ETV Bharat / sitara

ಮತ್ತೊಂದು ಹೊಸ ದಾಖಲೆ ಬರೆಯಲು ಸಜ್ಜಾದ 'ಕೆಜಿಎಫ್ 2' - KGF Chapter 2 Teaser Sets New Record

ಭಾರತದ ಚಿತ್ರರಂಗದಲ್ಲಿ ಕೆಜಿಎಫ್​ 2 ಟೀಸರ್​ ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಗೊಂಡ 24 ಗಂಟೆಗಳಲ್ಲಿ ಈ ಟೀಸರ್​ 78 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಅಧಿಕ ವೀಕ್ಷಣೆ ಪಡೆದ ಸಿನಿಮಾ ಟೀಸರ್​ ಇದಾಗಿದೆ.

KGF Chapter 2
KGF Chapter 2
author img

By

Published : Jan 10, 2021, 12:46 PM IST

ಯಶ್ ಅಭಿನಯದ 'ಕೆಜಿಎಫ್ 2' ಚಿತ್ರದ ಟೀಸರ್ ಎರಡು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಭಾರತೀಯ ಚಿತ್ರರಂಗದ ಎಲ್ಲಾ ಹಳೆಯ ದಾಖಲೆಗಳನ್ನು ಪುಡಿಪುಡಿ ಮಾಡಿದೆ.

ಹೌದು, ಶನಿವಾರ ಸಂಜೆ ವೇಳೆಗೆ ಯೂಟ್ಯೂಬ್‍ನಲ್ಲಿ 'ಕೆಜಿಎಫ್ 2' ಚಿತ್ರದ ಟೀಸರ್ ಅನ್ನು 100 ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಮೂಲಕ 'ಸೂರ್ಯವಂಶಿ', 'ಮಾಸ್ಟರ್', 'ದಿಲ್ ಬೇಚಾರಾ' ಮುಂತಾದ ಚಿತ್ರಗಳ ಹಿಂದಿನ ದಾಖಲೆಗಳನ್ನು ಮುರಿದು ಹಾಕಿದೆ.

ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಟ್ರೈಲರ್ ಎಂಬ ಹೆಗ್ಗಳಿಕೆಗೆ 'ಬಾಹುಬಲಿ 2' ಪಾತ್ರವಾಗಿದೆ. ಈ ಟ್ರೈಲರ್​ ಅನ್ನು 11 ಕೋಟಿ 80 ಲಕ್ಷ ಮಂದಿ ವೀಕ್ಷಣೆ ಮಾಡಿದ್ದರು. ಈಗಾಗಲೇ 'ಕೆಜಿಎಫ್ 2' ಚಿತ್ರದ ಟೀಸರ್ ಅನ್ನು 11 ಕೋಟಿ 70 ಲಕ್ಷ ಜನರು ವೀಕ್ಷಣೆ ಮಾಡಿದ್ದು, 'ಬಾಹುಬಲಿ 2' ಚಿತ್ರದ ಟ್ರೈಲರ್ ದಾಖಲೆಯನ್ನು ಮುರಿಯುವುದಕ್ಕೆ ಸಜ್ಜಾಗಿದೆ. ಈ ಹಿನ್ನೆಲೆ ಇಂದು ಸಂಜೆಯೊಳಗೆ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.

ಮೂರು ವರ್ಷಗಳಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಯಾದ ಟೀಸರ್ ಎಂಬ ಹೆಗ್ಗಳಿಕೆಗೆ 'ಬಾಹುಬಲಿ 2' ಪಾತ್ರವಾಗಿತ್ತು. ಆದರೆ 'ಕೆಜಿಎಫ್ 2' ಆ ದಾಖಲೆಯನ್ನು ಮೂರೇ ದಿನಗಳಲ್ಲಿ ಮುರಿಯುವುದರ ಜೊತೆಗೆ ಅತೀ ಹೆಚ್ಚು ಲೈಕ್ಸ್ ಪಡೆದ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.