ಈ ಮಹಾಮಾರಿ ಕೊರೊನಾದಿಂದ ಒಬ್ಬೊಬ್ಬರಿಗೆ ಒಂದೊಂದು ರೀತಿಯ ನಷ್ಟವುಂಟಾಗಿದೆ. ಕೆಲವರು ಈಗಾಗಲೇ ಕೆಲಸ ಕಳೆದುಕೊಂಡಿದ್ದರೆ, ಮತ್ತೆ ಕೆಲವರು ಕೆಲಸ ಕಳೆದುಕೊಳ್ಳುವ ಭೀತಿಯಿಂದಲೇ ದಿನ ದೂಡುತ್ತಿದ್ದಾರೆ. ಇದು ಚಿತ್ರರಂಗ, ಕಿರುತೆರೆಗೂ ಅನ್ವಯಿಸುತ್ತದೆ.
- " class="align-text-top noRightClick twitterSection" data="
">
ಈ ನಡುವೆ ಬಿಗ್ ಬಾಸ್ ನಂತರ 'ಹಾಡು ಕರ್ನಾಟಕ' ಕಾರ್ಯಕ್ರಮದ ಮೂಲಕ ನಿರೂಪಣಾ ರಂಗಕ್ಕೆ ಕಾಲಿಟ್ಟ ಚಂದನಾ ಅನಂತಕೃಷ್ಣ ಇದೀಗ ಹಾಡು ಕರ್ನಾಟಕವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಲಾಕ್ ಡೌನ್ ಸಡಿಲಿಕೆ ಆದ ನಂತರವೂ ಶೂಟಿಂಗ್ಗೆ ಅನುಮತಿ ದೊರೆಯದ ಕಾರಣ ಚಂದನಾ ಬಹಳ ಬೇಸರದಿಂದ ಇದ್ದಾರಂತೆ. 'ನಾನು ಹಾಡು ಕರ್ನಾಟಕ ಶೋವನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ. ಕಾಸ್ಟ್ಯೂಮ್ , ಆ ಸಿದ್ಧತೆ , ಸ್ಕ್ರಿಪ್ಟ್ ಓದುವಿಕೆ, ಹಾಡು ಕರ್ನಾಟಕ ವೇದಿಕೆಯಲ್ಲಿ ಹಾಸ್ಯ, ಆತ್ಮೀಯರ ಕಾಲೆಳೆಯುವುದು ಇವೆಲ್ಲವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಚಂದನಾ ಬರೆದುಕೊಂಡಿದ್ದಾರೆ.
ಇದರ ಜೊತೆಗೆ ಮತ್ತೊಂದು ಪೋಸ್ಟ್ ಹಾಕಿರುವ ಈಕೆ 'ಹಾಡು ಕರ್ನಾಟಕದ ನಿರ್ದೇಶಕರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಮಾಡುವ ತಪ್ಪುಗಳನ್ನು ಅವರು ಸರಿಪಡಿಸಿ ಹೇಳಿಕೊಡುತ್ತಿದ್ದರು. ಅವರೊಬ್ಬ ಶಕ್ತಿಕೇಂದ್ರವಾಗಿದ್ದರು. ಇದರ ಜೊತೆಗೆ ತೀರ್ಪುಗಾರರ ತಮಾಷೆ ಹಾಗೂ ಅವರನ್ನೂ ಮಿಸ್ ಮಾಡಿಕೊಳ್ಳುವೆ. ಅದರಲ್ಲೂ ಮೊದಲ ದಿನದಿಂದಲೇ ಪ್ರೋತ್ಸಾಹ ನೀಡುತ್ತಿದ್ದ ರಘು ದೀಕ್ಷಿತ್ ಅವರನ್ನು ಕೂಡಾ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.
- " class="align-text-top noRightClick twitterSection" data="
">
'ರಾಜ ರಾಣಿ' ಧಾರಾವಾಹಿಯ ಚುಕ್ಕಿಯಾಗಿ ಕಿರುತೆರೆ ಲೋಕದಲ್ಲಿ ಮನೆ ಮಾತಾದ ಚಂದನಾರನ್ನು ಹೆಚ್ಚು ಜನರು ಗುರುತಿಸಿದ್ದು ಬಿಗ್ ಬಾಸ್ ಸ್ಪರ್ಧಿಯಾದ ಬಳಿಕವೇ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಹಾಡು ಕರ್ನಾಟಕದ ನಿರೂಪಕಿ ಆಗಿ ಚಂದನಾ ಅವರಿಗೆ ಅವಕಾಶ ದೊರೆಯಿತು. ಮೊದಲ ಬಾರಿಗೆ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ ಚಂದನಾಗೆ ರಘು ದೀಕ್ಷಿತ್ ಹಾಗೂ ಪ್ರೇಕ್ಷಕರಿಂದ ಪ್ರಶಂಸೆ ದೊರೆತಿದೆ.