ಬ್ರಹ್ಮಗಂಟು ಧಾರಾವಾಹಿಯ ಗೀತಾಭಾರತಿ ಭಟ್ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಗೀತಾ ಭಾರತಿ ಭಟ್ ಅವರು 9ನೇ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟಿದ್ದು, ಇವರನ್ನು ಬೀಳ್ಗೊಡಲು ಅಮ್ಮ, ಅಪ್ಪ ಮತ್ತು ತಂಗಿ ಬಂದಿದ್ದರು.
ಮನೆಯೊಳಗೆ ಕಾಲಿಡುವ ಮುನ್ನ ಗೀತಾ ಭಾರತಿ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಒಂದನ್ನು ಅಪ್ಲೋಡ್ ಮಾಡಿದ್ದು ಜನರ ಬೆಂಬಲ ಕೋರಿದ್ದಾರೆ.
"ಬಣ್ಣದ ಬದುಕಿನಗಲಕ್ಕೂ ನೀವು ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ 'ಧನ್ಯವಾದ' ಎಂಬ ಪದ ನಗಣ್ಯ. ಆದರೂ ನಿಮ್ಮ ಈ ಬೆಂಬಲ ನನ್ನ ಕಿರುತೆರೆಯ ಪಥದಲ್ಲಿ ಒಂದು ಮೈಲಿಗಲ್ಲು. ಅದಕ್ಕೆ ನಿಮಗೆ ನಾನು ಧನ್ನವಾದಗಳ ಸುರಿಮಳೆಯನ್ನಿಯಬೇಕು.
ನಿಮ್ಮ ಈ ಪ್ರೀತಿ, ಕಾಳಜಿ ಮತ್ತು ಬೆಂಬಲವನ್ನು ಅರಸುತ್ತಾ, ಬದುಕಿನ ಹೊಸ ಪಥ ಬಿಗ್ಬಾಸ್ನಲ್ಲೂ ಕಾಲಿರಿಸುತ್ತಿದ್ದೇನೆ. ಅಲ್ಲಿಯು ಕೂಡ ನಿಮ್ಮ ಈ ಬೆಂಬಲ ಪ್ರೀತಿಯನ್ನು ಕೊಟ್ಟು ನನ್ನನ್ನು ಕಾಯುವಿರೆಂದು ಆಶಿಸುವೆ. ತುಂಬು ಹೃದಯದಿಂದ ಎಂದೆದಿಗೂ ನಿಮ್ಮ ಈ ವಾತ್ಸಲ್ಯ ಭರಿತ ಪ್ರೀತಿಯನ್ನು ನಾನು ವಂದಿಸುತ್ತೇನೆ - ನಿಮ್ಮ ಗೀತಾ ಭಾರತಿ ಭಟ್" ಎಂದು ಅವರು ಬರೆದುಕೊಂಡಿದ್ದಾರೆ.