'ಕನ್ನಡ ಕೋಗಿಲೆ ಸೀಸನ್-2' ಫೈನಲ್ ಹಣಾಹಣಿಯಲ್ಲಿ ಮೈಸೂರಿನ ಆಲಾಪ್, ಕೊಪ್ಪಳದ ಅರ್ಜುನ್ ಇಟಗಿ, ಉಡುಪಿಯ ಕಲಾವತಿ ದಯಾನಂದ್, ಹಾವೇರಿಯ ಖಾಸಿಂ, ಬೆಂಗಳೂರಿನ ನೀತು ಸುಬ್ರಹ್ಮಣ್ಯಂ ಮತ್ತು ಶಿವಮೊಗ್ಗದ ಪಾರ್ಥ ಕನ್ನಡ ಕೋಗಿಲೆ ಕಿರೀಟ ಮುಡಿಗೇರಿಸಿಕೊಳ್ಳಲು ಸೆಣೆಸಲಿದ್ದಾರೆ. ಫಿನಾಲೆಯಲ್ಲಿ ಸಂಗೀತ ಮಾಂತ್ರಿಕ ಗುರುಕಿರಣ್ ವಿಶೇಷ ತೀರ್ಪುಗಾರರಾಗಿ ಕಾಣಿಸಲಿದ್ದಾರೆ.
ಈಗಾಗಲೇ ಫಿನಾಲೆಯ ಕಾರ್ಯಕ್ರಮ ಚಿತ್ರೀಕರಣ ನಡೆದದ್ದು, ಹಾವೇರಿಯ ಖಾಸಿಂ ಕನ್ನಡ ಕೋಗಿಲೆ ಸೀಸನ್ 2 ರ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ ಎನ್ನಲಾಗುತ್ತಿದೆ. ಶಿವಮೊಗ್ಗದ ಪಾರ್ಥ ಚಿರಂತನ್ ಹಾಗೂ ಬೆಂಗಳೂರಿನ ನೀತು ದ್ವಿತೀಯ ಸ್ಥಾನ ಹಾಗೂ ಕೊಪ್ಪಳದ ಅರ್ಜುನ್ ಇಟಗಿ ಮೂರನೇ ಸ್ಥಾನ ಪಡೆದಿದ್ದಾರಂತೆ.
ಹಾವೇರಿಯ ಖಾಸಿಂ ಸಾಮಾನ್ಯ ವರ್ಗದ ಕುಟುಂಬದ ಪ್ರತಿಭೆ. ಹವ್ಯಾಸಿ ಹಾಡುಗಾರರು. ಅನಾರೋಗ್ಯದಿಂದಾಗಿ ಮನೆಯವರ ಮೇಲೆ ಅವಲಂಬಿತರು. ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬುವ ಇವ್ರ ಛಲಕ್ಕೆ ಇದೀಗ ಕನ್ನಡ ಕೋಗಿಲೆ ಗೆಲುವು ತಂದುಕೊಟ್ಟಿದೆ. ಇವರಿಗೆ ಬಹುಮಾನದ ಹಣವಾಗಿ ₹ 3 ಲಕ್ಷ ಸಿಕ್ಕಿದೆಯಂತೆ.
ಈ ಆರು ಸ್ಪರ್ಧಿಗಳಲ್ಲಿ ಕನ್ನಡ ಕೋಗಿಲೆ ಸೀಸನ್-2ನ ಕಿರೀಟ ಯಾರ ಮುಡಿಗೇರಿದೆ ಎನ್ನುವುದು ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಸೂಪರ್ ಚಾನೆಲ್‌ನಲ್ಲಿ ಗೊತ್ತಾಗಲಿದೆ.