ಚುನಾವಣಾಧಿಕಾರಿಗೆ ಅವರು ಸಲ್ಲಿಸಿರುವ ನಾಮಪತ್ರದಲ್ಲಿ ತಮ್ಮ ಆಸ್ತಿಯ ವಿವರಣೆ ನೀಡಿದ್ದಾರೆ. ಬಹುಭಾಷಾ ನಟ, ನಿರ್ದೇಶಕ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರೈ ಆಸ್ತಿ ಎಷ್ಟು ಎಂಬುದು ಸದ್ಯ ರಿವೀಲ್ ಆಗಿದೆ.
ರೈ ಅವರ ಒಟ್ಟು ಸ್ಥಿರಾಸ್ತಿ ಪ್ರಮಾಣ 7,53,43,870 ರೂ.ಇದರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್ಮೆಂಟ್, ಫಾರಂ ಹೌಸ್, ಕಟ್ಟಡಗಳು ಸೇರಿಕೊಂಡಿವೆ. ಇನ್ನು ಕಾರು, ಚಿನ್ನಾಭರಣ ಸೇರಿದಂತೆ 4,93,90,352 ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಪ್ರಕಾಶ್ ರೈ ತಿಳಿಸಿದ್ದಾರೆ.