ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೂಮಳೆ ಧಾರಾವಾಹಿಯು ಯಶಸ್ವಿ ನೂರು ಸಂಚಿಕೆಗಳನ್ನು ಪೂರೈಸಿದೆ.
ಕಳೆದ ವರ್ಷ ನವೆಂಬರ್ 20 ರಂದು ಆರಂಭವಾಗಿದ್ದ ಹೂಮಳೆ ಧಾರಾವಾಹಿಯು ಹಿಂದಿಯ ಚೋಟಿ ಸರ್ದಾರಿಣಿ ಧಾರಾವಾಹಿಯ ರಿಮೇಕ್ ಆಗಿದ್ದು, ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಬ್ಯುಸಿನೆಸ್ ಮ್ಯಾನ್ ಹಾಗೂ ವಿದುರ ಯದುವೀರ್ ತನ್ನ ಮಗನನ್ನು ತಂದೆ ಹಾಗೂ ತಾಯಿಯಾಗಿ ಸಾಕುತ್ತಿರುತ್ತಾನೆ. ಸಣ್ಣ ವಯಸ್ಸಿನಲ್ಲಿಯೇ ಆಡಳಿತ ಪಕ್ಷದ ಅಧ್ಯಕ್ಷನಾಗಿ ಗುರುತಿಸಿಕೊಂಡಿರುವ ಯದುವೀರ್ ಉತ್ತಮ ತಂದೆಯಾಗಿ ತನ್ನ ಮಗನ ಆಸೆಗಳನ್ನು ಪೂರೈಸಲು ಪ್ರಯತ್ನಿಸುತ್ತಾನೆ. ಇತ್ತ ನಾಯಕಿ ಲಹರಿ ಶ್ರೀಮಂತ ಕುಟುಂಬದವಳಾಗಿರುತ್ತಾಳೆ. ಕಾರ್ಪೋರೆಟ್ ಕಾವೇರಿ ಮಗಳಾಗಿರುವ ಲಹರಿ ಮುಕುಂದ್ ಎನ್ನುವ ಹುಡುಗನ ಪ್ರೀತಿಯಲ್ಲಿ ಬೀಳುತ್ತಾಳೆ.
ಮುಕುಂದ್ ಮಗುವಿಗೆ ತಾಯಿಯಾಗಿರುವ ಲಹರಿ ಅವನನ್ನೇ ಬಾಳಸಂಗಾತಿಯನ್ನಾಗಿ ಪಡೆಯುವ ಹಂಬಲದಲ್ಲಿರುತ್ತಾಳೆ. ಆದರೆ ಕಾವೇರಿ ಮಗಳು ಲಹರಿಯ ಪ್ರೀತಿಗೆ ಒಪ್ಪಿಗೆ ನೀಡುವುದಿಲ್ಲ. ತನ್ನ ರಾಜಕೀಯ ದಾಳಕ್ಕೆ ಮಗಳನ್ನು ಬಳಸುವ ಕಾವೇರಿ ಮುಕುಂದ್ನನ್ನು ತಾನೇ ಕೊಂದು, ಲಹರಿಯನ್ನು ಯದುವೀರ್ ಜೊತೆ ಮದುವೆ ಮಾಡುತ್ತಾಳೆ.
ಇತ್ತ ಲಹರಿ ತಾಯಿಯಾಗುತ್ತಿರುವ ವಿಚಾರ ಯದುವೀರ್ ಗೆ ತಿಳಿದಿದೆ. ಲಹರಿಗೆ ಡೈವೋರ್ಸ್ ನೀಡಲಿರುವ ಯದುವೀರ್ ಆಕೆಯನ್ನು ಬೇರೆ ಕಡೆ ಸೆಟಲ್ ಮಾಡುವ ಭರವಸೆ ನೀಡುತ್ತಾನೆ. ಜೊತೆಗೆ ಯದುವೀರ್ ಮಗ ಈಶಾನ್ ಲಹರಿಯನ್ನು ತುಂಬಾ ಇಷ್ಟಪಡುತ್ತಿದ್ದಾನೆ. ಲಹರಿ ಈಶಾನ್ ನಿಂದ ದೂರವಾಗುತ್ತಾಳಾ, ಯದುವೀರ್ ಲಹರಿ ಮಧ್ಯೆ ಪ್ರೀತಿ ಮೂಡುತ್ತದಾ ಎಂಬುದನ್ನು ಕಾದು ನೋಡಬೇಕಾಗಿದೆ.
ಕಿರುತೆರೆ ನಟಿ, ನಿರೂಪಕಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಚಂದನಾ ಅನಂತ ಕೃಷ್ಣ ನಾಯಕಿ ಲಹರಿಯಾಗಿ ಕಿರುತೆರೆಗೆ ಮರಳಿದ್ದಾರೆ. ಇವಳು ಸುಜಾತಾ ಧಾರಾವಾಹಿಯಲ್ಲಿ ನಾಯಕ ಪಾರ್ಥನಾಳಾಗಿ ಅಭಿನಯಿಸಿದ್ದ ಯಶವಂತ್ ನಾಯಕ ಯದುವೀರ್ ಆಗಿ ನಟಿಸುತ್ತಿದ್ದಾರೆ. ಉಳಿದಂತೆ ಸುಜಾತಾ ಅಕ್ಷಯ, ಶ್ರೀರಾಮ್, ಆರೋಹಿ, ಆರತಿ ಪಡುಬಿದ್ರಿ ಮುಂತಾದ ಕಲಾವಿದರುಗಳು ಈ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ.