ETV Bharat / sitara

ಕೆಲವೇ ದಿನಗಳಲ್ಲಿ ಮುಗಿಯಲಿದೆ ಕಿರುತೆರೆಯ ಖ್ಯಾತ ಧಾರಾವಾಹಿ - Bramhagantu last episodes

ಭರತ್ ಬೋಪಣ್ಣ ಹಾಗೂ ಗೀತಾ ಭಾರತಿ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ 'ಬ್ರಹ್ಮಗಂಟು' ಧಾರಾವಾಹಿ ಕೆಲವೇ ದಿನಗಳಲ್ಲಿ ಮುಗಿಯಲಿದೆ. ಧಾರಾವಾಹಿ 3 ವರ್ಷಗಳಿಂದ ಪ್ರಸಾರವಾಗುತ್ತಿದ್ದು ಇನ್ನು ಮುಗಿಯಲಿದೆ ಎಂದು ತಿಳಿದ ಕಿರುತೆರೆ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.

Bramhagantu
'ಬ್ರಹ್ಮಗಂಟು'
author img

By

Published : Feb 19, 2021, 2:18 PM IST

ಶ್ರುತಿ ನಾಯ್ಡು ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಬ್ರಹ್ಮಗಂಟು' ಇತ್ತೀಚೆಗಷ್ಟೇ ಯಶಸ್ವಿ ಮೂರು ವರ್ಷ ಪೂರೈಸಿತ್ತು. ವಿಭಿನ್ನ ಕಥಾ ಹಂದರವುಳ್ಳ ಬ್ರಹ್ಮಗಂಟು ಧಾರಾವಾಹಿ ಕಳೆದ ಮೂರು ವರ್ಷಗಳಿಂದ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಇದೀಗ ಈ ಧಾರಾವಾಹಿ ಮುಗಿಯುವ ಹಂತದಲ್ಲಿದೆ.

Bramhagantu
'ಬ್ರಹ್ಮಗಂಟು' ತಂಡ

ಈಗಾಗಲೇ 'ಬ್ರಹ್ಮಗಂಟು' ಧಾರಾವಾಹಿ ಕೊನೆಯ ಶೂಟಿಂಗ್ ಮುಗಿಸಿದ್ದು ಕ್ಲೈಮ್ಯಾಕ್ಸ್ ಸಂಚಿಕೆಗಳು ಸದ್ಯದಲ್ಲೇ ಪ್ರಸಾರವಾಗಲಿದೆ. ಪರೋಪಕಾರದ ಮನೋಭಾವ ಹೊಂದಿರುವ ಹುಡುಗಿ ಗೀತಾ ಆಲಿಯಾಸ್ ಗುಂಡಮ್ಮ ಯಾರೇ ಕಷ್ಟ ಎಂದು ಬರಲಿ, ಸಹಾಯ ಮಾಡುತ್ತಾಳೆ. ತನ್ನಿಂದ ಸಾಧ್ಯವಾದಷ್ಟು ಪರರಿಗೆ ಉಪಕಾರ ಮಾಡುವ ಚೆಲುವೆಗೆ ಜೀವನದಲ್ಲಿ ಇದ್ದದ್ದು ಒಂದೇ ಕನಸು. ತನ್ನ ಕೈ ಹಿಡಿಯುವ ಹುಡುಗ ಸುಂದರನಾಗಿರಬೇಕು ಎಂಬುದೇ ಆಕೆಗಿದ್ದ ಕನಸು. ಆಕೆಯ ಕನಸೇನೋಈಡೇರಿತು. ಆದರೆ ಅವಳನ್ನು ಕೈ ಹಿಡಿದ ಲಕ್ಕಿಗೆ ಅವಳೆಂದರೆ ಅಷ್ಟಕಷ್ಟೆ. ವಿರುದ್ಧ ದಿಕ್ಕಿನಲ್ಲಿ ಯೋಚಿಸುವ ಗಂಡು-ಹೆಣ್ಣು ಜೊತೆಯಾದಾಗ ಏನಾಗುತ್ತದೆ, ನಾಯಕ ಲಕ್ಕಿಗೆ ಗುಂಡಮ್ಮನ ಮೇಲೆ ಪ್ರೀತಿ ಮೂಡಿದ್ದು ಹೇಗೆ, ರೂಪವೇ ಮುಖ್ಯ ಎಂದು ಭಾವಿಸಿದ್ದ ಲಕ್ಕಿ ಮಡದಿ ಗೀತಾಳನ್ನು ಸ್ವೀಕರಿಸಿದ್ದು ಹೇಗೆ ಎಂಬ ವಿಭಿನ್ನ ಕಥಾ ಹಂದರದ 'ಬ್ರಹ್ಮಗಂಟು' ಧಾರಾವಾಹಿ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ.

Bramhagantu
ಸ್ವಾತಿ, ಗೀತಾ ಭಾರತಿ ಭಟ್

ಇದನ್ನೂ ಓದಿ: ಖಾಸಗಿ ವೆಬ್​​ಸೈಟ್​​ನಲ್ಲಿ ಲೀಕ್ ಆಯ್ತು ಮೋಹನ್​ ಲಾಲ್ ಅಭಿನಯದ 'ದೃಶ್ಯಂ-2'

ಹಿಂದಿಯ 'ಬಡೋ ಬಹು' ಧಾರಾವಾಹಿಯ ರೀಮೇಕ್ ಆಗಿರುವ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕಿ ಗುಂಡಮ್ಮ ಅಲಿಯಾಸ್ ಗೀತಾ ಆಗಿ ಗೀತಾ ಭಾರತಿ ಭಟ್ ನಟಿಸಿದ್ದಾರೆ. ಇನ್ನು ನಾಯಕ ಲಕ್ಕಿಯಾಗಿ ಭರತ್ ಬೋಪಣ್ಣ ಕಾಣಿಸಿಕೊಂಡಿದ್ದಾರೆ‌. ಟಿ.ಎಸ್​. ನಾಗಾಭರಣ, ಗಾಯತ್ರಿ ಪ್ರಭಾಕರ್ , ವನಿತಾ ವಾಸು, ಶೋಭಿತಾ ಶಿವಣ್ಣ , ಪ್ರಥಮ ಪ್ರಸಾದ್ ಮುಂತಾದವರು ನಟಿಸಿದ್ದಾರೆ. ಇತ್ತೀಚೆಗೆ ಸಂಜನಾ ಚಿದಾನಂದ್ ಹಾಗೂ ರಾಮ್ ಪವನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.