ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಒಬ್ಬರು. ದೊಡ್ಡ ಸ್ಟಾರ್ ಆದರೂ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ ದರ್ಶನ್ ಆ ಕಾರಣದಿಂದಲೇ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ.
ಬಹಳಷ್ಟು ಸಿನಿಮಾ ಸ್ನೇಹಿತರ ಬೆಳವಣಿಗೆಗೆ ಕಾರಣ ಆಗಿರುವ ದರ್ಶನ್ ಈಗಷ್ಟೇ ನಟನೆಗೆ ಕಾಲಿಡುವವರಿಗೆ ನಿಜಕ್ಕೂ ಸ್ಫೂರ್ತಿಯಾಗಿದ್ದಾರೆ. ಖಾಸಗಿ ಚಾನೆಲ್ವೊಂದರಲ್ಲಿ ನಡೆಯುತ್ತಿರುವ ಕಾಮಿಡಿ ಶೋನಲ್ಲಿ ಮೊದಲ ಬಾರಿಗೆ ದರ್ಶನ್ ಸುಮಾರು 20ನಿಮಿಷಗಳ ಕಾಲ ದರ್ಶನ ಕೊಡುತ್ತಿದ್ದಾರೆ. ಈ ಶೋನಲ್ಲಿ ಭಾಗವಹಿಸಲು ಪ್ರಮುಖ ಕಾರಣ ಆ ವಾಹಿನಿಯಲ್ಲಿ ಪ್ರಸಾರವಾದ 'ಕುರುಕ್ಷೇತ್ರ' ಸಿನಿಮಾಗೆ ಹೆಚ್ಚು ರೇಟಿಂಗ್ ದೊರೆತಿರುವುದು. ಅಲ್ಲದೆ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ದರ್ಶನ್ 'ರಾಬರ್ಟ್' ಚಿತ್ರದ ಡಬ್ಬಿಂಗ್ನಲ್ಲಿ ಬ್ಯುಸಿಯಿದ್ದಾರೆ. ಅದೇ ಸ್ಟುಡಿಯೋ ಪಕ್ಕದಲ್ಲಿ ನವರಸ ನಾಯಕ ಜಗ್ಗೇಶ್, ರಕ್ಷಿತಾ ತೀರ್ಪುಗಾರರಾಗಿ ಭಾಗವಹಿಸುತ್ತಿರುವ ಕಾಮಿಡಿ ಶೋ ಶೂಟಿಂಗ್ ಕೂಡಾ ಜರುತ್ತಿದೆ. ಹತ್ತಿರದಲ್ಲೇ ಇದ್ದಿದ್ದರಿಂದ ದರ್ಶನ್ ಈ ಕಾರ್ಯಕ್ರಮಕ್ಕೆ ಬಂದು ಹೋಗಿದ್ದಾರೆ.
- " class="align-text-top noRightClick twitterSection" data="
">
ಕಾಮಿಡಿ ಶೋನಲ್ಲಿ ಭಾಗವಹಿಸುತ್ತಿರುವ ಬಹುತೇಕ ಕಲಾವಿದರು ದರ್ಶನ್ ಅಭಿಮಾನಿಗಳು. ಬಹಳ ದಿನಗಳ ಹಿಂದೆ ನಟಿ ರಕ್ಷಿತಾ ಕೂಡಾ ದರ್ಶನ್ ಅವರನ್ನು ಈ ಕಾರ್ಯಕ್ರಮಕ್ಕೆ ಕರೆತರುತ್ತೇನೆ ಎಂದು ಹೇಳಿದ್ದರಂತೆ. ಜಗ್ಗೇಶ್ ಹಾಗೂ ರಕ್ಷಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಜೊತೆಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕಾರ್ಯಕ್ರಮದ ಕಲಾವಿದರು ಕೂಡಾ ತಮ್ಮ ಮೆಚ್ಚಿನ ನಟನನ್ನು ಹತ್ತಿರದಿಂದ ನೋಡಿದ ಖುಷಿಯಲ್ಲಿದ್ದಾರೆ.