ETV Bharat / sitara

ವೈಲೆಂಟ್ ಆಗಿ ವೈರಸ್ ಟಾಸ್ಕ್ ಆಡಿದ ಸ್ಪರ್ಧಿಗಳು: ​ಆಟವನ್ನೇ ರದ್ದುಗೊಳಿಸಿದ ಬಿಗ್ ಬಾಸ್

author img

By

Published : Mar 11, 2021, 10:19 AM IST

ಬಿಗ್​ ಬಾಸ್​ ಮನೆಯಲ್ಲಿ ನಾಯಕತ್ವಕ್ಕಾಗಿ ನಡೆದ ಲಾಕ್​ಡೌನ್‌ ಟಾಸ್ಕ್ ‌ಅನ್ನು ರದ್ದುಗೊಳಿಸಲಾಗಿದ್ದು, ಸ್ಪರ್ಧಿಗಳು ಆಟವನ್ನು ಬಹಳ ವೈಲೆಂಟ್ ಆಗಿ ಆಡಿದ್ದಾರೆ.

Big Boss
Big Boss

ಬಿಗ್​ ಬಾಸ್​ ಮನೆಯಲ್ಲಿ ನೀಡಿದ ವೈರಸ್ ಟಾಸ್ಕ್​ ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದ ಹಿನ್ನೆಲೆ ಹಾಗೂ ಸ್ಪರ್ಧಿಗಳು ನಿಯಮಾವಳಿಗಳನ್ನು ಗಾಳಿಗೆ ತೂರಿದ ಹಿನ್ನೆಲೆ ಆಟವನ್ನು ರದ್ದುಗೊಳಿಸಲಾಯಿತು.

ನಿಧಿ ಕಣ್ಣೀರ ಧಾರೆ!

3 ನೇ ದಿನ ವೈರಸ್ ಹಾಗೂ ಮನುಷ್ಯರ ತಂಡದಿಂದ ಆಟ ಮುಂದುವರಿದಾಗ ಸ್ಪರ್ಧಿಗಳ ಮಧ್ಯೆ ಎಳೆದಾಟ, ಕಿರುಚಾಟ, ಕಿತ್ತಾಟ ಆರಂಭವಾಯಿತು. ಹೀಗಿರುವಾಗಲೇ ಒಬ್ಬರಿಗೊಬ್ಬರು ಗಂಭೀರ ಆರೋಪವನ್ನು ಮಾಡಿಕೊಳ್ಳುತ್ತಿದ್ದರು. ವೈರಸ್​ ತಂಡಕ್ಕೆ ಪ್ರಶಾಂತ್​ ಸಂಬರಗಿ ಹಾಗೂ ಮನುಷ್ಯರ ತಂಡಕ್ಕೆ ಲ್ಯಾಗ್​ ಮಂಜು ನಾಯಕರಾಗಿದ್ದರು. ನಿಧಿ ಆರಂಭದಿಂದಲೂ ಆಕ್ಷೇಪ ಎತ್ತುತ್ತಲೇ ಇದ್ದರು. ಉದ್ದೇಶಪೂರ್ವಕವಾಗಿ ತಮ್ಮನ್ನು ಪರಚುತ್ತಿದ್ದಾರೆ, ಬೇಕೆಂತಲೇ ಅವರು ಮೈ ಮುಟ್ಟಿ ಆಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು.

ಆಟ ರದ್ದುಗೊಂಡಿದ್ದು ಹೀಗೆ?

ವೈರಸ್ ಟಾಸ್ಕ್​ನ ನಿಯಮದಂತೆ ವೈರಸ್​ಗಳಿಗೆ ಮನುಷ್ಯರು ಇಂಜೆಕ್ಷನ್ ಚುಚ್ಚಬೇಕು. ಮನುಷ್ಯರಿಗೆ ವೈರಸ್ ಆಟ್ಯಕ್​ ಆಗಿದ್ರೆ ಕ್ವಾರಂಟೈನ್​ಗೆ ಕಳುಹಿಸಬೇಕಾಗಿತ್ತು. ಅಂತೆಯೇ ವೈರಸ್ ತಂಡದ ರಾಜೀವ್, ಪ್ರಶಾಂತ್ ಕ್ವಾರಂಟೈನ್​ಗೆ ಒಳಗಾಗಿ ಸೋತರು. ಆದರೆ, ನಿಧಿ ಮಾತ್ರ ಹಗ್ಗವನ್ನು ಹಿಡಿಯದೇ ಹೊರಬಂದರು. ನಂತರ ಆಟವನ್ನು ಬಹಳ ವೈಲೆಂಟ್ ಆಗಿ ಆಡಿರುವುದಕ್ಕೆ ಬಿಗ್ ಬಾಸ್ ಬಟ್ಟೆಗಳನ್ನು ಸ್ಟೋರ್ ರೂಂಮಿಗೆ ತಂದಿಡುವಂತೆ ಆದೇಶಿಸಿ, ಗೇಮ್​ ಮುಕ್ತಾಯ ಮಾಡಿದರು.

ಆಟ ರದ್ದಾಗಿರುವುದಕ್ಕೆ ನಿಧಿಯೇ ಕಾರಣ:

ಮನೆಯ ಸದಸ್ಯರಾದ ಪ್ರಶಾಂತ್, ಮಂಜು, ಅರವಿಂದ್, ಶುಭಾ ಸೇರಿದಂತೆ ಹಲವರು ನಿಧಿ ಹಗ್ಗ ಹಿಡಿಯದೇ ಇದ್ದರಿಂದ ಆಡಿದ ಆಟವೆಲ್ಲಾ ಪ್ರಯೋಜನಕ್ಕೆ ಬರಲಿಲ್ಲ ಎಂದು ದೂರಿದರು. ನಂತರ ಆಟ ಕ್ಯಾನ್ಸಲ್ ಆಗಿದ್ದಕ್ಕೆ ನನ್ನನ್ನೇ ಎಲ್ಲರೂ ಬ್ಲೇಮ್ ಮಾಡ್ತಿದ್ದಾರೆ ಎಂದು ನಿಧಿ ದೂರಿದರು.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.