ETV Bharat / sitara

ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ರಂಗಭೂಮಿ ಕಲಾವಿದ ಜಯಕುಮಾರ್​ ಕೊಡಗನೂರು

ಕಿರುತೆರೆ ಕ್ಷೇತ್ರದ ಸಾಧನೆಗಾಗಿ ರಂಗಭೂಮಿ ನಟ ಜಯಕುಮಾರ್ ಕೊಡಗನೂರು ಅವರಿಗೆ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಗುಬ್ಬಿ ಕಂಪನಿ, ಗುಡಗೇರಿ ಕುಮಾರಸ್ವಾಮಿ, ಚಿಂದೋಡಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ 50 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

author img

By

Published : Oct 28, 2019, 9:33 PM IST

ಜಯಕುಮಾರ್ ಕೊಡಗನೂರು

ವರನಟ ಡಾ. ರಾಜ್​​​​ಕುಮಾರ್ ಅವರ ತದ್ರೂಪು ಎಂದೇ ಕರೆಸಿಕೊಳ್ಳುತ್ತಿದ್ದ ರಂಗಭೂಮಿ ನಟ ಜಯಕುಮಾರ್ ಕೊಡಗನೂರು 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಯಕುಮಾರ್ ಮೂಲತಃ ದಾವಣಗೆರೆಯ ಕೊಡಗನೂರಿನವರು. ರಂಗಭೂಮಿಯ ಅಪ್ಪಟ ಕಲಾವಿದರಾದ ಇವರು ಅಭಿನಯ ಚತುರರು. ಕಿರುತೆರೆ ಕ್ಷೇತ್ರದ ಸಾಧನೆಗಾಗಿ ಇವರಿಗೆ ಈ ಪ್ರಶಸ್ತಿ ಲಭಿಸಿದೆ. ಗುಬ್ಬಿ ಕಂಪನಿ, ಗುಡಗೇರಿ ಕುಮಾರಸ್ವಾಮಿ, ಚಿಂದೋಡಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ 50 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅಂಬರೀಶ್, ವಿಷ್ಣುವರ್ಧನ್, ದೇವರಾಜ್, ದರ್ಶನ್, ಶಶಿಕುಮಾರ್, ಶಿವರಾಜ್​​ಕುಮಾರ್ ಸೇರಿದಂತೆ ಅನೇಕ ನಟರ ಜೊತೆ ಪೋಷಕ ಪಾತ್ರದಲ್ಲಿ ಜಯಕುಮಾರ್ ಅಭಿನಯಿಸಿದ್ದಾರೆ. ಇತ್ತೀಚೆಗೆ ಕಲಬುರಗಿಯ ಕಾಯಂ ಮೊಕ್ಕಾಂ ನಾಟಕ ಕಂಪನಿ ಆಯೋಜಿಸಿದ್ದ ನಾಟಕವೊಂದರಲ್ಲಿ ನಟಿಸುತ್ತಿದ್ದ ವೇಳೆ ಜಯಕುಮಾರ್​​ಗೆ ಹೃದಯಾಘಾತ ಸಂಭವಿಸಿತ್ತು. ಆ ವೇಳೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಜಯಕುಮಾರ್ ಗುಣಮುಖರಾಗಿ ದಾವಣಗೆರೆಯಲ್ಲಿ ವಾಸವಿದ್ದಾರೆ ಎಂದು ಪುತ್ರ ಮಾರುತಿ ತಿಳಿಸಿದ್ದಾರೆ.

Intro:Body:ಡಾ.ರಾಜಕುಮಾರ್ ಅವರ ತದ್ರೂಪು ಎಂದೇ ಕರೆಸಿಕೊಳ್ಳುತ್ತಿದ್ದ ಜಯಕುಮಾರ್ ಕೊಡಗನೂರು 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೂಲತಃ ದಾವಣಗೆರೆಯ ಕೊಡಗನೂರಿನವರು.
ರಂಗಭೂಮಿಯ ಅಪ್ಪಟ ಕಲಾವಿದರಾದ ಇವರು ಅಭಿನಯ ಚತುರರು. ಕಿರುತೆರೆ ಕ್ಷೇತ್ರದ ಸಾಧನೆಗಾಗಿ ಇವರಿಗೆ ಪ್ರಶಸ್ತಿ ಲಭಿಸಿದೆ.
ಗುಬ್ಬಿ ಕಂಪನಿ ಗುಡಗೇರಿ ಕುಮಾರಸ್ವಾಮಿ ಚಿಂದೋಡಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ 50 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
ನಟರಾದ ಶಿವರಾಜ್ ಕುಮಾರ್ ಅವರೊಂದಿಗೆ ಜನುಮದ ಜೋಡಿಯಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ, ಅಂಬರೀಶ್, ವಿಷ್ಣುವರ್ಧನ್, ದೇವರಾಜ್, ದರ್ಶನ್, ಶಶಿಕುಮಾರ್ ಜನುಮದ ಜೋಡಿ ಸೇರಿದಂತೆ ಹಲವು ನಟರೊಂದಿಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನೋಡಲು ಡಾ. ರಾಜಕುಮಾರ್ ಅವರಂತೆಯೇ ಕಾಣುವ ಅಭಿಜಾತ ಕಲಾವಿದ. ಇವರು ಇತ್ತೀಚೆಗೆ ಕಲಬುರ್ಗಿಯ ಖಾಯಂ ಮೊಕ್ಕಾಂ ನಾಟಕ ಕಂಪನಿ ಆಯೋಜಿಸಿದ್ದ ನಾಟಕವೊಂದರಲ್ಲಿ ನಟಿಸುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿತ್ತು. ನಂತರ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ದಾವಣಗೆರೆಯಲ್ಲಿ ವಾಸವಿದ್ದಾರೆ ಎಂದು ಪುತ್ರ ಮಾರುತಿ ತಿಳಿಸಿದ್ದಾರೆ.
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.