ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಆರಂಭವಾಗಿದೆ. ಹಬ್ಬದ ಸಡಗರ ಮತ್ತಷ್ಟು ಹೆಚ್ಚಿಸಲು ವಾಹಿನಿಗಳು ಕೂಡಾ ವಿಶೇಷ ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ಮನರಂಜನೆಯ ಹಬ್ಬದೂಟವನ್ನು ಉಣಬಡಿಸುತ್ತಿವೆ.
- " class="align-text-top noRightClick twitterSection" data="">
ದೀಪಾವಳಿ ಹಬ್ಬದಂದು ಕಲರ್ಸ್ ಕನ್ನಡ ವಾಹಿನಿಯ ನಾಯಕಿಯರು ನಿಮ್ಮ ಮನೆಗೆ ಬರಲು ರೆಡಿಯಾಗಿದ್ದಾರೆ. ನಿತ್ಯ ಧಾರಾವಾಹಿಯಲ್ಲಿ ತಮಗೆ ನೀಡಿದ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಸುಂದರಿಯರು ಭಾನುವಾರ, ಅಂದರೆ ನಾಳೆ ಮಧ್ಯಾಹ್ನ ನಿಮ್ಮನ್ನು ರಂಜಿಸಲು ಬರುತ್ತಿದ್ದಾರೆ. ಕಾರ್ಯಕ್ರಮಕ್ಕೆ 'ಕಲರ್ಫುಲ್ ನಾಯಕಿ' ಎಂದು ಹೆಸರಿಡಲಾಗಿದೆ. ನಟಿ ಸುಷ್ಮಾ ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಚೆಲುವೆಯರು ಕನ್ನಡದ ಜನಪ್ರಿಯ ನೃತ್ಯಗಳಿಗೆ ಹೆಜ್ಜೆ ಹಾಕಲಿದ್ದಾರೆ. ಇದರ ಜೊತೆ ಕಾರ್ಯಕ್ರಮದಲ್ಲಿ ಬೇರೆ ಏನೆಲ್ಲಾ ಇದೆ ಎಂಬುದನ್ನು ತಿಳಿಯಲು ನೀವು ನಾಳೆ ಮಧ್ಯಾಹ್ನ 3.30ವರೆಗೂ ಕಾಯಲೇಬೇಕು.
![PC: colors kannada](https://etvbharatimages.akamaized.net/etvbharat/prod-images/kn-bng-nayaki-womenprogm-ka10018_26102019134817_2610f_1572077897_314.jpg)