ವೀಕ್ಷಕರಿಗೆ ವಿವಿಧ ರೀತಿಯ ಮನರಂಜನೆ ನೀಡುತ್ತಿರುವ ಉದಯ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಕಾವ್ಯ ಹಾಗೂ ಅಂಜಲಿ ಎಂಬ ಇಬ್ಬರು ಹುಡುಗಿಯರ ಕಥೆ ಇದಾಗಿದ್ದು ಧಾರಾವಾಹಿಗೆ 'ಕಾವ್ಯಾಂಜಲಿ' ಎಂದು ಹೆಸರಿಡಲಾಗಿದೆ.
![Kavyanjali](https://etvbharatimages.akamaized.net/etvbharat/prod-images/kavya---anjali-11595903907650-58_2807email_1595903918_731.png)
ಸುಮಾರು ವರ್ಷಗಳ ಹಿಂದೆ ಇದೇ ಹೆಸರಿನ ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗಿ ವೀಕ್ಷಕರ ಮನ ಗೆದ್ದಿತ್ತು. ಇದೀಗ ಮತ್ತೆ ಅದೇ ಹೆಸರಿನ ಧಾರಾವಾಹಿ ಆರಂಭವಾಗುತ್ತಿರುವ ಕಾರಣ ಇದು ಹಳೆ ಕಾವ್ಯಾಂಜಲಿಯ ಮುಂದುವರಿದ ಭಾಗವಿರಬಹುದು ಎಂದು ಜನರು ತಿಳಿದಿದ್ದಾರೆ. ಆದರೆ ಈ ಧಾರಾವಾಹಿಗೂ, ಹಳೆಯ ಕಾವ್ಯಾಂಜಲಿ ಧಾರಾವಾಹಿಗೂ ಯಾವುದೇ ಸಂಬಂಧವಿಲ್ಲ. ಇದು ಆ ಧಾರಾವಾಹಿಯ ಮುಂದುವರೆದ ಭಾಗವೂ ಅಲ್ಲ. ಒಟ್ಟಿನಲ್ಲಿ ಇದು ಸಂಪೂರ್ಣ ವಿಭಿನ್ನ ಕಥೆಯಾಗಿದೆ.
![Kavyanjali](https://etvbharatimages.akamaized.net/etvbharat/prod-images/kavyanjali-31595903907652-16_2807email_1595903918_398.png)
ಹಿಂದಿನ 'ಕಾವ್ಯಾಂಜಲಿ' ಸೂಪರ್ ಹಿಟ್ ಆಗಿದ್ದು ಇಂದಿಗೂ ಕಿರುತೆರೆಪ್ರಿಯರ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ. ಇದೀಗ ಈ ಧಾರಾವಾಹಿ ಕೂಡಾ ವಿಭಿನ್ನ ಕಥಾಹಂದರವನ್ನು ಹೊಂದಿದ್ದು ಜನರಿಗೆ ಇಷ್ಟವಾಗಲಿದೆ ಎಂದು ವಾಹಿನಿ ಭರವಸೆ ವ್ಯಕ್ತಪಡಿಸಿದೆ. ಹೊಸ ಕಲ್ಪನೆಯ ತ್ರಿಕೋನ ಪ್ರೇಮಕಥೆಗೆ ಮ್ಯೂಸಿಕ್‍ನ ಮ್ಯಾಜಿಕ್ ಟಚ್ ನೀಡಿ ಮೋಡಿ ಮಾಡಲು ಬರ್ತಿದೆ ಅಕ್ಕ ತಂಗಿ ಬಾಂಧವ್ಯದ ಕಥೆ 'ಕಾವ್ಯಾಂಜಲಿ'.
- " class="align-text-top noRightClick twitterSection" data="
">
ಜಗತ್ತಿನಲ್ಲಿ ಪ್ರೀತಿಗೆ ಹೆಚ್ಚು ಮಹತ್ವವಿದೆ, ಆದರೆ ಪ್ರಾಣ ಉಳಿಸುವ ಅಮೃತದಂತಹ ಪ್ರೀತಿ ಕೆಲವೊಮ್ಮೆ ಉಸಿರು ಕಟ್ಟಿಸುತ್ತೆ. ಇಂತದ್ದೇ ಪ್ರೀತಿಯಲ್ಲಿ ಉಸಿರು ಕಟ್ಟಿರುವ ನಾಯಕನಿಗೆ ನಿಷ್ಕಲ್ಮಶ ಪ್ರೀತಿಯ ತಂಪೆರೆಯುವ ನಾಯಕಿ, ಆತನಿಗೆ ಹೇಗೆ ಜೊತೆಯಾಗಿರುತ್ತಾಳೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಲಾಕ್ ಡೌನ್ ನಂತರ ಹೊಸ ಹುರುಪಿನಿಂದ ಶ್ಯಾಕ್ ಸ್ಟುಡಿಯೋ ಸಂಸ್ಥೆಯಡಿ ಶಂಕರ್ ವೆಂಕಟರಾಮನ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಆದರ್ಶ್ ಹೆಗಡೆ ಹೊತ್ತುಕೊಂಡಿದ್ದಾರೆ. ಈ ಹಿಂದೆ ಹಿಟ್ ಧಾರಾವಾಹಿಗಳಲ್ಲಿ ತಮ್ಮ ಕ್ಯಾಮರಾ ಕೈ ಚಳಕ ತೋರಿದ ನಿಪುಣ ಛಾಯಾಗ್ರಾಹಕ ರುದ್ರಮುನಿ ಬೆಳೆಗೆರೆ ಈ ತಂಡದ ಮತ್ತೊಬ್ಬ ಸದಸ್ಯರು.
![Kavyanjali](https://etvbharatimages.akamaized.net/etvbharat/prod-images/kn-bng-02-kavyanjali-newserial-photo-ka10018_27072020161048_2707f_1595846448_881.jpg)
ವಿದ್ಯಾಶ್ರೀ ಜಯರಾಮ್ ಹಾಗೂ ಸುಶ್ಮಿತಾ ಭಟ್ ಕಾವ್ಯ ಹಾಗೂ ಅಂಜಲಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಪವನ್ ರವೀಂದ್ರ ಹಾಗೂ ದರ್ಶಕ್ ಗೌಡ ನಾಯಕರಾಗಿ ನಟಿಸಲಿದ್ದಾರೆ. ಆಗಸ್ಟ್ 3 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ 'ಕಾವ್ಯಾಂಜಲಿ' ಪ್ರಸಾರವಾಗಲಿದೆ.
![Kavyanjali](https://etvbharatimages.akamaized.net/etvbharat/prod-images/kn-bng-02-kavyanjali-newserial-photo-ka10018_27072020161048_2707f_1595846448_259.jpg)