ETV Bharat / sitara

ಪರ-ವಿರೋಧದ ನಡುವೆಯೂ ಡಬ್ಬಿಂಗ್ ಧಾರಾವಾಹಿಗಳನ್ನು ಅಪ್ಪಿಕೊಂಡ ವೀಕ್ಷಕರು..! - Mythological dubbing serials

ಡಬ್ಬಿಂಗ್ ಸಿನಿಮಾಗಳ ನಡುವೆ ಡಬ್ಬಿಂಗ್ ಧಾರಾವಾಹಿಗಳು ಕಿರುತೆರೆಯಲ್ಲಿ ದರ್ಬಾರ್ ನಡೆಸುತ್ತಿವೆ. ಈ ಧಾರಾವಾಹಿಗಳ ನಡುವೆ ಮಹಾಭಾರತ, ರಾಧಾಕೃಷ್ಣ ಧಾರಾವಾಹಿಗಳು ಮೊದಲ ಎರಡು ಸ್ಥಾನಗಳಲ್ಲಿವೆ.

Kannada Viewers liked dubbing serials
ಡಬ್ಬಿಂಗ್ ಧಾರಾವಾಹಿ
author img

By

Published : Jul 24, 2020, 4:03 PM IST

ಕನ್ನಡ ಕಿರುತೆರೆಯಲ್ಲಿ ಪರ ವಿರೋಧದ ನಡುವೆಯೂ ಡಬ್ಬಿಂಗ್ ಧಾರಾವಾಹಿಗಳು ಪ್ರಸಾರ ಕಾಣಲಾರಂಭಿಸಿವೆ. ಒಂದಲ್ಲಾ ಎರಡಲ್ಲ, ಸಾಲು ಸಾಲು ಡಬ್ಬಿಂಗ್ ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆರಂಭಿಸಿವೆ.

Kannada Viewers liked dubbing serials
ಮಹಾಭಾರತ

ರಾಧಾಕೃಷ್ಣ, ಮಹಾಭಾರತ, ದೃಷ್ಟಿ, ನಾಗಕನ್ನಿಕೆ, ಪರಮಾವತಾರಿ ಶ್ರೀಕೃಷ್ಣ, ಅಲಾದ್ದಿನ್​, ಗಣೇಶ, ಮಹಾನಾಯಕ ಹೀಗೆ ಈಗ ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿಗಳದ್ದೇ ಹವಾ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಹಾಭಾರತ' 6.6 ಹಾಗೂ 'ರಾಧಾಕೃಷ್ಣ' 6.4 ರೇಟಿಂಗ್ ಪಡೆದುಕೊಂಡಿದೆ. ಇದೀಗ ಡಬ್ಬಿಂಗ್ ಧಾರಾವಾಹಿಗಳು ಹೆಚ್ಚು ಟಿಆರ್​​​​​​​ಪಿ ಗಳಿಸುತ್ತಿವೆ. ಜನರು ಡಬ್ಬಿಂಗ್ ಧಾರಾವಾಹಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.

Kannada Viewers liked dubbing serials
ಮೊದಲ ಸ್ಥಾನದಲ್ಲಿರುವ ಮಹಾಭಾರತ

ಅದರಲ್ಲೂ ಪೌರಾಣಿಕ ಧಾರಾವಾಹಿ 'ಮಹಾಭಾರತ' ಚಿಕ್ಕವರಿಂದ ಹಿಡಿದು ಹಿರಿಯರ ಮನಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಮಾತ್ರವಲ್ಲ ಆರಂಭದ ದಿನಗಳಿಂದಲೂ ಮಹಾಭಾರತ ಧಾರಾವಾಹಿ ಒಳ್ಳೆಯ ರೇಟಿಂಗ್ ಪಡೆದಿತ್ತು. ಅದರಲ್ಲೂ ಕಳೆದ ವಾರ ಪ್ರಸಾರವಾದ ದ್ರೌಪದಿ ವಸ್ತ್ರಾಪಹರಣದ ಸಂಚಿಕೆಗಳು ವೀಕ್ಷಕರನ್ನು ಪುಳಕಿತರನ್ನಾಗಿ ಮಾಡಿದವು. ಅದೇ ಕಾರಣದಿಂದ ಕಳೆದ ವಾರದ ಸಂಚಿಕೆಗಳು ಒಳ್ಳೆಯ ರೇಟಿಂಗ್ ಪಡೆದುಕೊಂಡಿದೆ.

Kannada Viewers liked dubbing serials
ರಾಧಾಕೃಷ್ಣ

ಇದು ಡಬ್ಬಿಂಗ್ ಸೀರಿಯಲ್​​​​ಗಳ ಮಟ್ಟಿಗೆ ಮೊದಲ ಬಾರಿಗೆ ಹೆಚ್ಚಿನ ರೇಟಿಂಗ್ ಪಡೆದ ಧಾರಾವಾಹಿ ಕೂಡಾ ಹೌದು. ಇದಲ್ಲದೆ ರಾಧಾಕೃಷ್ಣ ಕೂಡಾ ಉತ್ತಮ ರೇಟಿಂಗ್ ಪಡೆದುಕೊಂಡಿದೆ. ಸುವರ್ಣ ವಾಹಿನಿಯಲ್ಲಿ ಎರಡು ಡಬ್ಬಿಂಗ್ ಧಾರಾವಾಹಿಗಳು ಟಾಪ್ 1 ,ಟಾಪ್ 2 ಸ್ಥಾನಗಳನ್ನು ಗಳಿಸುವ ಮೂಲಕ ಕಿರುತೆರೆ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿರುವುದು ನಿಜ.

Kannada Viewers liked dubbing serials
ಎರಡನೇ ಸ್ಥಾನದಲ್ಲಿರುವ ರಾಧಾಕೃಷ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.