ETV Bharat / sitara

'ಪೊಗರು' ದಾಖಲೆ ಮುರಿಯಲು ಹೊರಟ 'ರಾಬರ್ಟ್'

author img

By

Published : Mar 11, 2021, 7:28 AM IST

ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಇಂದು ಬಿಡುಗಡೆಯಾಗಿದೆ. ಕರ್ನಾಟಕವೊಂದರಲ್ಲೇ 656 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಆಂಧ್ರ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ 433 ಮತ್ತು 407 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

Robert'
Robert'

ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ರಾಬರ್ಟ್' ಇಂದು ಬಿಡುಗಡೆಯಾಗಿದೆ. ಪದ್ಮನಾಭನಗರದ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಬೆಳ್ಳಿ ಪರದೆಗೆ ಪೂಜೆ ಸಲ್ಲಿಸುವ ಮೂಲಕ ಚಿತ್ರ ವೀಕ್ಷಣೆಗೆ ಚಾಲನೆ ಕೊಡಲಾಗಿದೆ.

ಬೆಳಗ್ಗೆ ಆರು ಗಂಟೆಯಿಂದ ಚಿತ್ರ ಬಿಡುಗಡೆಯಾಗಿದೆ. ಜೊತೆಗೆ ಮಾಗಡಿ ರಸ್ತೆಯ ಪ್ರಸನ್ನ, ಜೆಪಿ ನಗರದ ಸಿದ್ಧೇಶ್ವರ, ಆವಲಹಳ್ಳಿ ವೆಂಕಟೇಶ್ವರ, ಯಲಹಂಕದ ಗಣೇಶ್, ಸಂಜಯ್‍ನಗರದ ವೈಭವವ್, ಕೆಂಗೇರಿಯ ರಾಬಿನ್, ಬೊಮ್ಮನಹಳ್ಳಿಯ ಕೃಷ್ಣ ಮುಂತಾದ ಚಿತ್ರಮಂದಿರಗಳಲ್ಲಿ ಬೆಳಗ್ಗೆಯಿಂದಲೇ ಚಿತ್ರ ಪ್ರದರ್ಶನ ಪ್ರಾರಂಭವಾಗಿದ್ದು, ದರ್ಶನ್ ಅಭಿಮಾನಿಗಳು ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಇನ್ನು 'ರಾಬರ್ಟ್' ಚಿತ್ರವು ಕನ್ನಡ ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ಓಪನಿಂಗ್ ಪಡೆದಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರವು ಒಂದು ದಾಖಲೆ ನಿರ್ಮಿಸಿದ್ದು, 'ರಾಬರ್ಟ್' ಆ ದಾಖಲೆಯನ್ನು ಮುರಿಯುವುದಕ್ಕೆ ಹೊರಟಿದೆ. ಕರ್ನಾಟಕವೊಂದರಲ್ಲೇ 656 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಆಂಧ್ರ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ 433 ಮತ್ತು 407 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಒಟ್ಟಾರೆ, ಈ ಮೂರು ರಾಜ್ಯಗಳಲ್ಲಿ 1,596 ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣಲಿದ್ದು, ಒಂದು ದಿನದಲ್ಲೇ 2,786 ಪ್ರದರ್ಶನಗಳು ನಡೆಯಲಿವೆ.

ಇನ್ನು ಈ ಚಿತ್ರಕ್ಕಾಗಿ ದರ್ಶನ್ ಅಭಿಮಾನಿಗಳು ಒಂದು ವರ್ಷದಿಂದ ಕಾಯುತ್ತಿದ್ದು, ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾ ಹಿನ್ನೆಲೆ ಒಂದು ವರ್ಷ ತಡವಾಗಿ ಸಿನಿಮಾ ಬಿಡುಗಡೆಯಾಗಿದ್ದು, ದರ್ಶನ್ ಅಭಿಮಾನಿಗಳು ಚಿತ್ರಕ್ಕೆ ಅದ್ಭುತವಾದ ಓಪನಿಂಗ್ ಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.