ETV Bharat / sitara

ಮಜಾಭಾರತದ ಮೂಲಕ ಮನರಂಜನೆ ನೀಡಲು ಸಿದ್ಧರಾದ 'ಕನ್ನಡತಿ' ತಂಡ - Majabharata comedy program

ವಾಹಿನಿಗಳು ವಾರಾಂತ್ಯದಲ್ಲಿ ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡಲು ಸದಾ ಮುಂಚೂಣಿಯಲ್ಲಿರುತ್ತವೆ. ಈ ಬಾರಿ 'ಕನ್ನಡತಿ' ಧಾರಾವಾಹಿ ತಂಡ ಮಜಾಭಾರತ ಶೋ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಲು ಬರುತ್ತಿದೆ.

Kannadati team
'ಕನ್ನಡತಿ' ತಂಡ
author img

By

Published : Mar 4, 2021, 6:18 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಜಾ ಭಾರತ ಕಾಮಿಡಿ ಶೋ ನಲ್ಲಿ ಈ ಬಾರಿ ಜನಪ್ರಿಯ ಧಾರಾವಾಹಿ 'ಕನ್ನಡತಿ' ತಂಡ ಭಾಗವಹಿಸಲಿದೆ. ಕನ್ನಡತಿ ಧಾರಾವಾಹಿ ತನ್ನ ಸೊಗಸಾದ ಕಥೆ ಮತ್ತು ನವಿರಾದ ಸಂಭಾಷಣೆ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಮೊದಲ ಬಾರಿಗೆ ವಿಭಿನ್ನ ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಬಂದ ಪ್ರಥಮಾ ಪ್ರಸಾದ್

ಭುವಿ, ಹರ್ಷ ಹಾಗೂ ವರೂಧಿನಿ ನಡುವಿನ ತ್ರಿಕೋನ ಪ್ರೇಮಕಥೆಯನ್ನು ಒಳಗೊಂಡಿರುವ ಕನ್ನಡತಿಯಲ್ಲಿ ಕನ್ನಡ ಪ್ರೇಮ ಕೂಡಾ ಇದೆ. ಭುವಿಯನ್ನು ಹರ್ಷ ಪ್ರೀತಿಸುತ್ತಾನೆ. ಇತ್ತ ಭುವಿಯ ಸ್ನೇಹಿತೆ ವರೂಧಿನಿಗೂ ಹರ್ಷನ ಮೇಲೆ ಪ್ರೀತಿ ಆಗಿರುತ್ತದೆ. ಇತ್ತ ಹರ್ಷನ ಮನೆಯ ನೆಮ್ಮದಿ ಕೆಡಿಸುವ ಸಾನಿಯಾಳಿಗೆ ರತ್ನಮಾಲಾ ಕಂಪನಿಯ ಉನ್ನತ ಹುದ್ದೆ ನೀಡುತ್ತಾರೆ. ಹೀಗೆ ಪ್ರತಿ ದಿನವೂಅಚ್ಚುಕಟ್ಟಾದ ಕಥೆಯ ಮೂಲಕ ಸೀರಿಯಲ್ ವೀಕ್ಷಕರ ಮನ ಸೆಳೆದಿರುವ ಕನ್ನಡತಿ ತಂಡ ಈ ಬಾರಿ ಮಜಾ ಭಾರತ ಶೋನಲ್ಲಿ ನಿಮ್ಮೆಲ್ಲರನ್ನು ಮನರಂಜಿಸಲು ಬರುತ್ತಿದೆ. ವಾರಾಂತ್ಯದಲ್ಲಿ ಜನರಿಗೆ ಹಾಸ್ಯದ ರಸದೌತಣ ಉಣಬಡಿಸುವ ಮಜಾ ಭಾರತ ಶೋ ಕರ್ನಾಟಕದ ಹಲವು ಪ್ರತಿಭೆಗಳಿಗೆ ಹಾಸ್ಯ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡಿದೆ. ಆರ್​​​​​​​​​​​​ಜೆ ಸಿಂಧು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ಗುರುಕಿರಣ್ ಹಾಗೂ ರಚಿತಾ ರಾಂ ತೀರ್ಪುಗಾರರಾಗಿದ್ದಾರೆ.

Kannadati team
ರಂಜನಿ ರಾಘವನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.