ನೀವು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ವೀಕ್ಷಕರೇ...? ವಾರಾಂತ್ಯದಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ನೋಡಿ ನೀವು ರಿಲ್ಯಾಕ್ಸ್ ಆಗುತ್ತಿದ್ದೀರಾ..? ಹೌದು ಎಂದಾದಲ್ಲಿ 'ಕಾಮಿಡಿ ಕಿಲಾಡಿಗಳು' ತಂಡದಿಂದ ನಿಮಗೊಂದು ಶುಭಸುದ್ದಿ.
- " class="align-text-top noRightClick twitterSection" data="
">
ಇಷ್ಟು ದಿನ ಪ್ರತಿ ರಾತ್ರಿ 7.30 ಕ್ಕೆ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಇನ್ನುಮುಂದೆ ರಾತ್ರಿ 9 ಕ್ಕೆ ಪ್ರಸಾರವಾಗಲಿದೆ. ಕಳೆದ 2 ಸೀಸನ್ಗಳು ರಾತ್ರಿ 9 ಕ್ಕೆ ಪ್ರಸಾರವಾಗುತ್ತಿತ್ತು. ಆದರೆ ಈ ಸೀಸನ್ 7.30 ಕ್ಕೆ ಆರಂಭವಾಗುತ್ತಿದ್ದರಿಂದ ನಮಗೆ ಬಹಳ ಕಷ್ಟವಾಗುತ್ತಿದೆ ಎಂದು ಈ ಕಾರ್ಯಕ್ರಮದ ಅಭಿಮಾನಿಗಳ ಕಂಪ್ಲೇಂಟ್ ಆಗಿತ್ತು. ಆ ಸಮಯದಲ್ಲಿ ಕೆಲಸ, ಅಡುಗೆ ತಯಾರಿಯಲ್ಲೇ ಬಹುತೇಕರು ಬ್ಯುಸಿ ಇರುವುದರಿಂದ ಟಿವಿ ಮುಂದೆ ಕುಳಿತು ಕಾರ್ಯಕ್ರಮವನ್ನು ನೆಮ್ಮದಿಯಾಗಿ ನೋಡಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ಇದೀಗ ಕಾರ್ಯಕ್ರಮವನ್ನು 9 ಗಂಟೆಗೆ ಪ್ರಸಾರ ಮಾಡಲಾಗುತ್ತಿದೆ. ಊಟ,ಕೆಲಸ ಎಲ್ಲಾ ಮುಗಿಸಿ ಟಿವಿ ಮುಂದೆ ಕುಳಿತರೆ ಸಾಕು ಒಂದೂವರೆ ಗಂಟೆ ಹೇಗೆ ಹೋಗುತ್ತದೆ ಎಂಬುದೇ ತಿಳಿಯುವುದಿಲ್ಲ ಎನ್ನುವುದು ವೀಕ್ಷಕರ ಅಭಿಪ್ರಾಯ. ಇನ್ಮುಂದೆ ವೀಕ್ಷಕರ ಆಸೆಯಂತೆ ಈ ಕಾರ್ಯಕ್ರಮ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.