ಬಿಗ್ ಬಾಸ್ ಆರಂಭದ ದಿನದಿಂದಲೂ ಮಾವ _ಮಾವ ಎಂದು ಕರೆಯುತ್ತಿದ್ದ ಮಂಜು ಹಾಗೂ ಪ್ರಶಾಂತ್ ನಡುವೆ ಸಣ್ಣ ವಿಷಯಕ್ಕೆ ದೊಡ್ಡ ಜಗಳ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಚದುರಂಗದ ಟಾಸ್ಕ್ ನೀಡಲಾಗಿದೆ. ಅಂದರೆ, ಒಂದು ತಂಡದವರು ಬಿಳಿ ಬಣ್ಣದ ಕಾಯಿಗಳಾದರೆ, ಮತ್ತೊಂದು ತಂಡದವರು ಕಪ್ಪು ಬಣ್ಣದ ಕಾಯಿಗಳು. ಇಬ್ಬರ ನಡುವೆ ಬಿಗ್ ಬಾಸ್ ಟಾಸ್ಕ್ ನೀಡುತ್ತಾರೆ.
ಅರವಿಂದ್ ಟಾಸ್ಕ್ ಆಡುವಾಗ ಅದೇ ತಂಡದ ಪ್ರಶಾಂತ್ ಟಾಸ್ಕ್ ನಡೆಯುವ ಏರಿಯಾದಲ್ಲೇ ಇದ್ದರು. ಟಾಸ್ಕ್ ಮುಗಿದ ನಂತರ ಪ್ರಶಾಂತ್ ಹೊರಬಂದರು ಎಂಬುದು ಮಂಜು ಕೋಪಕ್ಕೆ ಕಾರಣವಾಯಿತು.
ಅದಕ್ಕೆ ಮಂಜು, ಅವರು ಹೇಳುವುದಕ್ಕೂ ಮುಂಚೆ ನೀನು ಹೊರಗೆ ಯಾಕೆ ಬಂದೆ ಮಾವ? ಫೌಲ್ ಎಂದಿದ್ದರೆ ಏನ್ ಮಾಡ್ತಿದ್ದೆ ನೀನು? ಎಲ್ಲದನ್ನು ಉದಾಸೀನ ಮಾಡಬೇಡಿ ಮಾವ. ಅನೌನ್ಸ್ ಮಾಡೋಕು ಮುಂಚೆ ಯಾಕೆ ಬಂದರಿ ಎಂದು ಕೂಗಾಡಿದರು.
ಇದನ್ನು ಓದಿ: 'The Sound of Chaos' ರಿಲೀಸ್: ಸಿನಿಪ್ರಿಯರಿಗೆ ಸನಿಹವಾದ 'ನಿನ್ನ ಸನಿಹಕೆ' ಹಾಡು
ಮಂಜು ಹೇಳಿಕೆಗೆ ಕೆರಳಿದ ಪ್ರಶಾಂತ್, ಅರವಿಂದ್ ಟಾಸ್ಕ್ ಮುಗಿಸಿದ ನಂತರವೇ ಬಂದಿದ್ದು ಬಿಡಪ್ಪ. ಯಾಕೋ ಅಷ್ಟು ತಲೆ ಕೆಡಿಸಿಕೊಳ್ತೀಯಾ, ಬುದ್ಧಿವಂತ ಆಗೋಕೆ ಹೋಗಬೇಡ. ನನಗೆ ರೂಲ್ಸ್ ಗೊತ್ತಲ್ವಾ? ಯಾಕಷ್ಟು ಹೈಲೈಟ್ ಮಾಡ್ತೀಯಾ, ತಲೆ ಏನಾದರೂ ಕೆಟ್ಟಿದೀಯಾ ನಿಂಗೆ? ನಂಗೂ ಜವಾಬ್ದಾರಿ ಇದೆ. ನಿಂಗೆ ಮಾತ್ರ ಜವಾಬ್ದಾರಿ ಇದೆ ಎಂದುಕೊಳ್ಳಬೇಡ. ಅರ್ಥ ಮಾಡ್ಕೋ ಮಂಜು, ಬೆಳಗ್ಗೆಯಿಂದ ಹೇಳ್ತಾ ಇದ್ದೀಯಾ ಸರಿ ಇರಲ್ಲ ಎಂದು ಪ್ರಶಾಂತ್ ಮಂಜುಗೆ ಹೇಳಿದರು.
ಆಟದಿಂದ ಹೊರ ಹೋಗಿರುವ ಎರಡು ತಂಡಗಳ ಸದಸ್ಯರಿಗಾಗಿ ಬಿಗ್ ಬಾಸ್ ಮತ್ತೊಂದು ಚಟುವಟಿಕೆಯನ್ನು ನೀಡಿತ್ತು. ಅದರಲ್ಲಿ ತಮ್ಮ ತಂಡದ ಸದಸ್ಯರನ್ನು ಹೆಚ್ಚಿಸಿಕೊಳ್ಳಬೇಕಾಗಿತ್ತು. ಬಿಳಿ ತಂಡ ಅಂದರೆ ಶಂಕರ್ ಅವರ ತಂಡದಲ್ಲಿ ಹೊರಹೋಗಿದ್ದ ಒಬ್ಬ ಸದಸ್ಯರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ತಂಡ ದೊಡ್ಡದಾಗಿದೆ. ಇದೀಗ ಈ ತಂಡದಲ್ಲಿ ಕ್ಯಾಪ್ಟನ್ಗಾಗಿ ಹೋರಾಟ ನಡೆಯಲಿದೆ.