ETV Bharat / sitara

ಮುದ್ದು ಮಗನ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿದ ದಿಶಾ ಮದನ್ - French biryani actress Disha madan

ಬೆಳ್ಳಿತೆರೆ, ಕಿರುತೆರೆ ಎರಡರಲ್ಲೂ ಮಿಂಚುತ್ತಿರುವ ದಿಶಾ ಮದನ್ ತಮ್ಮ ಮುದ್ದು ಮಗನ ಮೊದಲ ವರ್ಷದ ಹುಟ್ಟುಹಬ್ಬವನ್ನು ಕಳೆದ ವಾರ ತಮ್ಮ ಫಾರ್ಮ್​ಹೌಸ್​​​ನಲ್ಲಿ ಆಚರಿಸಿದ್ದಾರೆ. ಮಗನ ಹುಟ್ಟುಹಬ್ಬ ಹಾಗೂ ಆಯುಷ್ಯ ಹೋಮದ ಫೋಟೋಗಳನ್ನು ದಿಶಾ ತಮ್ಮ ಇನ್ಸ್​​​ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ.

Disha madan celebrated son birthday
ದಿಶಾ ಮದನ್
author img

By

Published : Aug 4, 2020, 2:38 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ ವಚನಾ ಆಗಿ ನಟಿಸುತ್ತಿದ್ದ ದಿಶಾ ಮದನ್, ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿರುವುದು ಕಿರುತೆರೆಪ್ರಿಯರಿಗೆ ತಿಳಿದ ವಿಚಾರ. ದಿಶಾ ಮದನ್ ಮತ್ತು ಶಶಾಂಕ್ ದಂಪತಿ ಪುತ್ರ ವಿಯಾನ್​​ಗೆ ಈಗ ಒಂದು ವರ್ಷ ತುಂಬಿದ್ದು ಮಗನ ಹುಟ್ಟುಹಬ್ಬವನ್ನು ದಿಶಾ ದಂಪತಿ ಸರಳವಾಗಿ ಆಚರಿಸಿದ್ದಾರೆ.

ತಮ್ಮ ಫಾರ್ಮ್​ಹೌಸ್​ನಲ್ಲಿ ಮಗನ ಹುಟ್ಟುಹಬ್ಬವನ್ನು ಆಚರಿಸಿದ ದಿಶಾ ಮದನ್, ಹುಟ್ಟುಹಬ್ಬದ ಫೊಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದಂದು ದಿಶಾ, ಮಗನ ಹೆಸರಲ್ಲಿ ಆಯುಷ್ಯ ಹೋಮವನ್ನು ಕೂಡಾ ಮಾಡಿದ್ದಾರೆ. ಈ ಪೂಜೆಯಲ್ಲಿ ದಿಶಾ ಹಾಗೂ ಪತಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಜೊತೆಗೆ ಮುದ್ದು ಕಂದನಿಗೂ ಸಾಂಪ್ರದಾಯಿಕ ಉಡುಗೆ ತೊಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಇರುವ ದಿಶಾ ಮದನ್, ತಮ್ಮ ಪುತ್ರ ವಿಯಾನ್ ಹೆಸರಿನಲ್ಲಿ ಕೂಡಾ ಇನ್ಸ್​ಟಾಗ್ರಾಮ್​ ಅಕೌಂಟ್ ತೆರೆದಿದ್ದಾರೆ. ಇದಕ್ಕೆ ಬುಬ್ಬಾವಿ ಎಂದು ಹೆಸರಿಟ್ಟಿದ್ದಾರೆ. ವಿಯಾನ್​​ಗೆ ಈಗಾಗಲೇ 26 ಸಾವಿರಕ್ಕೂ ಅಧಿಕ ಫಾಲೋವರ್ಸ್​ಗಳಿದ್ದಾರೆ. ಮಗನ ಮೊದಲ ವರ್ಷದ ಹುಟ್ಟುಹಬ್ಬ ಹಾಗೂ ಮಗು ಆಗುವ ಮುಂಚಿನ ಫೋಟೋಗಳನ್ನು ಮತ್ತೆ ಇನ್ಸ್​​ಟಾಗ್ರಾಮ್​​ನಲ್ಲಿ ಹಂಚಿಕೊಂಡಿರುವ ದಿಶಾ, 'ತಾಯ್ತನ ನಿಜಕ್ಕೂ ಒಂದು ಸುಂದರ ಅನುಭವ' ಎಂದು ಹೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.