ETV Bharat / sitara

'ಸರಸು' ಧಾರಾವಾಹಿ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಇಂಚರಾ ಜೋಷಿ - Manasi joshi sister Inchara

ಕಿರುತೆರೆ ನಟಿ ಮಾನಸಿ ಜೋಷಿ ಅವರ ಸಹೋದರಿ ಇಂಚರಾ ಜೋಷಿ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸರಸು' ಧಾರಾವಾಹಿಯಲ್ಲಿ ನಾಯಕ ಅರವಿಂದ್​​​​​​​ ತಂಗಿಯಾಗಿ ಇಂಚರಾ ಅಭಿನಯಿಸುತ್ತಿದ್ದಾರೆ.

Inchara joshi second innings in serial
ಇಂಚರಾ ಜೋಷಿ
author img

By

Published : Nov 18, 2020, 12:35 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಂಗನಾಯಕಿ' ಧಾರಾವಾಹಿಯಲ್ಲಿ ನಾಯಕ ಚಿರಂತ್ ತಂಗಿ ಛಾಯಾ ಆಗಿ ನಟಿಸದ್ದ ಚೆಲುವೆ ಹೆಸರು ಇಂಚರಾ ಜೋಷಿ. ಇಂಚರಾ ಇದೀಗ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸರಸು' ಧಾರಾವಾಹಿಯಲ್ಲಿ ನಾಯಕ ಅರವಿಂದ್​​​​​​​ ತಂಗಿಯಾಗಿ ಇಂಚರಾ ಅಭಿನಯಿಸುತ್ತಿದ್ದಾರೆ.

Inchara joshi second innings in serial
ಕಿರುತೆರೆ ನಟಿ ಇಂಚರಾ ಜೋಷಿ

ರಂಗನಾಯಕಿಯ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣದ 'ಮರಳಿ ಬಂದಳು ಸೀತೆ' ಧಾರಾವಾಹಿಯಲ್ಲಿ ಕೂಡಾ ನಾಯಕನ ತಂಗಿ ಭೂಮಿ ಆಗಿ ಅಭಿನಯಿಸಿದ್ದ ಇಂಚರಾ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭೂಮಿ ತಾಯಾಣೆ ಧಾರಾವಾಹಿಯಲ್ಲಿ ಕೂಡಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಸರಸು ಧಾರಾವಾಹಿಯಲ್ಲಿ ಅರವಿಂದ್​​​​ ತಂಗಿಯಾಗಿ ನಟಿಸುತ್ತಿರುವ ಇಂಚರಾ ಬಣ್ಣದ ಬದುಕಿಗೆ ಕಾಲಿಟ್ಟಿದ್ದು ನಿಜಕ್ಕೂ ರೋಚಕವಾದ ಸಂಗತಿ.

Inchara joshi second innings in serial
'ಸರಸು' ಧಾರಾವಾಹಿಯಲ್ಲಿ ನಟಿಸುತ್ತಿರುವ ಇಂಚರ

ಇಂಚರಾಗೆ ಮೊದಲಿನಿಂದಲೂ ಸಿನಿಮಾ ನೋಡುವುದು ಎಂದರೆ ತುಂಬಾ ಖುಷಿ. ಅದರ ಜೊತೆಗೆ ತಾವು ನೋಡಿದ ಸಿನಿಮಾದಲ್ಲಿ ವಿಶೇಷ ಎನಿಸಿದ್ದನ್ನು ಆಕೆ ಬರೆದಿಟ್ಟುಕೊಳ್ಳುತ್ತಿದ್ದರು. ತಮ್ಮ 13ನೇ ವಯಸ್ಸಿನಲ್ಲೇ 8ನೇ ತರಗತಿ ಕಲಿಯುತ್ತಿರುವಾಗ 'ವರದಕ್ಷಿಣೆ ಕಿರುಕುಳ' ಎಂಬ ನಾಟಕ ಬರೆದು ನಿರ್ದೇಶಿಸಿದ್ದರು. ಇಂಚರಾ ಬರೆದ ನಾಟಕಕ್ಕೆ ಜಿಲ್ಲಾ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು. ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವುದರ ಕುರಿತು ಕೂಡಾ ನಾಟಕ ಬರೆದ ಈಕೆ ಆ ನಾಟಕದಲ್ಲಿ ಖಳನಾಯಕಿಯಾಗಿ ಬಣ್ಣ ಹಚ್ಚಿದ್ದರು. ಮುಂದೆ ಓಂಕಾರ್​​​​​​​​​​​​​​ ನಿರ್ದೇಶನದ 'ಸೀಟ್ ಫಾರ್ 10 ಲಕ್ಷ' ಎಂಬ ಕಿರುಚಿತ್ರದಲ್ಲಿ ನಟಿಸಿದ್ದ ಇಂಚರಾ, ಉಷಾ ಭಂಡಾರಿ ಅವರ ಬಳಿ ಮೂರು ತಿಂಗಳ ಕಾಲ ನಟನೆ ತರಬೇತಿಯನ್ನು ಕೂಡಾ ಪಡೆದರು.

Inchara joshi second innings in serial
ಇಂಚರಾ, ಮಾನಸಿ ಜೋಷಿ ಅವರ ಸಹೋದರಿ

ಆ್ಯಕ್ಟಿಂಗ್ ತರಬೇತಿ ಪಡೆದ ನಂತರ ಕಿರುತೆರೆಗೆ ಕಾಲಿಟ್ಟ ಇಂಚರಾ, ಇದೀಗ ಪರಭಾಷೆಯ ಕಿರುತೆರೆಯಲ್ಲೂ ನಟಿಸುತ್ತಿದ್ದಾರೆ. 'ಅರವಿಂದ ಸಮೇತ' ಎಂಬ ತೆಲುಗು ಧಾರಾವಾಹಿಯಲ್ಲಿ ಇಂಚರಾ ಅಭಿನಯಿಸುತ್ತಿದ್ದಾರೆ. 'ರಾಧಾ ರಮಣ' ಧಾರಾವಾಹಿಯಲ್ಲಿ ಸ್ಕಂದ ಅಶೋಕ್ ಅವರ ತಂಗಿಯಾಗಿ ಮಾನ್ಸಿ ಜೋಷಿ ಕಾಣಿಸಿಕೊಂಡಿದ್ದರು. ಇದೀಗ 'ಸರಸು' ಧಾರಾವಾಹಿಯಲ್ಲಿ ಇಂಚರಾ ಜೋಷಿ ಸ್ಕಂದ ಅವರ ತಂಗಿಯಾಗಿ ನಡೆಸುತ್ತಿದ್ದಾರೆ. ಇಂಚರಾ ಜೋಷಿ ಹಾಗೂ ಮಾನ್ಸಿ ಜೋಷಿ ಇಬ್ಬರೂ ಅಕ್ಕ-ತಂಗಿ ಆಗಿದ್ದು ಇಬ್ಬರೂ ಒಂದೇ ನಟನ ತಂಗಿ ಆಗಿ ನಟಿಸಿರುವುದು ವಿಶೇಷ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.