'ಕುಲವಧು' ಧಾರಾವಾಹಿಯಲ್ಲಿ ವಚನಾ ಆಗಿ ನಟಿಸಿ ಸೀರಿಯಲ್ ಪ್ರಿಯರ ಮನಸೆಳೆದ ಸುಂದರಿ ದಿಶಾ ಮದನ್ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ. ಅರೆ, ದಿಶಾ ಮದನ್ ಮತ್ತೆ ಮರಳಿ ಬರುತ್ತಿದ್ದಾರಾ, ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ..? ಎಂದೆಲ್ಲಾ ಯೋಚಿಸಬೇಡಿ. ದಿಶಾ ಕಿರುತೆರೆಗೆ ಬರುತ್ತಿರುವುದೇನೋ ನಿಜ. ಆದರೆ ಅವರು ಬರುತ್ತಿರುವುದು ಧಾರಾವಾಹಿಗಾಗಿ ಅಲ್ಲ. ಕಾರ್ಯಕ್ರಮವೊಂದಕ್ಕೆ ಅವರು ಅತಿಥಿಯಾಗಿ ಬರುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ 'ಚಾಟ್ ಕಾರ್ನರ್' ನಲ್ಲಿ ದಿಶಾ ಮದನ್ ಭಾಗವಹಿಸಲಿದ್ದಾರೆ. ಸಂತಸದ ವಿಚಾರವೆಂದರೆ ದಿಶಾ ಮದನ್ ಜೊತೆಗೆ ಅವರ ಪತಿ ಶಶಾಂಕ್ ಕೂಡಾ ಭಾಗವಹಿಸಲಿದ್ದು ಮೊದಲ ಬಾರಿಗೆ ರಿಯಲ್ ಜೋಡಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಭಾನುವಾರ ದಿಶಾ ಮದನ್ ಹಾಗೂ ಶಶಾಂಕ್ ವಾಸುಕಿ ಸಂಚಿಕೆ ಪ್ರಸಾರವಾಗಲಿದೆ. ಬಹಳ ದಿನಗಳ ನಂತರ ತಮ್ಮ ಮೆಚ್ಚಿನ ನಟಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಅಭಿಮಾನಿಗಳಿಗೆ ಖುಷಿ ನೀಡಿದೆ.

ಈಗಾಗಲೇ ಈ ಕಾರ್ಯಕ್ರಮದ ಚಿತ್ರೀಕರಣ ನಡೆದಿದ್ದು ದಿಶಾ ಹಾಗೂ ಶಶಾಂಕ್ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಎಂಜಾಯ್ ಮಾಡಿದ್ದಾರೆ. ಜೊತೆಗೆ ಪ್ರೇಕ್ಷಕರನ್ನು ಕೂಡಾ ರಂಜಿಸಿದ್ದಾರೆ. ಈ ಎಪಿಸೋಡ್ ಪ್ರೋಮೋವೊಂದು ರಿಲೀಸ್ ಆಗಿದ್ದು ವೀಕ್ಷಕರು ಈ ಕಾರ್ಯಕ್ರಮ ನೋಡಲು ಕಾತರದಿಂದ ಕಾಯುತ್ತಿದ್ದಾರೆ.