ಮಾಲ್ಗುಡಿ ಡೇಸ್, ಮಹಾಭಾರತ, ರಾಧಾ ಕೃಷ್ಣ, ಅಲಾದ್ದಿನ್, ಗಣೇಶ, ನಜರ್, ದೇವಕಿ ನಂದನ, ನಾಗಿನ್, ಚಕ್ರವರ್ತಿ ಅಶೋಕ ಧಾರಾವಾಹಿಗಳು ಈಗಾಗಲೇ ಹಿಂದಿ ಭಾಷೆಯಿಂದ ಕನ್ನಡಕ್ಕೆ ಡಬ್ ಆಗಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.
ಇದೀಗ ಮತ್ತೊಂದು ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಬರುತ್ತಿದೆ. ಹಿಂದಿ ಕಿರುತೆರೆಯಲ್ಲಿ ಬಹಳ ಸದ್ದು ಮಾಡಿದ್ದ 'ಸಿಐಡಿ' ಇದೀಗ ಕನ್ನಡಕ್ಕೆ ಡಬ್ ಆಗಿ ಬರುತ್ತಿದೆ. 1988 ರಲ್ಲಿ ಸುಮಾರು 20 ವರ್ಷಗಳ ಹಿಂದೆ ಈ ಧಾರಾವಾಹಿ ಸೋನಿಯಲ್ಲಿ ಪ್ರಸಾರವಾಗಿತ್ತು. ಈ ಧಾರಾವಾಹಿ ಒಂದಲ್ಲಾ ಎರಡಲ್ಲ, ಸುಮಾರು 20 ವರ್ಷಗಳ ಕಾಲ ಪ್ರಸಾರವಾಗಿತ್ತು. 2 ವರ್ಷಗಳ ಹಿಂದೆ ಅಂದರೆ 2018 ಅಕ್ಟೋಬರ್ 27 ರಂದು ಇದರ ಕೊನೆಯ ಸಂಚಿಕೆ ಪ್ರಸಾರವಾಗಿತ್ತು.
ಹಿಂದಿಯಲ್ಲಿ ದಾಖಲೆ ಬರೆದ ಈ ಧಾರಾವಾಹಿ ಇದೀಗ ಕನ್ನಡಕ್ಕೆ ಬರುತ್ತಿದೆ. ಜೂನ್ 22 ರಿಂದ ರಾತ್ರಿ 9.30ಕ್ಕೆ ಉದಯ ವಾಹಿನಿಯಲ್ಲಿ 'ಸಿಐಡಿ' ಧಾರಾವಾಹಿ ಪ್ರಸಾರ ಕಾಣಲಿದೆ. ಬಿ.ಪಿ. ಸಿಂಗ್ ನಿರ್ದೇಶನದ ಈ ಧಾರಾವಾಹಿಯಲ್ಲಿ ಎಸಿಪಿ ಪ್ರದ್ಯುಮ್ನನ್ ಪಾತ್ರದಲ್ಲಿ ಶಿವಾಜಿ ಹಾಗೂ ಪೊಲೀಸ್ ಅಧಿಕಾರಿಗಳ ಪಾತ್ರದಲ್ಲಿ ಆದಿತ್ಯ ಶ್ರೀವಾಸ್ತವ್ ಮತ್ತು ದಯಾನಂದ್ ಶೆಟ್ಟಿ ಅಭಿನಯಿಸಿದ್ದಾರೆ. 20 ವರ್ಷಗಳ ಕಾಲ ಹಿಂದಿ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ಇವರೆಲ್ಲಾ ಈಗ ಕನ್ನಡಿಗರಿಗೆ ಹೇಗೆ ಮನರಂಜನೆ ನೀಡಲಿದ್ದಾರೆ ಕಾದು ನೋಡಬೇಕು.