ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ 6 ವರ್ಷಗಳಿಂದ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಈ ವಾರ ಮುಗಿಯುತ್ತಿದೆ. ಆರು ವರ್ಷಗಳಿಂದ ರಾತ್ರಿ 8 ಗಂಟೆಗೆ ಸರಿಯಾಗಿ ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದ ವೀಕ್ಷಕರಿಗೆ ಮುಂದೇನು ಎಂಬ ಪ್ರಶ್ನೆ ತೋರುವುದು ಸಹಜ. ಆದರೆ ಅದಕ್ಕೆ ಉತ್ತರ ನೀಡುವ ಮೂಲಕ ಪ್ರೇಕ್ಷಕರ ಪ್ರಶ್ನೆಗೆ ಫುಲ್ಸ್ಟಾಪ್ ಇಟ್ಟಿದೆ ಕಲರ್ಸ್ ಕನ್ನಡ.
- " class="align-text-top noRightClick twitterSection" data="">
ಮುಂದಿನ ಸೋಮವಾರದಿಂದ ಪ್ರತಿ ರಾತ್ರಿ ನಿಮ್ಮನ್ನು ರಂಜಿಸಲು ಗೀತಾ ಬರುತ್ತಿದ್ದಾಳೆ. ದುರಂಹಕಾರದ ಹುಡುಗ ಮತ್ತು ಛಲಗಾತಿ ಹುಡುಗಿ ಜೊತೆಯಾದರೆ ಜೀವನ ಹೇಗಿರಬಹುದು ಎಂಬ ಪ್ರಶ್ನೆಗೆ ಗೀತಾ ಉತ್ತರ ನೀಡಲು ಬರುತ್ತಿದ್ದಾಳೆ. ಸ್ವಂತ ಪರಿಶ್ರಮದಿಂದ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಕಥಾನಾಯಕಿ ಗೀತಾಗೆ, ಶಾಸಕನಾಗಿರುವ ಅಪ್ಪನ ಹಣದ ದರ್ಪದಲ್ಲಿ ಮೆರೆಯುತ್ತಿರುವ ವಿಜಯ್ಗೆ ದುರಂಹಕಾರ. ಇವರಿಬ್ಬರೂ ಕಾಲೇಜಿನಲ್ಲಿ ಮುಖಾಮುಖಿ ಆಗುವುದಾದರೂ ಹೇಗೆ..? ಇವರಿಬ್ಬರೂ ಒಂದಾಗುವುದು ಹೇಗೆ ಎಂಬುದೇ ಗೀತಾ ಧಾರಾವಾಹಿಯ ಸಾರಾಂಶ. ಧಾರಾವಾಹಿ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿರುವ ಹೆಮ್ಮೆಯ ನಿರ್ದೇಶಕ ರಾಮ್ ಜೀ ಅವರ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿ ಬರಲಿದೆ. ನೀನಾಸಂ ಅಶ್ವಥ್, ಶರ್ಮಿತಾ ಗೌಡ, ಮನದೀಪ್ ರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ನಾಯಕ ನಾಯಕಿ ಯಾಗಿ ಹೊಸ ಪ್ರತಿಭೆಗಳು ಅಭಿನಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಧಾರಾವಾಹಿಯ ಪ್ರೋಮೋ ಸಾಕಷ್ಟು ಸುದ್ದಿ ಮಾಡುತ್ತಿದ್ದು ನಾಯಕ ನಾಯಕಿಯರ ಹೆಸರು ಇನ್ನೂ ತಿಳಿದುಬಂದಿಲ್ಲ.