ETV Bharat / sitara

ರಂಗಭೂಮಿಯಿಂದ ಸಿನಿಮಾಗೆ ಪದಾರ್ಪಣೆ ಮಾಡಿದ್ದ ಜಿ ಕೆ ಗೋವಿಂದರಾವ್.. ಅವರ ಬದುಕೇ 'ಕಥಾಸಂಗಮ'..

author img

By

Published : Oct 15, 2021, 6:49 PM IST

ಕಥಾ ಸಂಗಮ ಚಿತ್ರದಲ್ಲಿ ಜಿ.ಕೆ ಗೋವಿಂದರಾವ್ ನಟನೆ ನೋಡುಗರ ಗಮನ ಸೆಳೆದಿತ್ತು. ಈ ಸಿನಿಮಾ ಬಳಿಕ ಅವರು ವಿಷ್ಣುವರ್ಧನ್ ಅಭಿನಯದ ಬಂಧನ, ಕಾನೂರು ಹೆಗ್ಗಡತಿ, ರೇ, ಗ್ರಹಣ, ಮಿಥಿಲೆಯ ಸೀತೆಯರು, ಕರ್ಪ್ಯು, ಶಾಸ್ತ್ರಿ, ನಿಶ್ಯಬ್ಧ, ಶಿವರಾಜ್ ಕುಮಾರ್ ನಟನೆಯ ಭೂಮಿ ತಾಯಿ ಚೊಚ್ಚಲ ಮಗ ಸೇರಿ ಹಲವು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರಿಯರನ್ನ ರಂಜಿಸಿದ್ದರು..

Gk Govindarao
ಜಿ.ಕೆ ಗೋವಿಂದರಾವ್

ರಂಗಭೂಮಿ, ಕಿರುತೆರೆ, ಸಿನಿಮಾ ನಟ ಹಾಗೂ ಪ್ರಗತಿಪರ ಚಿಂತಕರಾಗಿ ಗುರುತಿಸಿಕೊಂಡಿದ್ದವರು ಜಿ ಕೆ ಗೋವಿಂದರಾವ್. ನೇರ ಮಾತು, ಬೇಸ್ ವಾಯ್ಸ್‌ನಿಂದಲೇ ಛಾಪು ಮೂಡಿಸಿದ ಜಿ ಕೆ ಗೋವಿಂದರಾವ್ ಇಂದು ಹುಬ್ಬಳ್ಳಿಯ ಗೋಲ್ಡನ್ ಟೌನ್ ಬಡಾವಣೆಯಲ್ಲಿರುವ ತಮ್ಮ ಪುತ್ರಿಯ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.

"ಮೀನಾ ಮದುವೆ" ನಾಟಕದಲ್ಲಿ ಅಭಿನಯಿಸಿ ಪ್ರಥಮ ಬಹುಮಾನ

ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ರಾರಾಜಿಸಿದ ಜಿ ಕೆ ಗೋವಿಂದರಾವ್, ಸಿನಿಮಾ ಪಯಣ ಶುರುವಾಗಿದ್ದು ಮಾತ್ರ ಅಚ್ಚರಿ. ತಮ್ಮ 12ನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪ್ರವೇಶ ಮಾಡುವ ಮೂಲಕ ಕಲಾವಿದರಾಗಿ ಹೊರ ಹೊಮ್ಮಿದರು. "ಮೀನಾ ಮದುವೆ" ಎಂಬ ನಾಟಕದಲ್ಲಿ ಅಭಿನಯಿಸಿ ಪ್ರಥಮ ಬಹುಮಾನ ಪಡೆದಿದ್ದ ಜಿ ಕೆ ಗೋವಿಂದರಾವ್​ಗೆ ಭವಿಷ್ಯದಲ್ಲಿ ಅದ್ಭುತ ನಟನಾಗುವ ಸೂಚನೆ ಆವಾಗಲೇ ಸಿಕ್ಕಿತ್ತು.

Gk Govindarao
ಜಿ.ಕೆ ಗೋವಿಂದರಾವ್

ಕಾದಂಬರಿಕಾರರಾಗಿ, ಬರಹಗಾರರಾಗಿ ಹಾಗೂ ಪ್ರಗತಿಪರ ಚಿಂತಕರಾಗಿ ಗುರುತಿಸಿಕೊಂಡಿದ್ದ ಜಿಕೆಜಿ ಅಂಕುರ್ ನಿರ್ದೇಶನದ 'ಸಂಸ್ಕಾರ' ನಾಟಕದಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಗಿರೀಶ್ ಕಾರ್ನಾಡ್​​ ಅವರ ಹೆಸರಾಂತ ತುಘಲಕ್ ನಾಟಕದಲ್ಲಿ ಅಭಿನಯಿಸಿ ನೋಡುಗರ ನೆನಪಿನಲ್ಲಿ ಉಳಿಯುವಂತೆ ಮಾಡಿದರು. ಇಲ್ಲಿಂದ ಜಿಕೆಜಿ ಅವರಿಗೆ ಕಿರುತೆರೆಯಲ್ಲಿ ನಟಿಸಲು ಅವಕಾಶಗಳು ಹುಡುಕಿಕೊಂಡು ಬಂದವು.

ಮಾಲ್ಗುಡಿ ಡೇಸ್‌ನಲ್ಲಿಯೂ ನಟಿಸಿದ್ದ ಜಿಕೆಜಿ

ಅದರಲ್ಲೂ ಟಿ ಎನ್ ಸೀತಾರಾಮ್ ನಿರ್ದೇಶನದ ಮುಕ್ತ, ಮಿಂಚು ಸೇರಿ ಸಾಕಷ್ಟು ಧಾರಾವಾಹಿಗಳಲ್ಲಿ ಗೋವಿಂದ ರಾವ್ ನಟಿಸಿದ್ದರು. ಅಷ್ಟೇ ಅಲ್ಲ, ನಟ ಶಂಕರ್ ನಾಗ್ ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್ ನಲ್ಲಿಯೂ ಗೋವಿಂದರಾವ್ ನಟಿಸಿ ಗಮನ ಸೆಳೆದಿದ್ದರು.

'ಕಥಾ ಸಂಗಮ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ

ಒಬ್ಬ ಉತ್ತಮ ಬರಹಗಾರರಾಗಿದ್ದ ಜಿಕೆ ಗೋವಿಂದರಾವ್, 1976ರಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಕಥಾ ಸಂಗಮ' ಸಿನಿಮಾ ಮೂಲಕ, ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡ್ತಾರೆ. ಇನ್ನೊಂದು ಇಂಟ್ರಸ್ಟ್ರಿಂಗ್ ವಿಚಾರ ಅಂದ್ರೆ, ರಜನಿಕಾಂತ್ ಅಭಿನಯಿಸಿದ ಮೊದಲ ಸಿನಿಮಾದಲ್ಲಿ ಗೋವಿಂದರಾವ್ ಕೂಡ ನಟಿಸಿ ಗಮನ ಸೆಳೆಯುತ್ತಾರೆ.

Gk Govindarao
ರಂಗಭೂಮಿಯಿಂದ ಸಿನಿಮಾಗೆ ಪದಾರ್ಪಣೆ ಮಾಡಿದವರು ಜಿ.ಕೆ ಗೋವಿಂದರಾವ್

ಹಲವು ಚಿತ್ರಗಳಲ್ಲಿ ನಟನೆ

ಕಥಾ ಸಂಗಮ ಚಿತ್ರದಲ್ಲಿ ಜಿ.ಕೆ ಗೋವಿಂದರಾವ್ ನಟನೆ ನೋಡುಗರ ಗಮನ ಸೆಳೆದಿತ್ತು. ಈ ಸಿನಿಮಾ ಬಳಿಕ ಅವರು ವಿಷ್ಣುವರ್ಧನ್ ಅಭಿನಯದ ಬಂಧನ, ಕಾನೂರು ಹೆಗ್ಗಡತಿ, ರೇ, ಗ್ರಹಣ, ಮಿಥಿಲೆಯ ಸೀತೆಯರು, ಕರ್ಪ್ಯು, ಶಾಸ್ತ್ರಿ, ನಿಶ್ಯಬ್ಧ, ಶಿವರಾಜ್ ಕುಮಾರ್ ನಟನೆಯ ಭೂಮಿ ತಾಯಿ ಚೊಚ್ಚಲ ಮಗ ಸೇರಿ ಹಲವು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರಿಯರನ್ನ ರಂಜಿಸಿದ್ದರು.

ಹೀಗೆ ಕಿರುತೆರೆ ಹಾಗೂ ಬೆಳ್ಳಿತೆರೆ ಮೇಲೆ ತನ್ನದೇ ಬೇಡಿಕೆಯನ್ನ ಹೊಂದಿದ್ದ ಜಿ ಕೆ ಗೋವಿಂದರಾವ್, ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಇದನ್ನೂ ಓದಿ: ಮುಂದಿನ ಧಾರಾವಾಹಿಯಲ್ಲಿ ಜಿಕೆಜಿ ಅವರಿಂದ ಸಿಎಂ ಪಾತ್ರ ಮಾಡಿಸಬೇಕೆಂದಿದ್ದೆ: ಟಿ.ಎನ್ ಸೀತಾರಾಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.