'ಕಿರಿಕ್ ಪಾರ್ಟಿ' ಸಿನಿಮಾ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ...? ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಾಕಷ್ಟು ಸದ್ದು ಮಾಡಿದ್ದು ಮಾತ್ರವಲ್ಲದೆ ಸಾವಿರಾರು ಅಭಿಮಾನಿಗಳನ್ನು ಕೂಡಾ ಪಡೆದಿರುವ ಚಿತ್ರ. ಈ ಸಿನಿಮಾದ 'ಬೆಳಗೆದ್ದು ಯಾರ ಮುಖವ' ಹಾಡಂತೂ ಸಖತ್ ಫೇಮಸ್.
- " class="align-text-top noRightClick twitterSection" data="
">
ಆದರೆ ನಾವೀಗ ಮಾತನಾಡಲು ಹೊರಟಿರುವುದು ಕಿರಿಕ್ ಪಾರ್ಟಿ ಸಿನಿಮಾ ಬಗ್ಗೆ ಅಲ್ಲ. ಮಕ್ಕಳಿಗಾಗಿ ಬರುತ್ತಿರುವ ಹೊಸ ರಿಯಾಲಿಟಿ ಶೋ 'ಕಿರಿಕ್ ಪಾರ್ಟಿ' ಬಗ್ಗೆ. ಅಂದ ಹಾಗೆ ಈ ಶೋ ಪ್ರಸಾರವಾಗುತ್ತಿರುವುದು ಚಾನೆಲ್ನಲ್ಲಿ ಅಲ್ಲ, ಯೂಟ್ಯೂಬ್ನಲ್ಲಿ ಪ್ರಸಾರವಾಗಲಿದೆ. ಇನ್ನು ಈ 'ಕಿರಿಕ್ ಪಾರ್ಟಿ'ಯ ಹಿಂದಿರುವ ರೂವಾರಿ ಬೇರಾರೂ ಅಲ್ಲ, ಪಾಪಾ ಪಾಂಡು ಪಾಚು ಎಂದೇ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಪಡೆದಿರುವ ಶಾಲಿನಿ. 3-8 ವರ್ಷಗಳ ಒಳಗಿನ ಮಕ್ಕಳು ಭಾಗವಹಿಸಬಹುದಾದ ಈ ಶೋನಲ್ಲಿ ತುಂಟ ಮತ್ತು ಚಟಪಟ ಅರಳು ಹುರಿದಂತೆ ಮಾತನಾಡುವ ಮಕ್ಕಳಿಗೆ ಅವಕಾಶ ಹೆಚ್ಚು. ನಿಮ್ಮ ಮಕ್ಕಳು ಪಟಪಟನೆ ಮಾತನಾಡುತ್ತಾರಾ..? ಅಥವಾ ತುಂಟಾಟದಿಂದ ನಿಮ್ಮನ ಸೆಳೆಯುತ್ತಾರಾ? ಹಾಗಿದ್ದರೆ ಅವರ ಒಂದು ನಿಮಿಷದ ವಿಡಿಯೋ ಮಾಡಿ kirikparty.shaliwood@gmail.com ಗೆ ಇಮೇಲ್ ಮಾಡಿ. ಅಥವಾ 9606228384 ನಂಬರ್ಗೆ ವಾಟ್ಸಾಪ್ ಕೂಡಾ ಮಾಡಬಹುದು. ಆದರೆ ನೆನಪಿಡಿ. ಮಕ್ಕಳು ಮಾಡುವಂತಹ ಟಿಕ್ಟಾಕ್, ಡಬ್ ಸ್ಮಾಶ್ ವಿಡಿಯೋಗಳು ಬೇಡ. ಬಹಳ ಮುಖ್ಯವಾಗಿ ಅಪ್ಪ ಅಮ್ಮ ಕಂಠಪಾಠ ಮಾಡಿಸುವ ವಿಡಿಯೋ ಬೇಡವೇ ಬೇಡ ಎಂದು ಶಾಲಿನಿ ಹೇಳಿದ್ದಾರೆ.