ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆಗೋದು ಯಾರು ಎಂದು ಕುತೂಹಲದಿಂದ ಕಾಯುತ್ತಿದ್ದ ವೀಕ್ಷಕರಿಗೆ ದೊಡ್ಡ ಸರ್ಪ್ರೈಸ್ ಸಿಕ್ಕಿದೆ.
ಹರೀಶ್ ರಾಜ್ ಅವರು ಎಲಿಮಿನೇಟ್ ಆಗುತ್ತಾರೆ ಎಂದು ನಿನ್ನೆ ರಾತ್ರಿಯಿಂದಲೂ ಗಾಸಿಪ್ ಗಳು ಹರಿದಾಡುತ್ತಿತ್ತು.
ಬಿಗ್ ಬಾಸ್ ಆ ವಿಷಯವನ್ನು ಸತ್ಯ ಮಾಡಿ, ನೋಡುಗರಿಗೆ ಒಂದು ಟ್ವಿಸ್ಟ್ ಕೊಟ್ಟಿದ್ದಾರೆ.
ಶನಿವಾರ ಕಿಚ್ಚನ ಪಂಚಾಯಿತಿ ಮುಗಿದಾಗ ಚಂದನ್ ಆಚಾರ್, ಚೈತ್ರಾ ಕೋಟೂರ್ ಹಾಗೂ ಹರೀಶ್ ರಾಜ್ ನಾಮಿನೇಟ್ ಆಗಿದ್ದ ಮೂವರು ಸದಸ್ಯರು.
ಈ ಪೈಕಿ ಹರೀಶ್ ರಾಜ್ ಹೊರ ಹೋಗುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ಭಾನುವಾರ ಕಟ್ಟಕಡೆಯ ಕ್ಷಣಗಳಲ್ಲಿ ಹರೀಶ್ ರಾಜ್ ಎಲಿಮಿನೇಟ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಘೋಷಿಸಿದರು.
ಎಲ್ಲರಿಗೂ ವಿದಾಯ ಹೇಳಿ ಹರೀಶ್ ರಾಜ್ ಹೊರ ಹೋದ ಸ್ವಲ್ಪ ಹೊತ್ತಿನ ನಂತರ, ವಾಸುಕಿ ಅವರೇ ಚಪಾತಿ ಲಟ್ಟಿಸಲು ರೆಡಿ ಇದ್ದೀರಾ ಎನ್ನುವ ಬಿಗ್ ಬಾಸ್ ಧ್ವನಿ ಕೇಳಿಬಂತು. ಏನಾಯ್ತು ಎನ್ನುವಷ್ಟರಲ್ಲಿ ಸ್ಟೋರ್ ರೂಂನಿಂದ ಹರೀಶ್ ರಾಜ್ ಅವರು ಹೊರಬಂದ್ರು.
ಈ ವಾರ ಎಲಿಮಿನೇಶನ್ ಇಲ್ಲ ಎಂದು ಬಿಗ್ ಬಾಸ್ ಘೋಷಿಸಿದ್ದು, ಮುಂದಿನ ವಾರ ಡಬಲ್ ಎಲಿಮಿನೇಶನ್ ಆಗುವ ಸಾಧ್ಯತೆ ಇದೆ.
ಕನಸು ನನಸು ಮಾಡಿದ ಬಿಗ್ ಬಾಸ್: ಹರೀಶ್ ರಾಜ್ ಅವರು ಮೊನ್ನೆಯಷ್ಟೇ ವಾಸುಕಿ ಅವರೊಟ್ಟಿಗೆ ಚರ್ಚೆ ಮಾಡುತ್ತಾ, ಯಾರಾದರೂ ಎಲಿಮಿನೇಟ್ ಆದಾಗ ನಾವೂ ಅವರೊಟ್ಟಿಗೆ ಓಡಿ ಹೋಗಿ, ಗೇಟ್ ಹತ್ತಿ ಅಲ್ಲಿಂದ ಪರಾರಿ ಆದರೆ ಹೇಗಿರುತ್ತೆ ಎಂದು ಕೇಳಿದ್ದರು.
ವಾಸುಕಿ ಅದಕ್ಕೆ ಉತ್ತರಿಸಿ ಗೇಟ್ ಹತ್ರಾನೇ ಗಾರ್ಡ್ಸ್ಗಳು ಕಾಯ್ತಿರ್ತಾರೆ. ಸ್ಟೋರ್ ರೂಂನಿಂದ ಮತ್ತೆ ಕಳಿಸುತ್ತಾರೆ ಎಂದು ಹೇಳಿದ್ರು. ವಾಸುಕಿ ಅವರ ಈ ಮಾತು ಕೇಳಿ ಒಮ್ಮೆಯಾದ್ರೂ ಹೋಗಿ ಹೊರಗೆ ಏನಿದೆ ನೋಡ್ಬೇಕು ಎಂದು ಹರೀಶ್ ರಾಜ್ ಕೇಳಿದ್ರು. ಬಿಗ್ ಬಾಸ್ ಹರೀಶ್ ಅವರ ಆಸೆಯನ್ನು ಈಡೇರಿಸಿದೆ.