ಕನ್ನಡ ಚಿತ್ರರಂಗ, ಕಿರುತೆರೆ, ರಂಗಭೂಮಿ, ಅಭಿನಯ ಶಾಲೆ 'ನಟನ' ಮುಖ್ಯಸ್ಥ ಮಂಡ್ಯ ರಮೇಶ್ ಅವರು ಈ ಕೊರೊನಾ ಲಾಕ್ ಡೌನ್ ಸಮಯದಲ್ಲೂ ಸಿನಿಪ್ರಿಯರಿಗೆ ಮನರಂಜನೆ ನೀಡುವಲ್ಲಿ ಹಿಂದೆ ಸರಿದಿಲ್ಲ. ತಮ್ಮ 'ನಟನ' ಮೂಲಕ ಅವರು ಆ್ಯಕ್ಟಿವ್ ಆಗಿದ್ದಾರೆ.
ಮನರಂಜನಾ ಪ್ರಿಯರಿಗೆ ಇದೀಗ ಮಂಡ್ಯ ರಮೇಶ್ ಅವರಿಂದ ಹೊಸ ಕಾರ್ಯಕ್ರಮ ಲಭ್ಯವಾಗಲಿದೆ. ಈ ಮೂಲಕ ಆಸಕ್ತರು ಹಣ ಪಾವತಿಸಿ ಟಿಕೆಟ್ ಬುಕ್ ಮಾಡಿ ಆನ್ಲೈನ್ನಲ್ಲಿ ನಾಟಕ ನೋಡಬಹುದು. ಕೆ. ಪೂರ್ಣಚಂದ್ರ ತೇಜಸ್ವಿ ಅವರ 'ಪರಿಸರದ ಕಥೆ' ಆಧರಿಸಿ ತಯಾರಾದ 'ಪುಂಗಿ ಎಂಗ್ಟ' ನಾಟಕವನ್ನು 2019-20 ನೇ ನಟನಾ ಶಾಲೆಯ ವಿದ್ಯಾರ್ಥಿಗಳಾದ ರೂಪಾ ಜಾಧವ್ ರಾವ್, ಸಮೀರ್ ರಾವ್, ಮೇಘ ಸಮೀರ ಹಾಗೂ ಇನ್ನಿತರರು ಪ್ರದರ್ಶಿಸಲಿದ್ದಾರೆ.

ಭರ್ತಿ ಮಾಡಿದ ಅರ್ಜಿ ಹಾಗೂ 100 ರೂಪಾಯಿ ಟಿಕೆಟ್ ತಲುಪಿದ ನಂತರ ಯೂಟ್ಯೂಬ್ನಲ್ಲಿ 24 ಗಂಟೆ ಅವಧಿಯಲ್ಲಿ ನಾಟಕ ನೋಡುವ ಅವಕಾಶ ನೀಡಲಾಗುವುದು. ನಾಟಕದ ಅವಧಿ 2:15 ಗಂಟೆ. ಆಸಕ್ತರು 9945555570 ಮೊಬೈಲ್ ನಂಬರನ್ನು ಸಂಪರ್ಕಿಸಬಹುದು. ಗೂಗಲ್ ಪೇ. ಪೇಟಿಎಂ, ಫೋನ್ ಪೇ ಮೂಲಕ ಕೂಡಾ ಹಣ ಪಾವತಿಸಬಹುದು. ನಂತರ ನಿಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆಗೆ ನಾಟಕದ ಲಿಂಕ್ ಕಳಿಸಿಕೊಡಲಾಗುವುದು.
ಈ ಬಗ್ಗೆ ಮಾತನಾಡಿರುವ ಮಂಡ್ಯ ರಮೇಶ್, 'ನಮ್ಮ ಸೃಜನಾತ್ಮಕವಾದ ಪ್ರಸ್ತುತಿಯು ನಿಮ್ಮಿಂದ ಯಾವುದೇ ರೀತಿಯಲ್ಲಿ ದುರ್ಬಳಕೆ ಆಗುವುದಿಲ್ಲವೆಂದು ನಾವು ನಂಬಿದ್ದೇವೆ. ನಾಟಕ ನೋಡಬಯಸುವ ಪ್ರತಿ ವ್ಯಕ್ತಿಯು ಬೇರೆ ಬೇರೆ ಟಿಕೆಟ್ ಪಡೆದು ನೋಡಿದರೆ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದಂತಾಗುತ್ತದೆ ಎಂದು ಹೇಳಿದ್ದಾರೆ.
ಅಲ್ಲದೆ, 'ನಟನ' ಶಾಲೆಗೆ ನೀವು ಹೆಚ್ಚಿನ ಸಹಾಯ ಮಾಡಲು ಬಯಸುವುದಾದರೆ ನಮ್ಮ natanamysore@gmail.com ಇಮೇಲ್ ವಿಳಾಸವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗೆ www.natanamysuru.org ಪರಿಶೀಲಿಸಿ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.