ETV Bharat / sitara

ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ್ದಕ್ಕೆ ಟ್ರೋಲ್.. ನಟಿ ಶ್ವೇತಾ ಪ್ರಸಾದ್ ಹೇಳಿದ್ದೇನು?

author img

By

Published : Sep 29, 2020, 1:03 PM IST

ಕ್ಯಾನ್ಸರ್ ರೋಗಿಗಳಿಗೆ ಬೇಕಾಗುವ ವಿಗ್ ಗಾಗಿ ಕೂದಲು ಸಂಗ್ರಹಿಸಲು ಅನೇಕ ಸಂಸ್ಥೆಗಳಿವೆ. ಕಿರುತೆರೆ ನಟಿ ಶ್ವೇತಾ ಆರ್. ಪ್ರಸಾದ್ ಇದರ ಭಾಗವಾಗಲು ಬಯಸಿ ತಮ್ಮ ಕೂದಲನ್ನು ದಾನ ಮಾಡಿದ್ದರು.

Donating hair to cancer patients actress Shweta R. Prasad
ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದಕ್ಕೆ ಟ್ರೋಲ್, ನಟಿ ಶ್ವೇತಾ ಪ್ರಸಾದ್ ಹೇಳಿದ್ದೇನು..?

ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಬೇಕಾಗುವ ವಿಗ್ ಗಾಗಿ ಕೂದಲು ಸಂಗ್ರಹಿಸಲು ಅನೇಕ ಸಂಸ್ಥೆಗಳಿವೆ. ಕಿರುತೆರೆ ನಟಿ ಶ್ವೇತಾ ಆರ್. ಪ್ರಸಾದ್ ಇದರ ಭಾಗವಾಗಲು ಬಯಸಿ ತಮ್ಮ ಕೂದಲನ್ನು ದಾನ ಮಾಡಿದ್ದರು. ಇತ್ತೀಚೆಗೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಆದರೆ ಈ ವಿಚಾರ ಇದೀಗ ಟ್ರೋಲ್ ಗೆ ಒಳಗಾಗಿದೆ.

ಹೌದು, ಶ್ವೇತಾ ಅವರು ಈ ಪೋಸ್ಟ್ ಹಾಕುತ್ತಿದ್ದಂತೆ ಹಲವು ಕಮೆಂಟ್ ಗಳು ಬಂದಿವೆ. ಯಾರೋ ಒಬ್ಬರು ನೀವ್ಯಾಕೆ ಇದನ್ನು ಸಾರ್ವಜನಿಕವಾಗಿ ಹೇಳುತ್ತಿರುವಿರಿ? ನೀವ್ಯಾಕೆ ಬೇರೆ ಅಂಗಗಳನ್ನು ದಾನ ಮಾಡುತ್ತಿಲ್ಲವೆಂದು ಆಶ್ಚರ್ಯಪಟ್ಟರಂತೆ. ಇಂತಹ ಕಮೆಂಟುಗಳಿಗೆ ಪ್ರತಿಕ್ರಿಯಿಸದ ಶ್ವೇತಾರಿಗೆ, ಹಲವು ಜನರು ಈ ಕಾರ್ಯಕ್ಕೆ ಹೇಗೆ ಕೈಜೋಡಿಸಲಿ ಎಂದು ಕೇಳಿದಾಗ ಟ್ರೋಲ್ ಗಳಿಗೆ ಪ್ರತಿಕ್ರಿಯೆ ನೀಡಲು ನಿರ್ಧರಿಸಿದೆ ಎನ್ನುತ್ತಾರೆ ಶ್ವೇತಾ.

Donating hair to cancer patients actress Shweta R. Prasad
ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ್ದಕ್ಕೆ ಟ್ರೋಲ್, ನಟಿ ಶ್ವೇತಾ ಪ್ರಸಾದ್ ಹೇಳಿದ್ದೇನು..?

ಒಂದು ವೇಳೆ ನಾನು ಅಂಗಗಳನ್ನು ದಾನ ಮಾಡಲು ಬಯಸಿದರೆ ಹಾಗೆಯೇ ಮಾಡುವೆ ಎಂದು ಕಮೆಂಟ್ ಗೆ ಪ್ರತಿಕ್ರಿಯಿಸಿದ್ದಾರೆ ಶ್ವೇತಾ. ದಾನ ಮಾಡಲು ಅಗತ್ಯವಿದ್ದ ಕನಿಷ್ಠ 10 ಇಂಚುಗಳಷ್ಟು ಕೂದಲು ಬೆಳೆಸಿದ್ದರು ಈ ನಟಿ. "ನಾನು ಧಾರಾವಾಹಿಯ ಪಾತ್ರಗಳನ್ನು ಮಾಡುವಾಗ ಬಿಟ್ಟರೆ, ಉದ್ದನೆಯ ಕೂದಲನ್ನು ಎಂದಿಗೂ ಕಾಪಾಡಿಕೊಂಡಿಲ್ಲ. ಆದರೆ ಈಗ ಲಾಕ್ ಡೌನ್ ಸಮಯದಲ್ಲಿ ನಾನು ಕೂದಲನ್ನು ದಾನ ಮಾಡುವ ನಿರ್ಧಾರಕ್ಕೆ ಬಂದೆ. ಅದೇ ಕಾರಣದಿಂದ ಉದ್ದ ಕೂದಲನ್ನು ಬಿಟ್ಟೆ" ಎಂದು ಸ್ಪಷ್ಟನೆ ನೀಡಿದ್ದಾರೆ‌.

ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ್ದಕ್ಕೆ ಟ್ರೋಲ್, ನಟಿ ಶ್ವೇತಾ ಪ್ರಸಾದ್ ಹೇಳಿದ್ದೇನು?

ಕುಟುಂಬದವರ ಸಂಪ್ರದಾಯ ಅಥವಾ ಮನೆಯವರ ಒಪ್ಪಿಗೆ ಸಿಗದೇ ತುಂಬಾ ಜನ ಮಹಿಳೆಯರು ಕೂದಲು ದಾನ ಮಾಡುತ್ತಿಲ್ಲ. ತುಂಬಾ ಜನ ಮಹಿಳೆಯರು ತಮ್ಮ ಗಂಡಂದಿರಿಗೆ ತಮ್ಮ ಉದ್ದ ಕೂದಲಿನ ಮೇಲಿರುವ ಪ್ರೀತಿಯಿಂದಾಗಿ ದಾನ ಮಾಡಲು ಮನಸ್ಸಿದ್ದರೂ ಮಾಡಲಾಗುತ್ತಿಲ್ಲವೆಂದು ಬರೆದಿದ್ದಾರೆ. ನಮ್ಮ ಕೂದಲು ಪುನಃ ಬೆಳೆಯುತ್ತವೆ. ಕೂದಲಿನಿಂದ ನಮ್ಮ ಸೌಂದರ್ಯವನ್ನು ವಿವರಿಸಲಾಗದು. ಕೂದಲು ಇದ್ದರೂ ಇಲ್ಲದಿದ್ದರೂ ನಾವು ಹೇಗಿದ್ದೇವೋ ಹಾಗೆಯೇ ನಮ್ಮನ್ನು ಪ್ರೀತಿಸಲು ಕಲಿಯಬೇಕು ಎಂದಿದ್ದಾರೆ ಶ್ವೇತಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.