ETV Bharat / sitara

ಶಮಂತ್​ಗೆ ಸಿಕ್ತು ಬಂಪರ್​ ಆಫರ್​: 2ನೇ ವಾರವೂ ಕ್ಯಾಪ್ಟನ್ ಆಗಿ ಮುಂದುವರಿದ ಬ್ರೋ ಗೌಡ - ಶಮಂತ್​ಗೆ ಸಿಕ್ತು ಬಂಪರ್​ ಆಫರ್

ಬಿಗ್ ಬಾಸ್ ಎಂಟನೇ ಆವೃತ್ತಿಯ ಮೊದಲ ನಾಯಕ ಎಂದು ಗುರುತಿಸಿಕೊಂಡ ಶಮಂತ್, ಯಾವುದೇ ಅಡತಡೆ ಇಲ್ಲದೇ ಎರಡನೇ ವಾರಕ್ಕೆ ಕಾಲಿಟ್ಟಿದ್ದರು. ಇದೀಗ ಶಮಂತ್ ಅವರನ್ನು ಎರಡನೇ ವಾರವೂ ಸಹ ಕ್ಯಾಪ್ಟನ್ ಆಗಿ ಮುಂದುವರಿಸಲು ಮನೆಯವರು ತೀರ್ಮಾನಿಸಿದ್ದಾರೆ.

ಶಮಂತ್
ಶಮಂತ್
author img

By

Published : Mar 5, 2021, 11:09 AM IST

ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಕ್ಯಾಪ್ಟನ್ ಆಗಿದ್ದ ಶಮಂತ್ (ಬ್ರೋ ಗೌಡ) ಅವರು ನಾಮಿನೇಷನ್‌ನಿಂದ ಸೇಫ್ ಆಗಿದ್ದರು. ಇದೀಗ ಇನ್ನೊಂದು ಬಂಪರ್ ಅವಕಾಶ ಕೂಡ ಸಿಕ್ಕಿದ್ದು, ಈ ವಾರ ಕೂಡ ನಾಮಿನೇಷನ್‌ನಿಂದ ಸೇಫ್ ಆಗಿದ್ದಾರೆ.

ಎಂಟನೇ ಆವೃತ್ತಿಯ ಮೊದಲ ನಾಯಕ ಎಂದು ಗುರುತಿಸಿಕೊಂಡ ಶಮಂತ್, ಯಾವುದೇ ಅಡತಡೆ ಇಲ್ಲದೇ ಎರಡನೇ ವಾರಕ್ಕೆ ಕಾಲಿಟ್ಟಿದ್ದರು. ಇದೀಗ ಶಮಂತ್ ಅವರನ್ನು ಎರಡನೇ ವಾರವೂ ಸಹ ಕ್ಯಾಪ್ಟನ್ ಆಗಿ ಮುಂದುವರಿಸಲು ಮನೆಯವರು ತೀರ್ಮಾನಿಸಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳು
ಬಿಗ್ ಬಾಸ್ ಸ್ಪರ್ಧಿಗಳು

ಶಮಂತ್ ಎರಡನೇ ವಾರವೂ ಕ್ಯಾಪ್ಟನ್ ಆಗಿ ಮುಂದುವರಿಯಬೇಕಾ? ಎಂದು ಬಿಗ್ ಬಾಸ್ ಕೇಳಿದ್ದರು. ಪ್ರತಿಯೊಬ್ಬ ಸ್ಪರ್ಧಿಯೂ ಉತ್ತರಿಸಬೇಕು, ಹೆಚ್ಚು ಮತಗಳು ಬಂದರೆ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ಸೂಚಿಸಲಾಯಿತು. ಈ ವೇಳೆ, ಎರಡನೇ ವಾರ ಸಹ ಕ್ಯಾಪ್ಟನ್ ಆಗಿ ಬ್ರೋ ಗೌಡ ಮುಂದುವರಿಯಲಿ ಎಂದು 9 ಮಂದಿ ವೋಟ್ ಮಾಡಿದರು. ಕ್ಯಾಪ್ಟನ್ ಆಗುವುದು ಬೇಡ ಎಂದು ಏಳು ಮಂದಿ ಮತ ಚಲಾಯಿಸಿದರು.

ಶಮಂತ್ ಪರವಾಗಿ ನಿಧಿ ಸುಬ್ಬಯ್ಯ, ಗೀತಾ ಭಟ್, ಚಂದ್ರಕಲಾ ಮೋಹನ್, ಮಂಜು ಪಾವಗಡ, ಶಂಕರ್ ಅಶ್ವತ್ಥ್​, ನಿರ್ಮಲಾ ಚೆನ್ನಪ್ಪ, ವೈಷ್ಣವಿ ಗೌಡ, ಅರವಿಂದ್, ಧನುಶ್ರೀ ವೋಟ್ ಮಾಡಿದರು. ಶಮಂತ್ ನಾಯಕನಾಗುವುದು ಬೇಡ ಎಂದು ಪ್ರಶಾಂತ್ ಸಂಬರಗಿ, ರಾಜೀವ್, ದಿವ್ಯಾ ಸುರೇಶ್, ಶುಭ ಪೂಂಜಾ, ದಿವ್ಯ ಉರುಡಗ, ರಘು ಗೌಡ, ವಿಶ್ವನಾಥ್ ಮತ ಹಾಕಿದರು.

ಮನೆಯಿಂದ ಈ ವಾರ ಯಾರು ಹೊಗ್ತಾರೆ?

ಸೋಮವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮಂಜು ಪಾವಗಡ, ಪ್ರಶಾಂತ್ ಸಂಬರ್ಗಿ, ಧನುಶ್ರೀ, ನಿರ್ಮಲಾ ಚೆನ್ನಪ್ಪ ಹಾಗೂ ನಿಧಿ ಸುಬ್ಬಯ್ಯ ನಾಮಿನೇಟ್ ಆಗಿದ್ದರು. ಆದ್ರೆ, ಬಿಗ್ ಬಾಸ್ ನೀಡಿದ ಟ್ವಿಸ್ಟ್ ಬಳಿಕ ನಾಮಿನೇಟ್ ಆದ ಸ್ಪರ್ಧಿಗಳು ಬದಲಾಗಿದ್ದಾರೆ. ಗುರುವಾರದ ಎಪಿಸೋಡ್‌ನ ಪ್ರಕಾರ ಈ ವಾರ ದೊಡ್ಮನೆಯಿಂದ ಹೊರಹೋಗಲು ಧನುಶ್ರೀ, ರಘು ಗೌಡ, ವಿಶ್ವನಾಥ್, ಶುಭ ಪೂಂಜಾ ನಾಮಿನೇಟ್ ಆಗಿದ್ದಾರೆ.

ಟ್ವಿಸ್ಟ್ ನೀಡುವ ಮೂಲಕ ನಾಮಿನೇಷನ್ ಪ್ರಕ್ರಿಯೆಯನ್ನು ನಡೆಸಿದ ಬಿಗ್ ಬಾಸ್, ಅಂತಿಮವಾಗಿ ಈ ವಾರ ಮನೆಯಿಂದ ಯಾರು ಹೊರಗೆ ಹೋಗುತ್ತಾರೆ ಎಂದು ಶನಿವಾರ ಗೊತ್ತಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.