ETV Bharat / sitara

ಕನ್ನಡತಿ ಕಿರಣ್ ರಾಜ್​ಗೆ ಈ ವರ್ಷ ಸುಗ್ಗಿಯೊ ಸುಗ್ಗಿ.. ಹಲವು‌‌ ಸಿನಿಮಾಗಳು ತೆರೆಗೆ! - ಕನ್ನಡತಿ ಧಾರಾವಾಹಿ

ಕಳೆದ ವರ್ಷ ವೃತ್ತಿ ಹಾಗೂ ವೈಯಕ್ತಿಕವಾಗಿಯೂ ತಮ್ಮ ಗೆಲುವು ಅನುಭವಿಸಿರುವ ನಟ ಕಿರಣ್ ರಾಜ್ ಇದೇ ಉತ್ಸಾಹದಲ್ಲಿ ಹೊಸ ವರುಷದಲ್ಲಿಯೂ ಯಶಸ್ಸು ಕಾಣುವ ಉತ್ಸಾಹದಲ್ಲಿದ್ದಾರೆ.

kiran raj
kiran raj
author img

By

Published : Jan 5, 2021, 10:34 AM IST

ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ನಟಿಸುವ ಮೂಲಕ ಮನೆ ಮಾತಾದ ನಟ ಕಿರಣ್ ರಾಜ್ ಕಳೆದ ವರ್ಷ ವೃತ್ತಿ ಹಾಗೂ ವೈಯಕ್ತಿಕವಾಗಿಯೂ ತಮ್ಮ ಗೆಲುವನ್ನು ಅನುಭವಿಸಿದ್ದಾರೆ. ಇದೇ ಉತ್ಸಾಹದಲ್ಲಿರುವ ಕಿರಣ್ ರಾಜ್ ಹೊಸ ವರುಷದಲ್ಲಿಯೂ ಯಶಸ್ಸು ಕಾಣುವ ಉತ್ಸಾಹದಲ್ಲಿದ್ದಾರೆ.

2020ರ ಬದುಕಿನ ಅನುಭವ ಹಾಗೂ ಹೊಸವರುಷವನ್ನು ಬರ ಮಾಡಿಕೊಳ್ಳುವ ಉತ್ಸುಕತೆಯನ್ನು ಹಂಚಿಕೊಂಡಿದ್ದಾರೆ."2020 ನಿಜವಾಗಿ ಉತ್ತಮ ವರುಷ. ನಾನು ಸಿನಿಮಾಗಳ ಬಗ್ಗೆ ಗಮನಹರಿಸಿದೆ. ಕನ್ನಡತಿಯಲ್ಲಿ ನಟಿಸುವ ಆಫರ್ ಬಂತು. ಒಟ್ಟಿನಲ್ಲಿ ನನ್ನ ಬದುಕು ತಿರುವು ಪಡೆಯಿತು" ಎಂದಿದ್ದಾರೆ.

kiran raj
ನಟ ಕಿರಣ್ ರಾಜ್

"ಕನ್ನಡತಿ ನನ್ನ ವಿಚಾರ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬದಲಿಸಿತು. ನನ್ನ ಬಗ್ಗೆ ಸ್ವಲ್ಪ ಸಂದೇಹ ಹೊಂದಿದ್ದೆ. ಆದರೆ ನಾನು ನಿರೀಕ್ಷೆ ಮಾಡದೇ ಹಲವಾರು ಪ್ರಶಂಸೆಗಳನ್ನು ಗಳಿಸಿದೆ.‌ ಮಾತ್ರವಲ್ಲ ಕನ್ನಡತಿಯ ನನ್ನ ಪಾತ್ರಕ್ಕೆ ಜನ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ." ಎಂದಿದ್ದಾರೆ.

kiran raj
ನಟ ಕಿರಣ್ ರಾಜ್

"ಲಾಕ್​ಡೌನ್ ಪ್ರಾರಂಭದ ದಿನಗಳಲ್ಲಿ ನಾನು ಸ್ವಲ್ಪ ಖಿನ್ನನಾಗಿದ್ದೆ. ಆದರೆ, ನಾನು ಬದುಕಿನ ಇನ್ನೊಂದು ಹಂತವನ್ನು ಕಲಿತೆ. ಹೊರಗೆ ಅನೇಕ ಮಂದಿ ಕಷ್ಟಪಡುತ್ತಿದ್ದಾರೆಂದು ತಿಳಿಯಿತು. ನಾನು ಅವರನ್ನು ತಲುಪಬೇಕು ಎಂದು ನಿರ್ಧರಿಸಿದೆ. ಅವರಿಗೆ ಪ್ರೋತ್ಸಾಹ ನೀಡಬೇಕೆಂದು ಅಂದುಕೊಂಡೆ. ಇದು ನನಗೆ ಕಣ್ಣು ತೆರೆಸುವ ಅನುಭವವಾಗಿತ್ತು. ಇನ್ನು 2021ರಲ್ಲಿ ಯಶಸ್ಸಿಗಾಗಿ ನೋಡುತ್ತಿದ್ದೇನೆ. ಕಿರಣ್ ಫೌಂಡೇಶನ್ ಅನ್ನು ಇನ್ನಷ್ಟು ವಿಸ್ತರಿಸುವ ಇಚ್ಚೆಯಿದೆ. ಜೊತೆಗೆ ನೂರು ಹುಡುಗಿಯರಿಗಾದರೂ ಶಿಕ್ಷಣ ನೀಡುವ ಕನಸು ಇದೆ. ಈ ವರ್ಷ ಮಾಡುವ ನಂಬಿಕೆಯಿದೆ" ಎಂದು ಹಂಚಿಕೊಂಡಿದ್ದಾರೆ.

kiran raj
ನಟ ಕಿರಣ್ ರಾಜ್

ತನ್ನ ಕೆರಿಯರ್ ಕುರಿತು ಹುಮ್ಮಸ್ಸಿನಲ್ಲಿರುವ ಕಿರಣ್ "ಜನರು ಅಂದುಕೊಂಡದ್ದಕ್ಕಿಂತ ಉತ್ತಮ ಮನುಷ್ಯನಾಗಲು ಬಯಸಿರುವೆ. ಬ್ಲಾಕ್ ಬಸ್ಟರ್ 2021ಕ್ಕೆ ನೋಡುತ್ತಿರುವೆ. ನನ್ನ ಶೋ, ಸಿನಿಮಾಗಳು, ಸಾಮಾಜಿಕ ಜಾಲತಾಣದಿಂದ ಆಗಿರಬಹುದು, ಒಟ್ಟಿನಲ್ಲಿ ನನ್ನ ಬದುಕಿನಲ್ಲಿ ಸ್ಟಾರ್ ಆಗಿರಲು ಇಷ್ಟಪಡುವೆ"ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.