ಮುಂಬೈ: ಗಾಯಕ ಮಿಕಾ ಸಿಂಗ್ ಗಾಯಕಿ ಭೂಮಿ ತ್ರಿವೇದಿಯನ್ನು ನ್ಯಾಷನಲ್ ಟೆಲಿವಿಷನ್ನ ರಿಯಾಲಿಟಿ ಶೋ ಒಂದರಲ್ಲಿ ಪ್ರೊಪೋಸ್ ಮಾಡಿದ್ದಾರೆ.
ಮ್ಯೂಸಿಕ್ ರಿಯಾಲಿಟಿ ಶೋ "ಇಂಡಿಯನ್ ಪ್ರೊ ಮ್ಯೂಸಿಕ್ ಲೀಗ್"ನ (ಐಪಿಎಂಎಲ್) ಮುಂಬರುವ ಸಂಚಿಕೆಯಲ್ಲಿ, ಮಿಕಾ ಸಿಂಗ್, ಆಸೀಸ್ ಕೌರ್ ಮತ್ತು ರೂಪಾಲಿ ಜಗ್ಗಾ ಅವರು ಸಾಜಿದ್ - ವಾಜಿದ್ ಅವರ "ಮುಜ್ಸೆ ಶಾದಿ ಕರೋಗಿ" ಚಿತ್ರದ ಜನಪ್ರಿಯ ಶೀರ್ಷಿಕೆ ಗೀತೆಯನ್ನು ಪ್ರಸ್ತುತಪಡಿಸಲಿದ್ದು, ಈ ಸಂಚಿಕೆಯ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ.
ಗೀತೆ ಪ್ರಸ್ತುತ ಪಡಿಸುವ ಸಮಯದಲ್ಲಿ ಮಿಕಾ ಸಿಂಗ್, ಭೂಮಿ ತ್ರಿವೇದಿಯನ್ನು ವೇದಿಕೆಯನ್ನು ಕರೆದೊಯ್ಯುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದರು. ಬಳಿಕ ಅವರು ಹಾಡು ಹಾಡುತ್ತಾ "ಮುಜ್ಸೆ ಶಾದಿ ಕರೋಗಿ (ನನ್ನನ್ನು ಮದುವೆಯಾಗುತ್ತೀಯಾ)?" ಎಂದು ಭೂಮಿಯನ್ನು ಕೇಳಿದರು.
ಬಳಿಕ ಮಿಕಾ ತನ್ನ ಮೊಣಕಾಲಿನಲ್ಲಿ ಕುಳಿತು, "ಭೂಮಿ, ಅಬ್ ತೋಹ್ ಬಾತಾ ದೊ, ಮುಜ್ಸೆ ಶಾದಿ ಕರೋಗಿ? ಸಬ್ ಲೋಗ್ ಭೂಮಿ ಸೆ ಜುಡೆ ಹೆ, ಮೈನೆ ಸೋಚಾ ಮೇ ಭೀ ಭೂಮಿ ಸೆ ಜುಡ್ ಜಾವೂ" (ಭೂಮಿ ಈಗ ಹೇಳಿ, ನೀವು ನನ್ನನ್ನು ಮದುವೆಯಾಗುತ್ತೀರಾ? ಎಲ್ಲರೂ ಭೂಮಿಯೊಂದಿಗೆ ಸಂಪರ್ಕ ಹೊಂದಿದ್ದಾರೆ, ನಾನು ಕೂಡ ಹೊಂದಬೇಕು). "ಭೂಮಿ ಸಿಂಗ್ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?" ಎಂದು ಮಿಕಾ ಹೇಳಿದರು.
"ಮಿಕಾ ತ್ರಿವೇದಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ಆದರೆ, ನಿಜ ಹೇಳಬೇಕೆಂದರೆ, ನಾನು ನಿಮಗಾಗಿ ವಧುವನ್ನು ಹುಡುಕಲು ಇಲ್ಲಿಗೆ ಬಂದಿದ್ದೇನೆ, ಅದು ಅವರಿಗೆ ಅನ್ಯಾಯವಾಗುತ್ತದೆ." ಎಂದು ಭೂಮಿ ಉತ್ತರಿಸಿದರು. ಈ ಸಂಚಿಕೆ ಇಂದು ಸಂಜೆ ಝೀ ಟಿವಿಯಲ್ಲಿ ಪ್ರಸಾರವಾಗಲಿದೆ.
ಬಾಲಿವುಡ್‌ನ ಬ್ಯಾಚುಲರ್ ಸಲ್ಮಾನ್ ಖಾನ್ ಮದುವೆಯಾದ ನಂತರವೇ ತಾನು ಮದುವೆಯಾಗುವುದಾಗಿ ಇತ್ತೀಚೆಗೆ ಮಿಕಾ ಸಿಂಗ್ ಘೋಷಿಸಿದ್ದರು.