ETV Bharat / sitara

ಮೇಘಾಶೆಟ್ಟಿಯನ್ನು ನೋಡಿ 'ನೋಡು ಶಿವ' ಎಂದು ಹಾಡುತ್ತಿದ್ದಾರೆ ಚಂದನ್ ಶೆಟ್ಟಿ - Monica kalluri production new song

'ಜೊತೆಜೊತೆಯಲಿ' ಖ್ಯಾತಿಯ ಮೇಘಾಶೆಟ್ಟಿ ಹಾಗೂ ಸುಮೀತ್ ಅಭಿನಯದ ಆಲ್ಬಂ ಹಾಡಿಗೆ ಚಂದನ್​ ಶೆಟ್ಟಿ ಸಂಗೀತ ನಿರ್ದೇಶಿಸಿ ಹಾಡನ್ನು ಕೂಡಾ ಹಾಡಿದ್ದಾರೆ. ಇದನ್ನು ಮೋನಿಕಾ ಕಲ್ಲೂರಿ ಎಂಬುವವರು ನಿರ್ಮಿಸುತ್ತಿದ್ದು ಹಾಡು ಬಹಳ ಅದ್ಧೂರಿಯಾಗಿ ಮೂಡಿಬರುತ್ತಿದ್ದು ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ.

Nodu shiva album song
ಚಂದನ್ ಶೆಟ್ಟಿ
author img

By

Published : Nov 28, 2020, 2:11 PM IST

ಸ್ಯಾಂಡಲ್​​​​ವುಡ್​​​ನಲ್ಲಿ ಮ್ಯೂಜಿಕ್ ಆಲ್ಬಂಗಳ ಟ್ರೆಂಡ್ ಶುರುವಾಗಿದೆ.ಇದೀಗ ರ್‍ಯಾಪರ್ ಚಂದನ್ ಶೆಟ್ಟಿ , 'ಜೊತೆ ಜೊತೆಯಲಿ' ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಅವರನ್ನು ನೋಡಿ, 'ನೋಡು ಶಿವ' ಅಂತಿದ್ದಾರೆ‌.ಇದೊಂದು ಮ್ಯೂಸಿಕ್ ಆಲ್ಬಂ ಆಗಿದ್ದು, ಸುಮೀತ್ ಎಂ.ಕೆ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಈ ಹಾಡಿನ ಪರಿಕಲ್ಪನೆ ಮತ್ತು ನಿರ್ದೇಶನ ಮಾಡುವುದರೊಂದಿಗೆ ಹಾಡಿನಲ್ಲಿ ಪ್ರಮುಖ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Nodu shiva album song
ಮೇಘಾ ಶೆಟ್ಟಿ

ಎಎಂಸಿ ಸಿಟಿ ಗ್ರೂಪ್​ ಆಫ್​ ಇನ್ಸಿಟ್ಯೂಷನ್ ಸೇರಿ ಒಟ್ಟು 9 ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿರುವ ಮತ್ತು ಆ ಸಂಸ್ಥೆಗಳ ಉಪಾಧ್ಯಕ್ಷೆ ಆಗಿರುವ ಮೋನಿಕಾ ಕಲ್ಲೂರಿ, ಈ ಆಲ್ಬಂ ಹಾಡಿನ ಮೂಲಕ ಸ್ಯಾಂಡಲ್​ವುಡ್​ಗೆ ಆಗಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಾಡಿನ ಬಗ್ಗೆ ಮಾಹಿತಿ ನೀಡುವ ಮೋನಿಕಾ, ''ಎಷ್ಟೋ ಜನರ ಜೀವನದಲ್ಲಿ ಅಂದುಕೊಂಡಿದ್ದು ಏನೂ ಆಗಿಲ್ಲವಲ್ಲ ಎಂದು ತಮ್ಮನ್ನೇ ತಾವೇ ಶಪಿಸಿಕೊಳ್ಳುತ್ತಿರುತ್ತಾರೆ. ಎಷ್ಟೇ ಶ್ರಮ ಪಟ್ಟರೂ ಅದು ಈಡೇರುವುದಿಲ್ಲ. ಅಂದುಕೊಂಡ ಯಶಸ್ಸು ಸಿಕ್ಕಿರುವುದಿಲ್ಲ. ಇಂತ ಹುಡುಗ ದೇವರ ಹತ್ತಿರ ಹೇಗೆ ಸಂಭಾಷಣೆ ಮಾಡ್ತಾನೆ...?ತನ್ನ ಗೋಳನ್ನು ಹೇಗೆ ಹೇಳಿಕೊಳ್ಳುತ್ತಾನೆ ಎಂಬುದನ್ನು ಫನ್ನಿಯಾಗಿ ಹಾಡಿನಲ್ಲಿ ತೋರಿಸಲಿದ್ದೇವೆ'' ಎಂದಿದ್ದಾರೆ. ಈ ಹಾಡಿನ ನಿರ್ಮಾಣದ ಮುಖ್ಯ ಉದ್ದೇಶವನ್ನೂ ನಿರ್ಮಾಪಕಿ ಮೋನಿಕಾ ವಿವರಿಸಿದ್ದಾರೆ. ಕನ್ನಡದಲ್ಲಿ ಇಲ್ಲಿಯವರೆಗೂ ಯಾರೂ ಮಾಡದ ಅದ್ಧೂರಿಯಾದ ಹಾಡನ್ನು ನಾವು ಚಿತ್ರೀಕರಿಸಲಿದ್ದೇವೆ. ಆಲ್ಬಂ ಹಾಡಿನ ವಿಚಾರದಲ್ಲಿ ಕನ್ನಡದಲ್ಲಿ ಈ ಹಿಂದೆಂದೂ ಆಗದ ಒಂದು ಹೊಸತನವನ್ನು ಈ ಹಾಡಿನಲ್ಲಿ ತೋರಿಸಲಿದ್ದೇವೆ. ಅದ್ಧೂರಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಹಾಡು, ಪರಭಾಷಿಕರಿಗೂ ವಿಶೇಷ ಎನಿಸಲಿದೆ. ಸುಮಾರು 30ಲಕ್ಷ ರೂಪಾಯಿ ಬಜೆಟ್​​​​​​​​​​​​​​ನಲ್ಲಿ ಈ ಹಾಡು ಸಿದ್ದವಾಗಲಿದೆ ಎನ್ನುತ್ತಾರೆ ಮೋನಿಕಾ.

Nodu shiva album song
'ನೋಡು ಶಿವ' ಆಲ್ಬಂ ತಂಡ

ವಿದೇಶದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಿರುವ ಮೋನಿಕಾಗೆ ಮೊದಲಿಂದಲೂ ಕಲೆಯತ್ತ ಆಸಕ್ತಿ. ''ಜಾಗೃತಿ ಮೂಡಿಸುವ ಕೆಲಸವನ್ನು ಏಕಕಾಲದಲ್ಲಿ ದೊಡ್ಡ ಸಮುದಾಯಕ್ಕೆ ತೋರಿಸುವ ಆಸಕ್ತಿ ಸಿನಿಮಾ ಕ್ಷೇತ್ರಕ್ಕಿದೆ. ಆ ಒಂದು ಕಾರಣಕ್ಕೆ ಸಿನಿಮಾ ಕ್ಷೇತ್ರವನ್ನು ಆಯ್ದುಕೊಂಡಿದ್ದೇನೆ. ಮುಂದಿನ ವರ್ಷ ಹೊಸ ಸಿನಿಮಾ ನಿರ್ಮಾಣ ಮಾಡುವ ಯೋಚನೆಯೂ ಇದೆ'' ಎಂದಿದ್ದಾರೆ. ಈ ಹಾಡಿನ ಸಾಹಿತ್ಯ ಕೇಳಿ ಇಷ್ಟಪಟ್ಟು ಕೇವಲ ಎರಡೇ ತಾಸಿನಲ್ಲಿ ಚಂದನ್​ ಶೆಟ್ಟಿ ಕಂಪೋಸ್ ಮಾಡಿ, ಧ್ವನಿಯನ್ನೂ ನೀಡಿದ್ದಾರೆ. ಕಳೆದೊಂದು ತಿಂಗಳಿಂದ ಈ ಹಾಡಿನ ತಯಾರಿ ಕೆಲಸ ಶುರುವಾಗಿದ್ದು, 200 ಮಂದಿ ಈ ಹಾಡಿಗೆ ಕೆಲಸ ಮಾಡುತ್ತಿದ್ದಾರೆ. 60 ವೃತ್ತಿಪರ ಡಾನ್ಸರ್​ಗಳು ಹೆಜ್ಜೆ ಹಾಕಲಿದ್ದಾರೆ. ಮೂರು ದಿನಗಳಲ್ಲಿ ಎಎಂಸಿ ಕಾಲೇಜು ಕ್ಯಾಂಪಸ್​ನಲ್ಲಿಯೇ ಶೂಟಿಂಗ್​ ಮುಗಿಸಿಕೊಳ್ಳುವ ಪ್ಲಾನ್​ ತಂಡಕ್ಕಿದ್ದು ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಡಿಸೆಂಬರ್ ಅಂತ್ಯದಲ್ಲಿ ಆನಂದ್ ಆಡಿಯೋದಲ್ಲಿ ಈ ಹಾಡು ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.