ಖಾಸಗಿ ಮನರಂಜನಾ ಚಾನಲ್ನಲ್ಲಿ ಪ್ರಸಾರವಾಗುವ 'ಮನಸೆಲ್ಲಾ ನೀನೆ' ಧಾರಾವಾಹಿಯಲ್ಲಿ ರಾಕ್ ಸ್ಟಾರ್ ಅರುಣ್ ಆಗಿ ಅಭಿನಯಿಸುತ್ತಿರುವ ಸುಜಿತ್ ಗೌಡ ಅವರಿಗೆ ಕೊರೊನಾ ತಗುಲಿದೆ. ಸದ್ಯ ಮನೆಯಲ್ಲಿ ಕ್ವಾರಂಟೈನ್ ಆಗಿರುವ ಅವರು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
'ನನಗೆ ಆರಂಭದಲ್ಲಿ ಕೆಮ್ಮು ಹಾಗೂ ಮೈ-ಕೈ ನೋವು, ಕಾಣಿಸಿಕೊಂಡಿತ್ತು. ನಂತರ ಜ್ವರ ಶುರುವಾಯಿತು. ಜ್ವರ ಬಂದದ್ದೇ ತಡ ನಾನು ಕೊರೋನಾ ಟೆಸ್ಟ್ ಮಾಡಿಸಿದೆ. ರಿಸಲ್ಟ್ ಬಂದಾಗ ಪಾಸಿಟಿವ್ ಎಂದು ತಿಳಿಯಿತು.
![Manasella Neene fame Sujit Gowda shared his Corona experience](https://etvbharatimages.akamaized.net/etvbharat/prod-images/kn-bng-01-sujithgowda-aftercorona-photo-ka10018_17052021144023_1705f_1621242623_52.jpg)
![Manasella Neene fame Sujit Gowda shared his Corona experience](https://etvbharatimages.akamaized.net/etvbharat/prod-images/kn-bng-01-sujithgowda-aftercorona-photo-ka10018_17052021144023_1705f_1621242623_1034.jpg)
ನಾನು ಮನಸೆಲ್ಲಾ ನೀನೆ ಧಾರಾವಾಹಿಯ ಜೊತೆಗೆ ತೆಲುಗಿನ ಕಸ್ತೂರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ಅದೇ ಕಾರಣದಿಂದ ಹೈದರಾಬಾದ್-ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುತ್ತೇನೆ. ಇದರಿಂದಾಗಿಯೇ ಕೊರೊನಾ ಬಂದಿರಬಹುದು' ಎಂದು ಸುಜಿತ್ ಗೌಡ ಹೇಳಿದ್ದಾರೆ.
![Manasella Neene fame Sujit Gowda shared his Corona experience](https://etvbharatimages.akamaized.net/etvbharat/prod-images/kn-bng-01-sujithgowda-aftercorona-photo-ka10018_17052021144023_1705f_1621242623_263.jpg)
![Manasella Neene fame Sujit Gowda shared his Corona experience](https://etvbharatimages.akamaized.net/etvbharat/prod-images/kn-bng-01-sujithgowda-aftercorona-photo-ka10018_17052021144023_1705f_1621242623_395.jpg)
"ಕೊರೊನಾ ಬಂದಿದೆ ಎಂದು ತಿಳಿದಾಗ ಮೊದಲು ಅಪ್ಪ ಅಮ್ಮನಿಗೆ ತುಂಬಾನೇ ಗಾಬರಿಯಾಯಿತು. ರಿಪೋರ್ಟ್ ದೊರೆತ ಕೂಡಲೇ ಡಾಕ್ಟರ್ ಸಂಪರ್ಕಿಸಿ ಸೂಕ್ತ ಮದ್ದುಗಳನ್ನು ತೆಗೆದುಕೊಂಡಿದ್ದೇನೆ. ಇದೀಗ ಒಂದು ವಾರ ಕಳೆದಿದ್ದು, ಸ್ವಲ್ಪ ಕೆಮ್ಮು ಮಾತ್ರ ಇದೆ. ಆದರೆ ಬಹುಬೇಗನೇ ಗುಣವಾಗುತ್ತೇನೆ ಎಂಬ ವಿಶ್ವಾಸವಿದೆ" ಎಂದಿದ್ದಾರೆ.
![Manasella Neene fame Sujit Gowda shared his Corona experience](https://etvbharatimages.akamaized.net/etvbharat/prod-images/kn-bng-01-sujithgowda-aftercorona-photo-ka10018_17052021144023_1705f_1621242623_919.jpg)
![Manasella Neene fame Sujit Gowda shared his Corona experience](https://etvbharatimages.akamaized.net/etvbharat/prod-images/kn-bng-01-sujithgowda-aftercorona-photo-ka10018_17052021144023_1705f_1621242623_843.jpg)
ಮನೆಯಿಂದ ಹೊರಗೆ ಇರುವುದು ಎಂದರೆ ನನಗೆ ತುಂಬಾ ಇಷ್ಟ. ಆದರೆ ಇದೇ ಮೊದಲ ಬಾರಿ ನಾನು ರೂಮ್ ನಲ್ಲಿ ಇಷ್ಟು ದಿನ ಕಳೆದಿದ್ದೇನೆ. ಕೊರೊನಾ ಎಂದು ಹೇಳಿದಾಗ ಮೊದಲು ನಾನು ಸಾಮಾನ್ಯ ಜ್ವರ ಎಂದು ತಿಳಿದಿದ್ದೆ. ಆದರೆ ವೈರಸ್ ಬಂದ ಮೇಲೆಯೇ ಅದರ ಪರಿಣಾಮ ಏನು ಎಂಬುದು ತಿಳಿಯುತ್ತದೆ. ದಯಮಾಡಿ ಮಾಸ್ಕ್ ಧರಿಸದೇ ಮನೆಯಿಂದ ಹೊರಗೆ ಹೋಗಬೇಡಿ ಎಂದು ಅವರು ಮನವಿ ಮಾಡಿದ್ದಾರೆ.