷೆಗೆ ಡಬ್ಬಿಂಗ್ ಆಗುತ್ತಿದೆ. 'ನಾಗಮಣಿಯ ದುರಾಸೆಗಾಗಿ ಹೊಂಚು ಹಾಕುತ್ತಿದ್ದ ಮನುಷ್ಯರು ಅದನ್ನು ಕದಿಯುವ ಆಲೋಚನೆ ಮಾಡುತ್ತಾರೆ. ಅದಕ್ಕಾಗಿ ತಂತ್ರವನ್ನು ರೂಪಿಸಿ ನಾಗಲೋಕಕ್ಕೆ ಕಾಲಿಡುವ ಮನುಷ್ಯರು ನಾಗಮಣಿಯನ್ನು ವಶಪಡಿಸಿಕೊಳ್ಳುತ್ತಾರೆ. ನಾಗಮಣಿಯನ್ನು ಕದ್ದೊಯ್ಯುವ ಸಮಯದಲ್ಲಿ ಅದರ ರಕ್ಷಣೆಗೆ ಬರುವ ಆದಿಶೇಷನನ್ನು ಅವರು ಕೊಲ್ಲುತ್ತಾರೆ.
ಪ್ರಿಯಕರ ಆದಿಶೇಷನನ್ನು ಕೊಂದು ನಾಗಮಣಿಯನ್ನು ಕದ್ದೊಯ್ದವರ ವಿರುದ್ಧ ಸೇಡು ತೀರಿಸಿಕೊಳ್ಳಲು, ಕಳೆದ ಹೋದ ನಾಗಮಣಿಯನ್ನು ಮರಳಿ ಪಡೆಯಲು ನಾಗಕನ್ಯೆ ಶಿವಾನಿ ಮಾನವ ರೂಪದಲ್ಲಿ ಭೂಲೋಕಕ್ಕೆ ಬರುತ್ತಾಳೆ. ಆಕೆ ಹೇಗೆ ದ್ವೇಷ ಸಾಧಿಸುತ್ತಾಳೆ, ನಾಗಮಣಿಯನ್ನು ಪಡೆಯಲು ಸಫಲಲಾಗುತ್ತಾಳಾ ಎಂಬುದೇ 'ನಾಗಿಣಿ 2' ರ ಕಥಾ ಹಂದರ.
ಕನ್ನಡ ಕಿರುತೆರೆ ವೀಕ್ಷಕರ ಮನ ಸೆಳೆದಿರುವ 'ನಾಗಿಣಿ 2' ಧಾರಾವಾಹಿ ಇದೀಗ ಮಲಯಾಳಂ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಲು ತಯಾರಾಗಿದೆ. ಅಂದ ಹಾಗೆ 'ನಾಗಿಣಿ' ಎಂಬ ಹೆಸರಿನಿಂದಲೇ ಈ ಧಾರಾವಾಹಿ ಜೀ ಕೇರಳಂ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ.