ETV Bharat / sitara

ಶೀಘ್ರದಲ್ಲೇ ಕನ್ನಡದ ಕೋಟ್ಯಧಿಪತಿ ನಾಲ್ಕನೇ ಸೀಸನ್​​: ಮತ್ತೆ ಪುನೀತ್ ಸಾರಥ್ಯ - ಕನ್ನಡದ ಕೋಟ್ಯಾಧಿಪತಿ

‘ಕನ್ನಡದ ಕೋಟ್ಯಧಿಪತಿ‘ ಮೊದಲ ಎರಡು ಸೀಸಗಳನ್ನು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಡೆಸಿಕೊಟ್ಟಿದ್ದರು. ನಂತರ ಅವರು ಬ್ಯುಸಿ ಇದ್ದಿದ್ದರಿಂದ ಮೂರನೇ ಸೀಸನನ್ನು ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದರು. ಇದೀಗ ನಾಲ್ಕನೇ ಸೀಸನ್ ಆರಂಭವಾಗುತ್ತಿದ್ದು, ಮತ್ತೆ ಪುನೀತ್ ಈ ಕಾರ್ಯಕ್ರಮದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ.

ಪುನೀತ್ ರಾಜ್​​​​ಕುಮಾರ್​
author img

By

Published : Apr 1, 2019, 6:47 PM IST

ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್​​​ಪತಿ‘ ಎಷ್ಟು ಖ್ಯಾತಿಯಾಗಿತ್ತೋ ಕನ್ನಡದಲ್ಲಿ ಪವರ್​ ಸ್ಟಾರ್​ ಪುನೀತ್ ರಾಜ್​​​​ಕುಮಾರ್​​​​ ನಡೆಸಿಕೊಡುವ ‘ಕನ್ನಡದ ಕೋಟ್ಯಾಧಿಪತಿ‘ ಕೂಡಾ ಅಷ್ಟೇ ಫೇಮಸ್​.

ಈ ಕಾರ್ಯಕ್ರಮದ ಮೊದಲ ಎರಡು ಸೀಸನ್​​​​ಗಳನ್ನು ಪವರ್ ಸ್ಟಾರ್ ನಡೆಸಿಕೊಟ್ಟಿದ್ದರು. ನಂತರ ಮೂರನೇ ಸೀಸನನ್ನು ನಟ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದರು. ಇದೀಗ ನಾಲ್ಕನೇ ಸೀಸನ್ ಶೀಘ್ರದಲ್ಲೇ ಆರಂಭವಾಗುತ್ತಿದ್ದು, ಅದನ್ನು ನಡೆಸಿಕೊಡಲು ಮತ್ತೆ ಪವರ್​ ಸ್ಟಾರ್ ಪುನೀತ್ ರಾಜ್​​ಕುಮಾರ್ ಬರುತ್ತಿದ್ದಾರೆ. ಇನ್ನು ಈ ಕಾರ್ಯಕ್ರಮದ ಮತ್ತೊಂದು ವಿಶೇಷ ಎಂದರೆ ಇಷ್ಟು ದಿನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಭಾನುವಾರ ಕಾರ್ಯಕ್ರಮದ ಪ್ರೋಮೋ ಕೂಡಾ ಬಿಡುಗಡೆಯಾಗಿದೆ. ಇನ್ನೆರಡು ತಿಂಗಳಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಅಷ್ಟರಲ್ಲಿ ಪುನೀತ್ ರಾಜ್​​ಕುಮಾರ್ ‘ಯುವರತ್ನ’ ಚಿತ್ರೀಕರಣ ಸಂರ್ಪೂರ್ಣವಾಗಿರುತ್ತದೆ. ನಂತರ ಪುನೀತ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪುನೀತ್ ನಡೆಸಿಕೊಡುತ್ತಿದ್ದ ‘ಫ್ಯಾಮಿಲಿ ಪವರ್’ ಕಾರ್ಯಕ್ರಮ ಕೂಡಾ ಸೂಪರ್ ಹಿಟ್ ಆಗಿತ್ತು. ಈಗ ಅದೇ ವಾಹಿನಿಗೆ ಅವರು ವಾಪಸಾಗುತ್ತಿದ್ದಾರೆ.

Intro:Body:

Kannadada kotyadhipat

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.