ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಬಹುಪಾಲು ಪ್ರಶಸ್ತಿಗಳನ್ನು ಬಾಚಿಕೊಂಡ ಗಟ್ಟಿಮೇಳ, ಜೊತೆ ಜೊತೆಯಲಿ - Gattimela serial
ಜೀ ಕುಟುಂಬ ಅವಾರ್ಡ್ಸ್ ಸಮಾರಂಭದಲ್ಲಿ ಸುಮಾರು 44 ವಿವಿಧ ವಿಭಾಗಗಳಲ್ಲಿ ಅವಾರ್ಡ್ ಗಳನ್ನು ವಿತರಿಸಲಾಗಿದೆ. ಈ ಮನರಂಜನಾ ವಾಹಿನಿಯಲ್ಲಿ ಅತೀ ಹೆಚ್ಚು ಜನಮನ್ನಣೆ ಗಳಿಸಿರುವ ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಧಾರಾವಾಹಿಗಳು ಬಹುಪಾಲು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.
ಜೀ ಕುಟುಂಬ ಅವಾರ್ಡ್ಸ್ ಸಮಾರಂಭದಲ್ಲಿ ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಧಾರಾವಾಹಿಗಳು ಬಹುಪಾಲು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.
ಬೆಸ್ಟ್ ನಟ, ಬೆಸ್ಟ್ ನಟಿ, ಜನ ಮೆಚ್ಚಿದ ನಟ, ಜನ ಮೆಚ್ಚಿದ ನಟಿ, ಬೆಸ್ಟ್ ಜೋಡಿ, ಬೆಸ್ಟ್ ಸಹೋದರ, ಬೆಸ್ಟ್ ಅಪ್ಪ ಅಮ್ಮ, ಬೆಸ್ಟ್ ಕಾಮಿಡಿಯನ್, ಬೆಸ್ಟ್ ವಿಲನ್, ಬೆಸ್ಟ್ ನಿರ್ದೇಶಕ, ಬೆಸ್ಟ್ ಧಾರಾವಾಹಿ ಸೇರಿದಂತೆ ಹೀಗೆ 44 ಪ್ರಶಸ್ತಿ ವಿಭಾಗಗಳಿದ್ದವು. ಅದರಲ್ಲಿ 15 ವಿಭಾಗಗಳ ಅವಾರ್ಡ್ಗಳನ್ನು ಜೊತೆ ಜೊತೆಯಲಿ ಧಾರಾವಾಹಿ ಮುಡಿಗೇರಿಸಿಕೊಂಡಿದೆ.
ಜೊತೆಜೊತೆಯಲಿ ಧಾರಾವಾಹಿಯಲ್ಲಿ ಅದ್ಭುತ ನಟನೆಗೆ ನಾಯಕ ನಟ ಅನಿರುದ್ಧ್ ಅವರಿಗೆ ಅತ್ಯುತ್ತಮ ನಟ, ಮೇಘನಾ ಶೆಟ್ಟಿ ಅವರಿಗೆ ಅತ್ಯುತ್ತಮ ನಟಿ, ಆರ್ಯ-ಅನು ಅತ್ಯುತ್ತಮ ಜೋಡಿ, ಹರ್ಷವರ್ಧನಿಗೆ ಬೆಸ್ಟ್ ಸಹೋದರ, ಸುಬ್ಬು-ಪುಷ್ಪಾ ಸಿರಿಮನೆ ಗೆ ಅತ್ಯುತ್ತಮ ಅಪ್ಪ-ಅಮ್ಮ, ಝೇಂಡೆ ಹಾಗೂ ಮೀರಾ ಪಾತ್ರಗಳಿಗೆ ಬೆಸ್ಟ್ ಸಪೋರ್ಟ್ ರೋಲ್, ಬೆಸ್ಟ್ ಡಿಓಪಿ, ಬೆಸ್ಟ್ ಡೈಲಾಗ್ ರೈಟರ್, ಬೆಸ್ಟ್ ಅತ್ಯುತ್ತಮ ಶೀರ್ಷಿಕೆ ಸೇರಿದಂತೆ 15 ಪ್ರಶಸ್ತಿಗಳು ಜೊತೆ ಜೊತೆಯಲಿ ಧಾರಾವಾಹಿಯ ಪಾಲಾದವು.
ಬೆಸ್ಟ್ ಅತ್ತೆ ಬ್ರಹ್ಮಗಂಟು ಧಾರಾವಾಹಿಯ ಸ್ವಾತಿ ಮತ್ತು ಬೆಸ್ಟ್ ಸೊಸೆ ಗೀತಾ, ಬೆಸ್ಟ್ ವಿಲನ್ ಪಾರು ಧಾರಾವಾಹಿಯ ಅನುಷ್ಕ ಹಾಗೂ ಕಮಲಿ ಧಾರಾವಾಹಿಯ ಅನಿಕಾ, ಬೆಸ್ಟ್ ವಿಲನ್ ಪುರುಷರ ವಿಭಾಗದಲ್ಲಿ ನಾಗಿಣಿ 2 ಧಾರಾವಾಹಿಯ ದಿಗ್ವಿಜಯ್, ಗಟ್ಟಿಮೇಳ ಧಾರಾವಾಹಿಯ ಅದಿತಿ - ಅಂಜಲಿಗೆ ಬೆಸ್ಟ್ ಸಹೋದರಿಯರು, ಬೆಸ್ಟ್ ಮಗಳು ಕಮಲಿ ಹಾಗೂ ಪಾರು, ಬೆಸ್ಟ್ ಮಗ ಆದಿತ್ಯ ಅವಾರ್ಡ್ಗಳು ದೊರಕಿದವು. ಕಾರ್ಯಕ್ರಮದಲ್ಲಿ ಶತಾಯುಷಿ ಗೋವಿಂದಮ್ಮನವರಿಗೆ ವಿಶೇಷವಾಗಿ ಆಪ್ತಬಂಧು ಬಿರುದು ನೀಡಿ ಸನ್ಮಾನಿಸಲಾಯಿತು.