ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಸೂಪರ್ ದಂಪತಿ' ಮನರಂಜನೆ ಕಾರ್ಯಕ್ರಮ ಬೆಂಗಳೂರಿನಿಂದ ಹೊರಗೆ ನಡೆಯಲಿದೆ. ಇತ್ತೀಚೆಗೆ ನಗರದ ಮಲ್ಲೇಶ್ವರದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ರಾಜ್ಯಾದ್ಯಂತ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಕಾರ್ಯಕ್ರಮ ನಡೆಸಲು ಪ್ಲ್ಯಾನ್ ಮಾಡಿದ್ದಾರೆ 'ಒಗ್ಗರಣೆ ಡಬ್ಬಿ' ಖ್ಯಾತಿಯ ಮುರಳಿ.
- " class="align-text-top noRightClick twitterSection" data="">
ಜುಲೈ 10 ರಿಂದ 14 ವರೆಗೆ ತುಮಕೂರು, ಶಿರಾ, ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆಗಳಲ್ಲಿ ಮೊದಲ ಹಂತದ ಶೂಟಿಂಗ್ ನಡೆಯಲಿದೆ. ಮತ್ತೆ ಎರಡನೇ ಹಂತದ ಶೂಟಿಂಗ್ ದಾವಣಗೆರೆ, ಹರಿಹರ, ರಾಣೆಬೆನ್ನೂರು, ಬ್ಯಾಡಗಿ, ಜಗಳೂರು ತಾಲೂಕುಗಳಲ್ಲಿ ನಡೆಯಲಿದೆ. ಎಲ್ಲಾ ತಾಲೂಕುಗಳಲ್ಲಿ ಈ ಕಾರ್ಯಕ್ರಮ ನಡೆಯುವುದರಿಂದ ಚಲಿಸುವ ಸ್ಟೇಜ್ ಸಿದ್ಧಪಡಿಸಲಾಗಿದೆ. ಪ್ರತಿದಿನ ಸಂಜೆ ವೇಳೆ 3 ಎಪಿಸೋಡ್ ಅಂದರೆ 6 ಗಂಟೆಗಳ ಕಾಲ ಶೂಟಿಂಗ್ ಮಾಡಲಾಗುವುದು ಎನ್ನುತ್ತಾರೆ ಕಾರ್ಯಕ್ರಮ ನಿರ್ಮಾಪಕ ಹಾಗೂ ನಿರೂಪಕ ಬಿ.ಆರ್. ಮುರಳೀಧರ್ (ಮುರಳಿ).

ಈ ಗೇಮ್ ಶೋಗಾಗಿ ಮುರಳಿ ಡ್ರೆಸ್ಕೋಡ್ ಕೂಡಾ ರೆಡಿಮಾಡಿಕೊಂಡಿದ್ದಾರೆ. ರಾಜ್ಯದ ಎಲ್ಲಾ ಭಾಗಗಳಿಗೂ ಅನ್ವಯವಾಗುವಂತಹ ಉಡುಪು ಧರಿಸಲಿದ್ದಾರೆ. ಈ ಗೇಮ್ ಶೋನಲ್ಲಿ ಹಾಸ್ಯ, ಆಟ, ಮನರಂಜನೆ ಎಲ್ಲವೂ ಇರಲಿದೆ. ಇದಕ್ಕಾಗಿ 3 ತಿಂಗಳಿನಿಂದಲೇ ಸಿದ್ಧತೆ ನಡೆದಿದೆ. ಕಿರುತೆರೆಯಲ್ಲೇ ಮೊದಲ ಬಾರಿಗೆ ಈ ರೀತಿಯ ವಿಭಿನ್ನ ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ ಮುರಳಿ. ಜುಲೈ 29 ರಿಂದ ಪ್ರತಿದಿನ ಅಂದರೆ ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.