ETV Bharat / sitara

ರಾತ್ರಿ 8.30ಕ್ಕೆ ಟಿವಿ ಬಿಟ್ಟು ಕದಲದ ಪ್ರೇಕ್ಷಕ, ಮತ್ತದೇ ರೇಟಿಂಗ್​ ಕಾಯ್ದುಕೊಂಡ ಜೊತೆಜೊತೆಯಲಿ​! - 7ನೇ ವಾರವೂ ಮೊದಲ ಸ್ಥಾನ ಕಾಯ್ದಕೊಂಡ ಜೊತೆಜೊತೆಯಲಿ

ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿರುವ 'ಜೊತೆಜೊತೆಯಲಿ' ಧಾರಾವಾಹಿ ಅನು, ಆರ್ಯವರ್ಧನ್ ಇಬ್ಬರ ಪ್ರೀತಿಯ ಪಯಣದ ಆರಂಭದಲ್ಲಿದೆ. ಕಳೆದ ವಾರ ಕೂಡಾ ಮೊದಲ ಸ್ಥಾನ ಕಾಯ್ದುಕೊಂಡು ಮನೆ ಮಾತಾಗಿದೆ.

'ಜೊತೆಜೊತೆಯಲಿ'
author img

By

Published : Nov 4, 2019, 9:48 PM IST

ಆರೂರು ಜಗದೀಶ್ ನಿರ್ದೇಶನದ 'ಜೊತೆಜೊತೆಯಲಿ' ಧಾರಾವಾಹಿ ಕಿರುತೆರೆ ಲೋಕದಲ್ಲಿ ಇತಿಹಾಸ ಸೃಷ್ಟಿಸಿದೆ.‌ ಧಾರಾವಾಹಿಯೊಂದು ಅತಿ ಹೆಚ್ಚು ಜನಮನ್ನಣೆ ಪಡೆದುಕೊಂಡಿರುವುದು ಇದೇ ಮೊದಲು ಎನ್ನಬಹುದು. ಅಷ್ಟರ ಮಟ್ಟಿಗೆ ಈ ಧಾರಾವಾಹಿ ಪ್ರೇಕ್ಷಕರನ್ನು ಮೋಡಿ ಮಾಡಿದೆ.

Jothe Jotheyali maintain frist place on 7th week, 7ನೇ ವಾರವೂ ಮೊದಲ ಸ್ಥಾನ ಕಾಯ್ದಕೊಂಡ ಜೊತೆಜೊತೆಯಲಿ
ಸೆಟ್​​ನಲ್ಲಿ ತಮ್ಮ ಧಾರಾವಾಹಿ ವೀಕ್ಷಿಸುತ್ತಿರುವ ಅನಿರುದ್ಧ್​​​

ಕಳೆದ ವಾರ ಕೂಡಾ ಎಲ್ಲಾ ಧಾರಾವಾಹಿಗಳನ್ನು ಹಿಂದಿಕ್ಕಿರುವ 'ಜೊತೆಜೊತೆಯಲಿ' ಮೊದಲ ಸ್ಥಾನ ಕಾಯ್ದುಕೊಂಡಿದೆ. ಆರಂಭವಾದ 7 ವಾರಗಳಿಂದ ಸತತವಾಗಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿರುವ ಈ ಧಾರಾವಾಹಿ, ರಾಜ್ಯದಲ್ಲಿ ಮನೆ ಮನೆ ಮಾತಾಗಿದೆ. ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಹಾಗೂ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಅವರ ನಟನೆ ಹಾಗೂ ಕಥೆಯನ್ನು ಮೆಚ್ಚಿಕೊಂಡಿರುವ ಪ್ರೇಕ್ಷಕರು ಪ್ರತಿನಿತ್ಯ 8.30 ಕ್ಕೆ ಈ ಧಾರಾವಾಹಿ ನೋಡುವುದನ್ನು ಮಾತ್ರ ಮರೆಯುತ್ತಿಲ್ಲ. ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿರುವ ಧಾರಾವಾಹಿ, ಇದೀಗ ಇಬ್ಬರ ಪ್ರೀತಿಯ ಪಯಣದ ಆರಂಭದಲ್ಲಿದೆ. ಈ ವಾರದಿಂದ ಈ ಧಾರಾವಾಹಿ ಹೊಸ ತಿರುವುಗಳನ್ನು ಪಡೆಯುತ್ತಾ ಮುನ್ನುಗ್ಗಲಿದೆ. ಅನು ಪ್ರೀತಿಯನ್ನು ಆರ್ಯವರ್ಧನ್ ಒಪ್ಪಿಕೊಂಡು ಮದುವೆಯಾಗುತ್ತಾರಾ ಅಥವಾ ತನ್ನ ತಾಯಿ ಒಪ್ಪಿರುವ ಹುಡುಗ ನೊಂದಿಗೆ ಅನು ಮದುವೆಯಾಗಲಿದೆಯಾ ಎಂಬುದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.

Jothe Jotheyali serial is in Number one place, 7ನೇ ವಾರ ಹೆಚ್ಚು ಟಿಆರ್​ಪಿ ಪಡೆದ ಜೊತೆಜೊತೆಯಲಿ ಧಾರಾವಾಹಿ
'ಜೊತೆಜೊತೆಯಲಿ' ಧಾರಾವಾಹಿ ತಂಡ

'ಜೊತೆಜೊತೆಯಲಿ' ಧಾರಾವಾಹಿ ಮೂಲಕ ಕಿರುತೆರೆ ಪಯಣ ಆರಂಭಿಸಿರುವ ಅನಿರುದ್ಧ್, ಆರ್ಯವರ್ಧನ್ ಆಗಿ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಲ್ಲದೆ, ಕಿರುತೆರೆ ಲೋಕದಲ್ಲಿ ನಂಬರ್ ಒನ್ ಹೀರೋ ಎನಿಸಿಕೊಂಡಿದ್ದಾರೆ. ವಿಭಿನ್ನ ಕಥಾ ಹಂದರದ ಮೂಲಕ ವಾರವಿಡೀ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿರುವ ಈ ಧಾರಾವಾಹಿ, ಮತ್ತಷ್ಟು ಪ್ರೇಕ್ಷಕರನ್ನು ಗಳಿಸಲಿ ಎಂಬುದು ಅಭಿಮಾನಿಗಳ ಆಶಯ.

Intro:Body:ಆರೂರು ಜಗದೀಶ್ ನಿರ್ದೇಶನದ ಜೊತೆಜೊತೆಯಲಿ ಧಾರಾವಾಹಿ ಕಿರುತೆರೆ ಲೋಕದಲ್ಲಿ ಇತಿಹಾಸ ಸೃಷ್ಟಿಸಿದೆ.‌
ಇದೇ ಮೊದಲ ಬಾರಿಗೆ ಧಾರಾವಾಹಿಯೊಂದು ಅತಿ ಹೆಚ್ಚು ಟಿಆರ್ ಪಿ ಪಡೆದುಕೊಂಡಿರುವುದು ಇದೇ ಮೊದಲು.
ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುವ ಎಲ್ಲಾ ದಾರವಾಹಿ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಹಿಂದಿಕ್ಕಿರುವ ಜೊತೆ ಜೊತೆಯಲಿ ಧಾರವಾಹಿ ಕಳೆದವಾರ 13.9 ಪಿಆರ್ಪಿ ಪಡೆಯುವ ಮೂಲಕ ಟಾಪ್ ರೇಟೆಡ್ ಧಾರವಾಹಿಯಾಗಿ ಹೊರಹೊಮ್ಮಿದೆ.
ಧಾರಾವಾಹಿ ಆರಂಭವಾದ 7 ವಾರಗಳಿಂದ ಸತತವಾಗಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿರುವ ಜೊತೆ ಜೊತೆಯಲಿ ರಾಜ್ಯದಲ್ಲಿ ಮನೆ ಮನೆ ಮಾತಾಗಿದೆ.
ಅನು ಸಿರಿಮನೆ ಆಲಿಯಾಸ್ ಮೇಘಾ ಶೆಟ್ಟಿ ಹಾಗೂ ಆರ್ಯವರ್ಧನ್ ಆಲಿಯಾಸ್ ಅನಿರುದ್ಧ್ ಅವರ ನಟನೆ ಹಾಗೂ ಕಥೆಯನ್ನು ಮೆಚ್ಚಿಕೊಂಡಿರುವ ಪ್ರೇಕ್ಷಕರು ಪ್ರತಿನಿತ್ಯ 8.30 ಕ್ಕೆ ಟಿವಿ ಮುಂದೆ ಕುಳಿತುಕೊಳ್ಳುವುದನ್ನು ಮಾತ್ರ ಮರೆಯುತ್ತಿಲ್ಲ.
ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿರುವ ಧಾರವಾಹಿ ಇದೀಗ ಇಬ್ಬರ ಪ್ರೀತಿಯ ಪಯಣದ ಆರಂಭದಲ್ಲಿ ಇದೆ. ಈ ವಾರದಿಂದ ಜೊತೆ ಜೊತೆಯಲಿ ದಾರಾವಾಹಿ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಾ ಮುನ್ನುಗ್ಗುತ್ತಿದೆ ಎಂದರೆ ತಪ್ಪಾಗಲಾರದು. ಅನು ಪ್ರೀತಿಯನ್ನು ಆರ್ಯವರ್ಧನ್ ಒಪ್ಪಿಕೊಂಡು ಮದುವೆಯಾಗುತ್ತಾರಾ ಅಥವಾ ಅನು ತಾಯಿ ಒಪ್ಪಿರುವ ಹುಡುಗ ನೊಂದಿಗೆ ಅನು ಮದುವೆಯಾಗುತ್ತದೆಯೋ ಎಂಬುದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.

ಮೂಲಕ ಕಿರುತೆರೆ ಪಯಣ ಶುರು ಮಾಡಿರುವ ಅನಿರುದ್ಧ್ ಆರ್ಯವರ್ಧನ್ ಆಗಿ ಫೇಮಸ್ಸ್. ಲಕ್ಷಾಂತರ ಜನ ಅಭಿಮಾನಿಗಳನ್ನು ಸಂಪಾದಿಸಿರುವ ಅನಿರುದ್ಧ್ ಕಿರುತೆರೆ ಲೋಕದಲ್ಲಿ ನಂಬರ್ ಒನ್ ಹೀರೋ ಎನಿಸಿಕೊಂಡಿದ್ದಾರೆ.
ಧಾರಾವಾಹಿ ಆರಂಭವಾದಗಿನಿಂದಲೂ ನಂಬರ್ ಒನ್ ಸ್ಥಾನದಲ್ಲಿರುವ ಜೊತೆಜೊತೆಯಲಿ ಇಲ್ಲಿಯ ತನಕ ಆ ಸ್ಥಾನವನ್ನು ಕಾಪಾಡಿಕೊಂಡು ಬಂದಿದೆ.
ಧಾರಾವಾಹಿ ಆರಂಭವಾದಾಗ 11.8 ಟಿ ಆರ್ ಪಿ ಪಡೆದು ಮೊದಲ ಸ್ಥಾನ ಪಡೆದುಕೊಂಡಿದ್ದು ನಂತರದ ವಾರದಲ್ಲಿ 12.6 ಹೀಗೆ ಜಾಸ್ತಿ ಜಾಸ್ತಿ ಟಿ ಆರ್ ಪಿ ಪಡೆದು ಮುಂದಿನ ಸ್ಥಾನದಲ್ಲಿತ್ತು.

ವಿಭಿನ್ನ ಕಥಾ ಹಂದರದ ಮೂಲಕ ವಾರವಿಡೀ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿರುವ ಇದೀಗ ಟಿ ಆರ್ ಪಿ ಲಿಸ್ಟ್ ನಲ್ಲಿ ಹೊಸದಾದ ಮೈಲುಗಲ್ಲನ್ನೇ ಸೃಷ್ಟಿಸಿದೆ. ಅಂದರೆ ಈ ಬಾರಿ 13.9 ಟಿ ಆರ್ ಪಿ ಪಡೆದು ಇಡೀ ಕಿರುತೆರೆ ಲೋಕದಲ್ಲಿ ಹೊಸ ಸೆನ್ಸೆಷನ್ ಉಂಟು ಮಾಡಿದೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.