ETV Bharat / sitara

‘ದಿ ಫ್ಯಾಮಿಲಿ ಮ್ಯಾನ್ 3’ನಲ್ಲಿ ನಟಿಸಲು ಮನೋಜ್ ಬಾಜಪೇಯಿ ಬೇಡಿಕೆಯಿಟ್ಟ ಸಂಭಾವನೆ ಎಷ್ಟು ಗೊತ್ತಾ!? - ನಟ ಮನೋಜ್ ಬಾಜಪೇಯಿ ಮುಂದಿನ ವೆಬ್ ಸರಣಿ

‘ದಿ ಫ್ಯಾಮಿಲಿ ಮ್ಯಾನ್ 2’ ಕಳೆದ ವಾರವಷ್ಟೇ ಅಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆಯಾಗಿದ್ದು, ನಟ ಮನೋಜ್ ಬಾಜಪೇಯಿ ‘ದಿ ಫ್ಯಾಮಿಲಿ ಮ್ಯಾನ್ 3’ನಲ್ಲಿ ನಟಿಸಲು ಎಪಿಸೋಡ್​ ಒಂದಕ್ಕೆ ಎರಡೂಕಾಲು ಕೋಟಿ ಸಂಭಾವನೆ ಕೇಳಿದ್ದಾರಂತೆ.

Manoj Bajpayee demands 2 crore remuneration per episode
ನಟ ಮನೋಜ್ ಬಾಜಪೇಯಿ ಅಭಿನಯದ ದಿ ಫ್ಯಾಮಿಲಿ ಮ್ಯಾನ್ 3
author img

By

Published : Jun 12, 2021, 10:42 AM IST

ನಟ ಮನೋಜ್ ಬಾಜಪೇಯಿ ಅಭಿನಯದ ‘ದಿ ಫ್ಯಾಮಿಲಿ ಮ್ಯಾನ್ 2’ ಕಳೆದ ವಾರವಷ್ಟೇ ಅಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆಯಾಗಿದ್ದು, ಸೂಪರ್ ಹಿಟ್ ಆಗಿದೆ.

ಈ ವೆಬ್​ಸಿರೀಸ್ ನೋಡಿದವರೆಲ್ಲರೂ ಮೆಚ್ಚುಗೆಯ ಮಾತುಳನ್ನಾಡುತ್ತಿದ್ದಾರೆ. ಅದರಲ್ಲೂ ನಟ ಮನೋಜ್ ಬಾಜಪೇಯಿ ಅವರ ಶ್ರೀಕಾಂತ್ ತಿವಾರಿ ಪಾತ್ರಕ್ಕೆ ಜನ ಫುಲ್ ಫಿದಾ ಆಗಿದ್ದು, ಅಮೀರ್ ಖಾನ್, ಆಫ್ ವೆಬ್​ಸಿರೀಸ್ ಎಂಬ ಬಿರುದು ನೀಡಿದ್ದಾರೆ.

ಅಷ್ಟಕ್ಕೆ ಮುಗಿಯಿತು ಅಂತಲ್ಲ. ಇಲ್ಲಿಂದ ಇನ್ನೊಂದು ಹೊಸ ಅಧ್ಯಾಯ ಶುರುವಾಗಲಿಕ್ಕಿದೆ. ‘ದಿ ಫ್ಯಾಮಿಲಿ ಮ್ಯಾನ್ 2’ ಸೀಸನ್​ನಲ್ಲಿ ಮೂರನೇ ಭಾಗದ ಬಗ್ಗೆ ಲಿಂಕ್ ಕೊಡಲಾಗಿದೆ. ಈಗಾಗಲೇ ಮೂರನೇ ಸೀಸನ್ ಬಗ್ಗೆ ಜನರಲ್ಲಿ ಕುತೂಹಲ ಶುರುವಾಗಿದೆ. ಆದರೆ, ‘ದಿ ಫ್ಯಾಮಿಲಿ ಮ್ಯಾನ್ 3’ ಬರುವುದಕ್ಕೆ ಒಂದು ವರ್ಷವಾದರೂ ಬೇಕಿದೆ.

ಅದಕ್ಕೂ ಮುನ್ನ ಮೂರನೇ ಭಾಗದಲ್ಲಿ ನಟಿಸುವುದಕ್ಕೆ ಮನೋಜ್ ಬಾಜಪೇಯಿ ಪಡೆದುಕೊಳ್ಳುತ್ತಿರುವ ಸಂಭಾವನೆಯ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ. ಎರಡನೇ ಸೀಸನ್​ಲ್ಲಿ ಮನೋಜ್ ಬಾಜಪೇಯಿ ಎಂಟು ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದ್ದು, ದಿ ಫ್ಯಾಮಿಲಿ ಮ್ಯಾನ್ 3ಗೆ ಆ ಸಂಭಾವನೆಯನ್ನು ಡಬ್ಬಲ್ ಮಾಡಿದ್ದಾರಂತೆ. ಅಂದರೆ, ಈ ಬಾರಿ ಅವರು ಎಪಿಸೋಡ್​ ಒಂದಕ್ಕೆ ಎರಡೂಕಾಲು ಕೋಟಿ ಕೇಳಿದ್ದು, ಒಂಭತ್ತು ಎಪಿಸೋಡ್​ಗಳು ಎಂದಿಟ್ಟುಕೊಂಡರೆ 20ರಿಂದ 22 ಕೋಟಿ ಸಂಭಾವನೆ ಆಗುತ್ತದೆ.

ಕಳೆದೊಂದು ವಾರದಿಂದ ಬೇರೆ ಸಿನಿಮಾ, ಧಾರಾವಾಹಿಗಿಂತ ಇಡೀ ದೇಶದಲ್ಲಿ ‘ದಿ ಫ್ಯಾಮಿಲಿ ಮ್ಯಾನ್ 2’ ಸುದ್ದಿ ಮಾಡುತ್ತಿದೆ. ಅದಕ್ಕೆ ಕಾರಣರಾದ ಮನೋಜ್​ಗೆ ಅಷ್ಟು ಹಣ ಕೊಟ್ಟರೂ ಸಮಸ್ಯೆಯಿಲ್ಲ ಎಂಬ ಅಭಿಪ್ರಾಯ ಅಮೇಜಾನ್​ ಕಂಪನಿಗೆ ಇದೆಯಂತೆ. ಆದ್ದರಿಂದ ‘ದಿ ಫ್ಯಾಮಿಲಿ ಮ್ಯಾನ್ 3’ಗೆ ಮನೋಜ್​ಗೆ 20 ಕೋಟಿ ಸಂಭಾವನೆ ಕೊಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.