ಮನಸಾರೆ ಹಾಗೂ ಮನಸೆಲ್ಲ ನೀನೆ ಧಾರಾವಾಹಿ ನಾಯಕಿ ಪ್ರಿಯಾಂಕಾ ಚಿಂಚೋಳಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಪ್ರಿಯಾಂಕಾ ಚಿಂಚೋಳಿ ಹಾಗೂ ರಾಕೇಶ್ ಕುಮಾರ್ ಅವರೊಂದಿಗೆ ಫೆ.14ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಇಬ್ಬರು ಕುಟುಂಬಸ್ಥರ ಹಾಗೂ ಆಪ್ತರ ಸಮ್ಮುಖದಲ್ಲಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅತ್ಯಂತ ಸರಳವಾಗಿ ಮದುವೆಯಾಗಿದ್ದಾರೆ.
ಡಿಸೆಂಬರ್ 10 ಮತ್ತು 11ರಂದು ಬೆಂಗಳೂರಿನಲ್ಲಿ ಮದುವೆ ಸಮಾರಂಭ ನಡೆಯಲಿದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ರಾಕೇಶ್ ಅವರು ಅಮೆರಿಕದ ಬ್ಯಾಂಕ್ವೊಂದರಲ್ಲಿ ಉಪಾಧ್ಯಕ್ಷ ಆಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಹಿನ್ನೆಲೆ ವಿಸಾ ಸಂಬಂಧಿಸಿದಂತೆ ಅನೇಕ ಕಾರಣಗಳಿಗೆ ರಿಜಿಸ್ಟರ್ ಮ್ಯಾರೇಜ್ ಸರ್ಟಿಫಿಕೇಟ್ ಅವಶ್ಯಕತೆಯಿತ್ತು.
ಹೀಗಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲಾಯಿತು. ಸಂಪ್ರದಾಯಬದ್ಧವಾಗಿ ಮದುವೆ ನಡೆದ ನಂತರವೇ ರಾಕೇಶ್ ಅವರ ಮನೆಗೆ ಹೋಗುತ್ತೇನೆ. ಈಗ ನನ್ನ ಮನೆಗೆ ನಾನು ಹೋಗಿದ್ದೇನೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕ ಚಿಂಚೋಳಿ ವರಿಸುತ್ತಿರುವ ಹುಡುಗ ಇವರೇ..