'ಮಗಳು ಜಾನಕಿ' ಖಾಸಗಿ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಟಿ.ಎನ್.ಸೀತಾರಾಮ್ ನಿರ್ದೇಶನದ ಈ ಧಾರಾವಾಹಿ ಬಹುತೇಕ ಮಂದಿಗೆ ಮೆಚ್ಚಿನ ಧಾರಾವಾಹಿ. ಈ ಧಾರಾವಾಹಿಯ ನಟಿಯೊಬ್ಬರ ಸಾವು ಈಗ ತಂಡಕ್ಕೆ ಶಾಕ್ ನೀಡಿದೆ.

ಈ ಧಾರಾವಾಹಿಯಲ್ಲಿ ಮಂಗಳತ್ತೆ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಶೋಭಾ ನಿನ್ನೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಕೆ.ಆರ್.ಪುರಂ ನಿವಾಸಿಯಾಗಿದ್ದ ಶೋಭಾ ನಿನ್ನೆ ಚಿತ್ರದುರ್ಗದಲ್ಲಿ ನಡೆದ ಲಾರಿ ಹಾಗೂ ಇನೋವಾ ಕಾರಿನ ನಡುವೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ . ಇವರು ಕುಟುಂಬದವರೊಂದಿಗೆ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಇವರೊಂದಿಗೆ ಕುಟುಂಬದ ಐವರು ಕೂಡಾ ಮೃತಪಟ್ಟಿದ್ದಾರೆ. ಧಾರಾವಾಹಿ ನಿರ್ದೇಶಕ ಟಿ.ಎನ್. ಸೀತಾರಾಮ್ ಹಾಗೂ ಇಡೀ ಧಾರಾವಾಹಿ ತಂಡಡ ಸದಸ್ಯರು ಶೋಭಾ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.