ETV Bharat / sitara

ತಮ್ಮ ಬಗೆಗಿನ ಎಲ್ಲಾ ವದಂತಿಗಳಿಗೆ ಫುಲ್​​​ಸ್ಟಾಪ್​​​​​​​ ಇಟ್ಟ ಅನಿರುದ್ಧ್ - Jotejoteyali fame Anirudh

ನಾನು ಯಾವುದೇ ಕಾರಣಕ್ಕೂ 'ಜೊತೆ ಜೊತೆಯಲಿ' ಧಾರಾವಾಹಿ ಬಿಡುತ್ತಿಲ್ಲ. ಇಂತಹ ಸುಳ್ಳುಸುದ್ದಿಗಳಿಗೆ ಕಿವಿ ಕೊಡಬೇಡಿ. ಇಷ್ಟು ದಿನ ನನ್ನನ್ನು ಹಾಗೂ ನಮ್ಮ ಧಾರಾವಾಹಿ ತಂಡದವರನ್ನು ಹೇಗೆ ಪ್ರೋತ್ಸಾಹಿಸಿದಿರೋ ಇನ್ಮುಂದೆ ಕೂಡಾ ಅದೇ ರೀತಿ ಪ್ರೋತ್ಸಾಹಿಸಿ ಎಂದು ಅನಿರುದ್ಧ್ ಮನವಿ ಮಾಡಿದ್ದಾರೆ.

Anirudh clarity about fake news
ಅನಿರುದ್ಧ್
author img

By

Published : Dec 12, 2020, 12:20 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಜೊತೆಜೊತೆಯಲಿ' ಆರ್ಯವರ್ಧನ್ ಆಗಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಅನಿರುದ್ಧ್ ಮನೋಜ್ಞ ನಟನೆಗೆ ಮನಸೋಲದವರಿಲ್ಲ. ಬ್ರೇಕ್​​ಗಾಗಿ ಕಾಯುತ್ತಿದ್ದ ಅನಿರುದ್ಧ್​​ ಅವರಿಗೆ ಈ ಧಾರಾವಾಹಿ ದೊಡ್ಡ ಮಟ್ಟಿನ ಹೆಸರು ತಂದು ನೀಡಿತ್ತು. ಅಲ್ಲದೆ ಕಿರುತೆರೆಯಲ್ಲಿ ಸೆನ್ಸೇಷನ್​ ಸೃಷ್ಟಿಸಿತ್ತು.

  • " class="align-text-top noRightClick twitterSection" data="">

ಇದೀಗ ಅನಿರುದ್ಧ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿಯೊಂದು ಹರಿದಾಡುತ್ತಿದೆ. ಅನಿರುದ್ಧ್ ಬಿಗ್​​​ಬಾಸ್​​ ಸೀಸನ್ 8 ರಲ್ಲಿ ಭಾಗವಹಿಸುತ್ತಿದ್ದು 'ಜೊತೆಜೊತೆಯಲಿ' ಧಾರಾವಾಹಿಯಿಂದ ಹೊರಬರುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಇದು ಧಾರಾವಾಹಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದರೆ ಅನಿರುದ್ಧ್ ಈ ವಿಚಾರವಾಗಿ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Anirudh clarity about fake news
'ಜೊತೆ ಜೊತೆಯಲಿ' ಖ್ಯಾತಿಯ ಅನಿರುದ್ಧ್

"ನಾನು 'ಜೊತೆ ಜೊತೆಯಲಿ' ಧಾರಾವಾಹಿಯನ್ನು ಬಿಡುತ್ತಿದ್ದೇನೆ ಎಂಬ ಸುದ್ದಿಗಳು ಹರಡುತ್ತಿದೆ. ಇದು ಸುಳ್ಳು ಸುದ್ದಿ, ದಯವಿಟ್ಟು ಯಾರೂ ಕೂಡಾ ಇಂತಹ ಸುಳ್ಳು ಸುದ್ದಿಗಳಿಗೆ ಕಿವಿ ಗೊಡಬೇಡಿ. ಯಾವುದೇ ಕಾರಣಕ್ಕೂ 'ಜೊತೆ ಜೊತೆಯಲಿ ' ಧಾರಾವಾಹಿಯನ್ನು ಬಿಡುವುದಿಲ್ಲ. ತಮ್ಮ ಪ್ರೀತಿ, ಹಾರೈಕೆ , ಆಶೀರ್ವಾದ ನನ್ನ ಮೇಲೆ ಮತ್ತು ನಮ್ಮ ತಂಡದ ಮೇಲೆ ಇಷ್ಟ ದಿನ ಯಾವ ರೀತಿ ಇತ್ತೋ, ಇನ್ನು ಮುಂದೆಯೂ ಅದೇ ರೀತಿ ಇರಲಿ ಎಂದು ಕೇಳಿಕೊಳ್ಳುತ್ತೇನೆ" ಎಂದು ಹೇಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.