ಉದಯ ವಾಹಿನಿಯಲ್ಲಿ ಆರಂಭವಾಗಿರುವ ಹೊಸ ಧಾರಾವಾಹಿ 'ಕಾವ್ಯಾಂಜಲಿ'ಯಲ್ಲಿ ಅಂಜಲಿಯಾಗಿ ನಟಿಸುತ್ತಿರುವ ನಟಿ ಹೆಸರು ಸುಷ್ಮಿತಾ ಭಟ್. ಇಂಜಿನಿಯರಿಂಗ್ ಪದವೀಧರೆಯಾಗಿರುವ ಸುಷ್ಮಿತಾ ಭಟ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಬಂದ ಆಕೆ ಮೊದಲ ಧಾರಾವಾಹಿಯಲ್ಲೇ ಪ್ರಮುಖ ಪಾತ್ರ ಪಡೆದಿದ್ದಾರೆ.
![Sushmita bhat](https://etvbharatimages.akamaized.net/etvbharat/prod-images/kn-bng-02-sushmithabhat-anjali-photo-ka10018_08082020093922_0808f_1596859762_858.jpg)
ಇದೇ ಮೊದಲ ಬಾರಿಗೆ ನಾನು ಬಣ್ಣದ ಜಗತ್ತಿಗೆ ಬಂದಿದ್ದೇನೆ. ಕಾವ್ಯಾಂಜಲಿಯಲ್ಲಿ ಅಂಜಲಿ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ. ಅಂದ ಹಾಗೆ ಅಂಜಲಿ ತುಂಬಾ ಪಾಸಿಟಿವ್ ಹುಡುಗಿ ಆಗಿದ್ದು ಸುತ್ತಮುತ್ತಲಿನವರೂ ಹಾಗೆಯೇ ಇರಬೇಕೆಂದು ಸದಾ ಕಾಲ ಬಯಸುವ ಹುಡುಗಿ. ಎಲ್ಲದಕ್ಕಿಂತಲೂ ಮುಖ್ಯವಾಗಿ ತನ್ನ ಗೆಳೆಯರಿಗೆ ಹಾಗೂ ಸಂಬಂಧಕ್ಕೆ ಪ್ರಾಮಾಣಿಕವಾಗಿರುವ ಅಂಜಲಿ ಅವರನ್ನು, ಅವರ ಭಾವನೆಗಳನ್ನು ಸದಾ ಕಾಲ ಗೌರವಿಸುತ್ತಾಳೆ. ಶಾಂತ ಸ್ವಭಾವದ ಅಂಜಲಿ, ತಾನು ಇದ್ದ ಕಡೆಯೆಲ್ಲಾ ಸಂತೋಷ ನೆಲೆಸಬೇಕು ಎಂದು ಬಯಸುವ ಹುಡುಗಿ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ ಸುಷ್ಮಿತಾ ಭಟ್.
![Sushmita bhat](https://etvbharatimages.akamaized.net/etvbharat/prod-images/kn-bng-02-sushmithabhat-anjali-photo-ka10018_08082020093922_0808f_1596859762_721.jpg)
ಮೊದಲ ಬಾರಿ ಆ್ಯಕ್ಟಿಂಗ್ ಮಾಡುತ್ತಿರುವುದರಿಂದ ಚಿತ್ರೀಕರಣ ಸ್ಥಳಕ್ಕೆ ಬಂದಾಗ ಕೊಂಚ ಭಯವಾಗಿತ್ತು. ಮಾತ್ರವಲ್ಲ ಅಂಜಲಿ ಪಾತ್ರಕ್ಕೆ ಜೀವ ತುಂಬಲು ಸಾಧ್ಯಾನಾ ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು. ಆದರೆ ಒಮ್ಮೆ ಈ ರಂಗಕ್ಕೆ ಇಳಿದ ಮೇಲೆ ಸುಲಭ ಎನ್ನಿಸುತ್ತಿದೆ. ಇಂದು ಅಂಜಲಿಯಾಗಿ ನಿಮ್ಮ ಮುಂದೆ ಬರುತ್ತಿದ್ದೇನೆ ಎಂದರೆ ಅದಕ್ಕೆ ಕಾವ್ಯಾಂಜಲಿ ತಂಡವೇ ಕಾರಣ. ನಟನೆಯ ಆಗು ಹೋಗುಗಳು, ರೀತಿ ನೀತಿಗಳು, ಆಫ್ ಸ್ಕ್ರೀನ್, ಆನ್ ಸ್ಕ್ರೀನ್ ಇದನ್ನೆಲ್ಲಾ ಸುಲಲಿತವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ ಎಂದರೆ ಅದಕ್ಕೆ ನಿರ್ದೇಶಕರು, ಸಹಾಯಕ ನಿರ್ದೇಶಕರು, ಸಹ ಕಲಾವಿದರ ಬೆಂಬಲವೇ ಕಾರಣ ಎಂದು ಎಲ್ಲರಿಗೂ ಸುಷ್ಮಿತಾ ಭಟ್ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
![Sushmita bhat](https://etvbharatimages.akamaized.net/etvbharat/prod-images/kn-bng-02-sushmithabhat-anjali-photo-ka10018_08082020093922_0808f_1596859762_788.jpg)
'ಕಾವ್ಯಾಂಜಲಿ' ಕಾವ್ಯ ಹಾಗೂ ಅಂಜಲಿ ಎಂಬ ಇಬ್ಬರು ಹುಡುಗಿಯರ ಕಥೆ. ಇವರಿಬ್ಬರ ನಡುವೆ ಆತ್ಮೀಯವಾದ ಸಂಬಂಧವಿದೆ. ಆದರೆ ಇಬ್ಬರ ನಡುವೆ ಹುಡುಗನೊಬ್ಬ ಬಂದಾಗ ಏನೆಲ್ಲಾ ನಡೆಯುತ್ತದೆ ಎಂಬುದೇ ಧಾರಾವಾಹಿಯ ಕಥೆ.
![Sushmita bhat](https://etvbharatimages.akamaized.net/etvbharat/prod-images/kn-bng-02-sushmithabhat-anjali-photo-ka10018_08082020093922_0808f_1596859762_551.jpg)