'ಗಟ್ಟಿಮೇಳ' ಧಾರಾವಾಹಿ ಯಶಸ್ವಿ 350 ಸಂಚಿಕೆಗಳನ್ನು ಪೂರೈಸಿದ್ದು ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ. ಪ್ರತಿ ಸಂಚಿಕೆಗಳಲ್ಲಿ ಕುತೂಹಲ ಮೂಡಿಸುತ್ತಿರುವ ಈ ಧಾರಾವಾಹಿಯಲ್ಲಿ ಸಾಹಿತ್ಯ ಪಾತ್ರ ಕೊನೆಯಾಗಿದೆ.
- " class="align-text-top noRightClick twitterSection" data="
">
ವೇದಾಂತ್ ಮತ್ತು ಅಮೂಲ್ಯ ಪ್ರೀತಿಗೆ ಅಡ್ಡಿಯಾಗಿದ್ದ ವಿಲನ್ ಸಾಹಿತ್ಯ ನಿಜರೂಪ ಬಯಲಾಗಿದೆ. ಸಾಹಿತ್ಯ, ಕಿಶನ್ ತಂಗಿ ಆಗಿದ್ದು ವೇದಾಂತ್ ವಿರುದ್ಧ ಸೇಡು ತೀರಿಸಿಕೊಳ್ಳಲು ಬಂದವಳೆಂದು ಸಾಬೀತಾಗಿದೆ. ಅಂದ ಮೇಲೆ ಆಕೆಯ ಪಾತ್ರಕ್ಕೆ ಇನ್ನು ಫುಲ್ ಸ್ಟಾಪ್ ಇಟ್ಟಂತೆಯೇ ಎನ್ನಲಾಗುತ್ತಿದೆ. ಅದಕ್ಕೆ ಪೂರಕವಾಗಿ ಸಾಹಿತ್ಯ ಪಾತ್ರಧಾರಿ ಶರಣ್ಯ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವ ಪೋಸ್ಟ್ ಕೂಡಾ ಅವರು ಇನ್ಮುಂದೆ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಕಾಣಿಸುವುದಿಲ್ಲ ಎಂದು ತೋರಿಸುತ್ತಿದೆ.
ಗಟ್ಟಿಮೇಳದಲ್ಲಿ ತಾವು ನಟಿಸಿರುವ ಎಪಿಸೋಡ್ಗಳ ತುಣುಕುಗಳನ್ನು ಸೇರಿಸಿ ವಿಡಿಯೋ ಮಾಡಿರುವ ಶರಣ್ಯ ಶೆಟ್ಟಿ 'ಗಟ್ಟಿಮೇಳ ಪಯಣ ಸುಂದರವಾಗಿತ್ತು. ಈ ಪಾತ್ರ ತುಂಬಾ ಸವಾಲಿನದಾಗಿತ್ತು. ಸಾಹಿತ್ಯ ಪಾತ್ರ ತುಂಬಾ ವಿಶೇಷವಾದುದು. ನನಗೆ 'ಗಟ್ಟಿಮೇಳ'ದಿಂದಾಗಿ ಒಂದು ಕುಟುಂಬವೇ ದೊರೆತಿದೆ. ಇವರೆಲ್ಲರನ್ನು ಖಂಡಿತ ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸಾಹಿತ್ಯ ಪಾತ್ರಕ್ಕೆ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ಸಲ್ಲಿಸಿರುವ ಶರಣ್ಯ, ಸಾಹಿತ್ಯ ಪಾತ್ರಕ್ಕೆ ನನ್ನಿಂದ ನ್ಯಾಯ ದೊರೆತಿದೆ ಎಂದು ಭಾವಿಸುತ್ತೇನೆ' ಎಂಬು ಬರೆದುಕೊಂಡಿದ್ದಾರೆ.
ಇನ್ನು ಧಾರಾವಾಹಿಯಲ್ಲಿ ಲಂಡನ್ಗೆ ತೆರಳಿರುವ ಸಾರಿಕಾ ಮತ್ತೆ ಮರಳಿ ಬರುತ್ತಾಳಾ ಎಂಬ ಕುತೂಹಲ ವೀಕ್ಷಕರಿಗಿದೆ. ಮಾತ್ರವಲ್ಲ ಶುಂಠಿ ಶಂಕರ ವೇದಾಂತ್ ಮತ್ತು ರೌಡಿ ಬೇಬಿ ಅಮೂಲ್ಯ ಒಂದಾಗುವುದಕ್ಕೂ ಅಭಿಮಾನಿಗಳು ಕಾಯುತ್ತಿದ್ದಾರೆ.