ETV Bharat / sitara

ಕೊರೊನಾ ರೋಗಿಗಳ ಸಹಾಯಕ್ಕೆ ನಿಂತ 'ಐರಾವನ್' ಸಿನಿಮಾ ತಂಡ

ನಟ ಜೆ.ಕೆ ಅಭಿನಯದ ಐರಾವನ್‌ ಚಿತ್ರತಂಡ, ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಜನರ ಸೇವೆಗೆ ಮುಂದಾಗಿದ್ದು, ಆಕ್ಸಿಜನ್​ ಮತ್ತು ಆ್ಯಂಬುಲೆನ್ಸ್​ ಸೇವೆ ನೀಡಲಿದ್ದಾರೆ.

iravan
ಐರಾವನ್ ಸಿನಿಮಾ ತಂಡದಿಂದ ಸಹಾಯ
author img

By

Published : May 17, 2021, 11:46 AM IST

ಕೊರೊನಾದಿಂದ ನಗರ ಹಾಗೂ ಹಳ್ಳಿಗಳಲ್ಲಿ ಜನರು ಸಂಕಷ್ಟ ಪಡುತ್ತಿದ್ದು, ಅನೇಕರಿಗೆ ಬೆಡ್, ಆಕ್ಸಿಜನ್ ಕೊರತೆಯುಂಟಾಗಿದೆ. ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಉಪೇಂದ್ರ, ರಾಗಿಣಿ ದ್ವಿವೇದಿ,‌ ಸಂಜನ‌e ಗರ್ಲಾನಿ, ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚಾ ಸೇರಿದಂತೆ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಇದೀಗ ನಟ ಜೆಕೆ ಅಭಿನಯದ ಐರಾವನ್‌ ಚಿತ್ರತಂಡ, ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಜನರ ಸೇವೆಗೆ ಮುಂದಾಗಿದ್ದಾರೆ. ಐರಾವನ್ ಚಿತ್ರದ ನಿರ್ಮಾಪಕ ಡಾ. ನಿರಂತರ್ ಗಣೇಶ್, ಚಿತ್ರದ ನಾಯಕ ಜಯರಾಮ್ ಕಾರ್ತಿಕ್ (ಜೆಕೆ) ಮತ್ತು ನಟ ವಿವೇಕ್ ಆಕ್ಸಿಜನ್​ ವಾಹನವನ್ನು, ಬ್ಯಾಟರಾಯನಪುರ ವ್ಯಾಪ್ತಿಯ ಜನರ ಸೇವೆಗೆ ನೀಡಿದ್ದಾರೆ. ಅದರ ಜೊತೆಗೆ 10 ಸಾವಿರ ಕೋವಿಡ್ ಮೆಡಿಕಲ್ ಕಿಟ್, ಔಷಧಗಳನ್ನೂ ವಿತರಣೆ ಮಾಡಿದ್ದಾರೆ.

ಈ ಕಾರ್ಯಕ್ಕೆ ಆರ್​ಎಸ್​ಎಸ್​ನ ಪ್ರಾದೇಶಿಕ ಜನರಲ್ ಸೆಕ್ರೆಟರಿ ಎನ್. ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯದ ಆರೋಗ್ಯ ಭಾರತಿಯ ಜಂಟಿ ಕಾರ್ಯದರ್ಶಿ ಗಂಗಾಧರನ್ ಚಾಲನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ನಿರ್ಮಾಪಕ ನಿರಂತರ್, ಇಂತಹ ವಿಷಮ ಕಾಲಘಟ್ಟದಲ್ಲಿ ಸಮಾಜಕ್ಕೆ ನಾವು ಮಾಡಬೇಕಾದ ಜವಾಬ್ದಾರಿ ಇದು. ಎಲ್ಲೆಡೆ ಆ್ಯಂಬುಲನ್ಸ್ ಕೊರತೆ ಕಾಡುತ್ತಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು ಬ್ಯಾಟರಾಯನಪುರ ವ್ಯಾಪ್ತಿಗೆ ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ನೀಡಿದ್ದೇವೆ. ಇದರ ಜತೆಗೆ ಕೋವಿಡ್ ಮೆಡಿಕಲ್ ಕಿಟ್​ನ್ನೂ ವಿತರಣೆ ಮಾಡಿದ್ದೇವೆ ಎಂದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.