ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ನಾಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿತ್ತು ಕನ್ಫೆಷನ್ ರೂಮಿನಲ್ಲಿ ನಾಮಿನೇಷನ್ ಮಾಡುವ ಪ್ರಕ್ರಿಯೆಗೆ ಬಿಗ್ ಬಾಸ್ ಯೋಜನೆ ರೂಪಿಸಿದ್ದರು.
ನಿಮಗೆ 5 ಅಂಕ ನೀಡಲಾಗುತ್ತಿದ್ದು ಅದರಲ್ಲಿ ಇಬ್ಬರಿಗೆ ಹಂಚಬೇಕು. ಅದರ ಪ್ರಕಾರ 5 ಅಂಕಗಳನ್ನು ಒಬ್ಬರಿಗೆ ಗರಿಷ್ಠ 4, ಒಬ್ಬರಿಗೆ 1 ಕನಿಷ್ಠ ಆದರೂ ನೀಡಬೇಕು ಎಂದು ಬಿಗ್ ಬಾಸ್ ಆದೇಶಿಸಿದ್ದರು.
ಈ ವಾರದ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ಕೂಡ ವಿಶೇಷವಾಗಿತ್ತು. ಹೆಚ್ಚು ಕಲ್ಲಂಗಡಿ ಹಣ್ಣು ತಿಂದ ಕುರಿ ಪ್ರತಾಪ್ ಈ ವಾರದ ಮನೆಯ ಕ್ಯಾಪ್ಟನ್ ಆದರು. ಕುರಿ ಪ್ರತಾಪ್ ಶೈನ್ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. ಜೊತೆಗೆ 19 ಅಂಕ ಪಡೆದ ಚಂದನ್ ಆಚಾರ್, 16 ಪಾಯಿಂಟ್ಸ್ ಪಡೆದ ಪೃಥ್ವಿ, 8 ಅಂಕ ಪಡೆದ ಭೂಮಿ, 5 ಅಂಕ ಪಡೆದ ಕಿಶನ್ ನಾಮಿನೇಟ್ ಆಗಿದ್ದಾರೆ.
ಕಿಶನ್ ರಕ್ಷಾ ಹಳೆ ಪ್ರೇಮಿಗಳಾಗಿ ವರ್ತಿಸುವಂತೆ ಬಿಗ್ ಬಾಸ್ ನೀಡಿದೆ ಟಾಸ್ಕ್:
ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಲೇಡಿಯೊಬ್ಬರು ಬರಲಿದ್ದು ಅವರನ್ನು ನಿಮ್ಮ ಲವರ್ ಎಂದು ಮನೆಯವರಿಗೆಲ್ಲ ನಂಬಿಸಬೇಕು, ಸುದೀಪ್ ಬಂದು ಹೇಳುವವರೆಗೂ ಸಿಕ್ರೆಟ್ ಟಾಸ್ಕ್ ಮುಂದುವರಿಯಲಿದೆ ಎಂದು ಬಿಗ್ ಬಾಸ್ ಕಿಶನ್ ಅವರನ್ನು ಕನ್ಫೆಷನ್ ರೂಮಿಗೆ ಕರೆದು ಆದೇಶಿಸಿದ್ದರು.
ಬಳಿಕ ಬಿಗ್ ಬಾಸ್ ಮನೆಗೆ ಎರಡನೇ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಸಿನಿಮಾ ನಟಿ ರಕ್ಷಾ ಆಗಮಿಸಿ ಎಲ್ಲರಲ್ಲೂ ಕುತೂಹಲ ಉಂಟು ಮಾಡಿದ್ದಾರೆ. ಮನೆಗೆ ಪ್ರವೇಶಿಸುತ್ತಿದ್ದಂತೆ ರಕ್ಷಾಗೆ ಬಿಗ್ ಬಾಸ್ ಟಾಸ್ಕ್ ನೀಡಿದೆ. ಕಿಶನ್ ಹಾಗೂ ರಕ್ಷಾ ಒಂದು ಕಾಲದ ಪ್ರೇಮಿಗಳಂತೆ ಯಾರಿಗೂ ಅನುಮಾನ ಬರದೇ ವರ್ತಿಸಬೇಕೆಂದು ಆದೇಶಿಸಿದ್ದಾರೆ.