ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಅದೆಷ್ಟೋ ಧಾರಾವಾಹಿಗಳು ಮುಕ್ತಾಯಗೊಂಡಿರುವುದು ಕಿರುತೆರೆ ವೀಕ್ಷಕರಿಗೆ ನಿಜಕ್ಕೂ ಬೇಸರದ ಸಂಗತಿ. ಈ ಬೇಸರದ ನಡುವೆಯೂ ಕಿರುತೆರೆ ವೀಕ್ಷಕರಿಗೆ ಸಿಹಿ ಸುದ್ದಿಯೊಂದಿದೆ.

ವೀಕ್ಷಕರ ಮೆಚ್ಚಿನ 'ಮುದ್ದುಲಕ್ಷ್ಮಿ' ಧಾರಾವಾಹಿ 700 ಸಂಚಿಕೆಗಳನ್ನು ಪೂರೈಸಿದೆ. ವಿಭಿನ್ನ ಕಥಾ ಹಂದರ ಹೊಂದಿರುವ 'ಮುದ್ದುಲಕ್ಷ್ಮಿ' ಯಶಸ್ವಿ 700 ಸಂಚಿಕೆಗೆ ಕಾಲಿಟ್ಟಿದ್ದಾಳೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಈ 'ಮುದ್ದುಲಕ್ಷ್ಮಿ' ಧಾರಾವಾಹಿಯನ್ನು ಜನರು ಮೆಚ್ಚಿದ್ದಾರೆ ಎಂಬುದಕ್ಕೆ ಇದು 700 ಎಪಿಸೋಡ್ಗಳನ್ನು ಪೂರೈಸಿರುವುದೇ ಸಾಕ್ಷಿ. ಕಪ್ಪುವರ್ಣದ ಹೆಣ್ಣುಮಗಳೊಬ್ಬಳು ಜೀವನದಲ್ಲಿ ಏನೆಲ್ಲಾ ಕಷ್ಟ ಪಡುತ್ತಾಳೆ. ಆ ಕಷ್ಟಗಳನ್ನು ಹೇಗೆ ಎದುರಿಸುತ್ತಾಳೆ ಎಂಬುದನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗಿದೆ. ಬಾಹ್ಯ ಸೌಂದರ್ಯ ಏನಿದ್ದರೂ ಕ್ಷಣಿಕ, ಆಂತರಿಕ ಸೌಂದರ್ಯವೇ ಶಾಶ್ವತ ಎಂಬ ಸಂದೇಶವನ್ನು ಈ ಧಾರಾವಾಹಿ ವೀಕ್ಷಕರಿಗೆ ನೀಡಲು ಪ್ರಯತ್ನಿಸಿದೆ.
- View this post on Instagram
Wishing the team of Muddulakshmi many many congratulations ! #Muddulakshmi #starsuvarna
">
ಈ ಧಾರಾವಾಹಿ 700 ಎಪಿಸೋಡ್ಗಳನ್ನು ಪೂರೈಸಿರುವುದು ಧಾರಾವಾಹಿ ತಂಡಕ್ಕೆ ಸಂತೋಷ ನೀಡಿದೆ. ಇದರ ಪ್ರೋಮೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೀಕ್ಷಕರು ಕೂಡಾ ಮೆಚ್ಚಿಕೊಂಡಿದ್ದಾರೆ. ಮಾತ್ರವಲ್ಲ ಮುಂದಿನ ಎಪಿಸೋಡ್ಗಳಲ್ಲಿ ಈ ಧಾರಾವಾಹಿಯಲ್ಲಿ ರೋಚಕ ತಿರುವು ಕೂಡಾ ಇರಲಿದೆ ಎಂಬ ಮಾತು ಕೇಳಿ ಬರುತ್ತಿದೆ. ನಾಯಕಿ ಮುದ್ದುಲಕ್ಷ್ಮಿ ಪಾತ್ರದಲ್ಲಿ ಅಶ್ವಿನಿ ನಟಿಸಿದರೆ ನಾಯಕ ಧೃವಂತ್ ಆಗಿ ಚರಿತ್ ಬಾಳಪ್ಪ ಅಭಿನಯಿಸುತ್ತಿದ್ದಾರೆ.
